ಹದಿನಾರನೆಯ ಸಂಧಿ
ಸಂಪಾದಿಸಿಪದ್ಯ :-:ಸೂಚನೆ:
ಸಂಪಾದಿಸಿಸೂಚನೆ: ಸ್ತ್ರೀರಾಜ್ಯದೊಳ್ ಪ್ರಮೀಳೆಯನೊಡಂಬಡಿಸಿ ವಿ | ಸ್ತಾರಮಾಗಿರ್ದ ಬಹುದೇಶಂಗಳಂ ತೊಳಲಿ | ಘೋರಭೀಷಣದೈತ್ಯನಂ ಮುರಿದು ಫಲುಗುಣಂ ಮಣಿಪುರಕೆ ನಡೆ ತಂದನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧:
ಸಂಪಾದಿಸಿಕೇಳವನಿಪಾಲಕುಲತಿಲಕ ತುರಗದ ಕೂಡೆ | ಪಾಳಯಂ ತೆರಳಿ ಬಂದಲ್ಲಿ ಬಿಟ್ಟರ್ಜುನಂ | ಪೇಳಿದಂತಿರುತಿರ್ದುದನ್ನೆಗಂ ಕುದುರೆ ತನ್ನಿಚ್ಛೆಯಿಂದೈದೆ ಕಂಡು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨:
ಸಂಪಾದಿಸಿಶಶಿಕುಲೋದ್ಭವ ಯುಧಿಷ್ಠಿರನೃಪನ ಕುದರೆ ಗಡ | ವಸುಧೆಯೊಳಿದಂ ಬಲ್ಲಿದರ್ ಕಟ್ಟಬೇಕು ಗಡ | ದೆಸೆಯೊಳಿದಕರ್ಜುನನ ಕಾಪಿನಾರೈಕೆ ಗಡ ಪಿಡಿದೊಡೆ ಬಿಡಿಸುವರ್ಗಡ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩:
ಸಂಪಾದಿಸಿಕಣ್ಣ ಹೊಳಪಿನ ಚಪಲೆಯರ ಕುದುರೆ ಲಕ್ಷದಿಂ | ತಿಣ್ಣಮೊಲೆಯಲಸಗಮನೆಯರಾನೆ ಲಕ್ಷದಿಂ | ಹುಣ್ಣಿಮೆಯ ಶಶಿಯಂತೆಸೆವ ಬಟ್ಟಮೊಗದ ನೀರೆಯರ ರಥ ಲಕ್ಷದಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪:
ಸಂಪಾದಿಸಿತೆಗೆದುಟ್ಟ ಚಲ್ಲಣದ ಬಿಗಿದ ಮೊಲೆಗಟ್ಟುಗಳ | ಪೊಗರುಗುವ ವೇಣಿಗಳ ಮೃಗಮದದ ಬೊಟ್ಟುಗಳ | ತಿಗುರಿದನುಲೇಪನದ ಮಗಮಗಿಪ ಕಂಪುಗಳ ಝಗಝಗಿಸುವಾಭರಣದ |
[ಆವರಣದಲ್ಲಿ ಅರ್ಥ];=
|
ಪದ್ಯ :-:೫:
ಸಂಪಾದಿಸಿಮಂದಗತಿಯಿಂದೆ ನಳಿತೋಳಿಂದೆ ಕುಂಭಕುಚ | ದಿಂದೆ ಜೌವನದ ಮದದಿಂದೆ ಭದ್ರಾಕಾರ | ದಿಂದೆಸೆವ ಕನಕಮಣಿಬಂಧ ನಿಗಳಂಗಳಿಂ ಭೃಂಗಾಳಕಂಗಳಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೬:
ಸಂಪಾದಿಸಿಸ್ಫುರದುತ್ಕಟಾಕ್ಷದಿಂ ಲಲಿತೋರುಯುಗದಿಂದೆ | ಗುರುಪಯೋಧರವಿಜಿತ ಚಕ್ರಶೋಭಿತದಿಂದೆ | ಪರಿಲುಳಿತ ಚಾಪಲತೆಯಿಂ ಪ್ರಣಯ ಕಲಹದೊಳಗದಲ್ದಿನಿಯರಂ ಜಯಿಸುವ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೭:
