ಎಂದು ಕಾಂಬೆನೊ ನಂದಗೋಪನ

ರಚನೆ: ಶ್ಯಾಮಸುಂದರ ವಿಠಲದಾಸರು


ಎಂದು ಕಾಂಬೆನೊ ನಂದಗೋಪನ
ಕಂದ ಶ್ರೀ ಗೋವಿಂದನ
ಮಂದರಾಚಲಧರ ಯದುಕುಲ
ಚಂದ್ರ ಗುಣ ಗಣ ಸಾಂಧ್ರನ


ವಿಜಯ ಸೂತನ ವಿಶ್ವ ಪಾಲನ
ಭುಜಗ ವರ ಪಯ್ಯಂಕನ
ರಜನೀಚರರಳಿದ ಜನಕನ
ತ್ರಿಜಗಪತಿ ದ್ವಿಜ ಗಮನನ


ಭಾಮೆ ರುಕ್ಮಿಣಿ ರಮಣ ರಂಗನ
ಸಾಮಗಾನ ವಿಲೋಲನ
ಶೈಲ ಬೆರಳಲಿ ತಾಳಿ ಗೋಕುಲ
ಪಾಲಿಸಿದ ಪರಮಾತ್ಮನ


ಪಾಲದಧಿ ನವನೀತ ಚೋರನ
ಬಾಲಕೃಷ್ಣ ಗೋಪಾಲನ
ಶ್ರೀಮದಾನಂದ ಮುನಿ ಕರಾರ್ಚಿತ
ಶ್ಯಾಮಸುಂದರ ವಿಠಲನ