ಸಂಪಾದಿಸಿಚಂಚಲಾಕ್ಷಿಯರ ತಳತಳಿಪ ಕಡೆಗಣ್ಣ ಕುಡಿ | ಮಿಂಚವರಡರ್ದ ತೇಜಿಗಳ ದೂವಾಳಿಯಂ | ಮುಮಚಿದುವು ನಳಿತೋಳ್ಗಳಿಂ ಜಡಿದು ಝಳಪಿಸುವ ಕೈದುಗಳ ದೀಧಿತಿಗಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೮:
ಸಂಪಾದಿಸಿಲೀಲೆ ಮಿಗೆ ಪೆಣ್ದಳಂ ಬಂದು ವಿಜಯನ ಪಡೆಯ | ಮೇಲೆ ಬಿದ್ದುದು ಕರಿ ತುರಗ ರಥ ಪದಾತಿಗಳ | ಸಾಲೆಸೆಯೆ ಸಂದಣಿಸಿ ನಾನಾಪ್ರಕಾರದಿಂ ಕೈದುಗಳ ಮಳೆಗೆರಯುತೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೯:
ಸಂಪಾದಿಸಿಬಳಿಕಾ ಪ್ರಮೀಳೆ ಪಾರ್ಥನ ಮೋಹರಕೆ ತನ್ನ | ದಳಸಹಿತ ನಡೆತಂದು ಕಂಡಳುನ್ನತ ಕಪಿಯ | ಪಳವಿಗೆಯ ಮಣಿರಥದೊಳೊಪ್ಪುವ ಕಿರೀಟಿಯಂ ನಗುತೆ ಮಾತಾಡಿಸಿದಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೦:
ಸಂಪಾದಿಸಿನಾರಿಯೊಳ್ ಕಾಳಗವೆ ತನಗಕಟ ಕಡುಗಿ ಮದ | ನಾರಿಯೊಳ್ ಕಾದಿದುಗ್ಗಡದ ನಿಜಕಾರ್ಮುಕದ | ನಾರಿಯೊಳ್ ಕಣೆಯಂ ತುಡುವೆನೆಂತೊ ಶಿವಶಿವಾ ಪರ್ಯಂಕಮಂ ಸಾರ್ದೊಡೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೧:
ಸಂಪಾದಿಸಿಪರಿಯಂಕಮಂ ಸಾರ್ದೊಡಂಗಜಾಹವದೊಳಗ | ಪರಿಮಿತಸುಖಾವಹದ ಸುರತ ತಂತ್ರದ ಕಲೆಯ | ಪರಿವಿಡಿಗಳಂ ತೋರಿಸುವೆನೀಗಳೆನ್ನಂ ವರಿಸುವುದಲ್ಲದೊಡೆ ನಿನ್ನ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೨:
ಸಂಪಾದಿಸಿವಿಷಯೋಪಭೋಗಮಂ ಬಯಸಿ ನಿನಗಾನೊಲಿಯೆ | ವಿಷಯೋಗಮಾಗದಿರ್ದಪುದೆ ಪೇಳ್ ಪುರುಷರೀ | ವಿಷಯೋದ್ಭವ ಸ್ತ್ರೀಯರಂ ಬೆರಸಿ ಬಾಳ್ದಪರೆ ಸಾಕದಂತಿರಲಿ ನಿನಗೆ || |
[ಆವರಣದಲ್ಲಿ ಅರ್ಥ];=
ವೃಷಭಾಯಿತದೊಳು ಆಂತ ಭಟರೊಳ್ ಪಳಂಚುವ ಪರುಷಭಾಷಿತವನು ಅಬಲೆ ನಿನ್ನೊಳಾಡುವುದು ಪೌರುಷಭಾವಮಲ್ಲ=[ಸಾಕು ಅದು ಹಾಗಿರಲಿ, ನಿನಗೆ ಹೋರಿಕಾಳಗದಲ್ಲಿ ಬಳಸುವ ಭಾಷೆಯನ್ನು ಹೊಂದಿರುವ ಭಟರು ಉಪಯೋಗಿಸುವ ವೀರ ನುಡಿಗಟ್ಟನ್ನು ಅಬಲೆಯಾದ ನಿನ್ನಜೊತೆ ಆಡುವುದು ಪೌರುಷ ಗಣವಲ್ಲ]; ಬಿಡು ವಾಜಿಯಂ ಪೆಣ್ಗೊಲೆಗೆ ಅಳುಕುವೆನೆಂದಂ ಪಾರ್ಥನು =[ಕುದುರೆಯನ್ನು ಬಿಡು; ಹೆಣ್ಣಿನ ಕೊಲೆಗೆ ಅಳುಕುವೆನು / ಹಿಂದೆಗೆಯುವೆನು ಎಂದನು ಪಾರ್ಥ].
|
ಪದ್ಯ :-:೧೩:
ಸಂಪಾದಿಸಿಕಾದಲಂಬಿಂದೆ ಕೊಂದಪೆನೀಗಳಲ್ಲದೊಡೆ | ಕಾದಲಂ ನೀನಾಗೆ ಸುರತಮೋಹಕೆ ಪ | ಕ್ಕಾದಲಂಪಿನ ಸೌಖ್ಯಮಂ ತಳೆದ ಬಳಿಕಹುದು ಮೃತಿ ತಪ್ಪದೆಂತುಮಳಿವು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೪:
ಸಂಪಾದಿಸಿಹಿಂದೆ ಶೂರ್ಪಣಖಿ ಲಕ್ಷ್ಮಣನನಂಡಲೆದು ಪಡೆ | ದಂದಮಂ ನೆನೆದಿವಳನೀಕ್ಷಣವೆ ಭಂಗಿಸುವೆ | ನೆಂದು ಸಮ್ಮೋಹನಾಸ್ತ್ರವನುಗಿದು ಗಾಂಡೀವದೊಳ್ ಪೂಡಿ ಪಾರ್ಥನಿಸಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೫:
ಸಂಪಾದಿಸಿಆ ಸಮಯದೊಳ್ ನುಡಿದುದಶರೀರವಾಕ್ಯಮಾ | ಕಾಶದೊಳ್ ಬೇಡಬೇಡೆಲೆ ಪಾರ್ಥ ಹೆಂಗೊಲೆಗೆ | ಹೇಸದೆ ಮಹಾಸ್ತ್ರಮಂ ತುಡುವೆ ನೀಂ ಮುಳಿದಯುತವರ್ಷಮಿನ್ನಿವಳಕೂಡೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೬:
ಸಂಪಾದಿಸಿಆಲಿಸಿದನಶರೀರವಾಣಿಯಂ ಪೂಡಿರ್ದ | ಕೋಲನೊಯ್ಯನೆ ಶರಾಸನದಿಂದಮಿಳಿಪಿದಂ | ಮೇಲಣ ವಿಚಾರಮಂ ಚಿತ್ತದೊಳ್ ತಿಳಿದನಾಳೋಚಿಸಿದನಾಪ್ತರೊಡನೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೭:
ಸಂಪಾದಿಸಿಕಣ್ಣಳವಿದಲ್ಲಬಲೆ ಕೇಳ್ ದೀಕ್ಷೆಗೊಂಡಿರ್ಪ | ನಣ್ಣದೇವಂ ತಾನುಮನ್ನೆಗಂ ವ್ರತಿಯಾಗಿ | ಪೆಣ್ಣೊಳ್ ಬೆರೆಯೆನೆಂದು ಪೊರಮಟ್ಟೆನಶ್ವರಕ್ಷೆಗೆ ಮುಂದೆ ಗಜಪುರದೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೮:
ಸಂಪಾದಿಸಿಎನಲಾ ಪ್ರಮೀಳೆ ಪಾರ್ಥನ ಮಾತಿಗೊಪ್ಪಿ ಕರ | ವನಜಮಂ ನೀಡಿ ನಂಬುಗೆಗೊಂಡು ಕುದುರೆಯಂ | ಮನೆಯಿಂ ತರಿಸಿಕೊಟ್ಟುತನ್ನಾಲಯದೊಳಿರ್ದ ವಿವಿಧರತ್ನಾವಳಿಗಳನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೧೯:
ಸಂಪಾದಿಸಿಗಜನಗರಿಗಾಕೆಯಂ ಕಳುಹಿ ಕುದುರೆಯ ಕೂಡ | ವಿಜಯನೈತರೆ ಮುಂದೆ ದೇಶಂಗಳಜಮನುಜ | ಗಜ ಗೋಶ್ವ ಮಹಿಷಾದಿ ನಿಕರಂಗಳಿಂದೆ ಪೂರಿತಮಾಗಿ ಕಂಗೊಳಿಸಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೦:
ಸಂಪಾದಿಸಿಮತ್ತೆ ಮುಂದೈದುವ ತುರಂಗಮದ ಕೂಡೆ ನಡೆ | ಯುತ್ತೆ ಬರಿದೊಗಲುಡಿಗೆಯವರ ವಕ್ರಾಂಗಿಗಳ | ನೊತ್ತೊಳವರನೊಂದು ಕಾಲವರನೊಂದು ಕಣ್ಣವರ ಮೂರಡಿಗಳವರ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೧:
ಸಂಪಾದಿಸಿಅಲ್ಲಿಗಲ್ಲಿಗೆ ತುರಂಗದ ಕೂಡೆ ಕೌಂತೇಯ | ನಿಲ್ಲದಿಲ್ಲದ ಚಿತ್ರಮಂ ನೋಡುತೈತರಲ್ | ಮೆಲ್ಲಮೆಲ್ಲನೆ ಹಯಂ ಪೋಯ್ತು ಬೀಷಣನೆಂಬಸುರನ ಪುರಕದರೊಳವನ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೨:
ಸಂಪಾದಿಸಿರಕ್ಕಸರನಿಬರೆಲ್ಲರುಂ ದೀರ್ಘದೇಹಿಗಳ್ | ವೆಕ್ಕಸದ ಕೋಪಿಗಳ್ ಮೇಲೆ ಪುರುಷಾದಕರ್ | ಕಕ್ಕಸದ ಮುಸುಡವರ್ ಬಹಳಮಾಯಾವಿಗಳ್ ನಿರ್ದಯರ್ ಕೊಲೆಗಡಿಕರು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೩:
ಸಂಪಾದಿಸಿಆಹಾರಕಡವಿಯಂ ತೊಳಲಿ ಬರುತಿರ್ದ ಮೇ | ದೋಹೋತನೆಂಬವಂ ದಾನವೇಂದ್ರಂಗೆ ಪೌ | ರೋಹಿತ್ಯಮಂ ಮಾಡುವಂ ಬ್ರಹ್ಮರಾಕ್ಷಸಂ ಕಂಡು ಪಾರ್ಥನ ಹಯವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೪:
ಸಂಪಾದಿಸಿನರವಿನುಪವೀತದಿಂ ಕಣ್ಣಾಲಿಗಳೊಳ್ ಕೋದ | ಕೊರಳ ತಾವಡದಿಂದೆ ನರರ ತಲೆಗಳ ಜಪದ | ಸರದಿಂದೆ ಪಂದೊವಲ ಧೋತ್ರದಿಂದೊಟ್ಟೆಯೆಲುಗಳ ಕುಂಡಲಂಗಳಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೫:
ಸಂಪಾದಿಸಿಏನು ಬಿಜಯಂಗೈದಿರೆನಲಟ್ಟಹಾಸದಿಂ | ದಾನವಂಗೆಂದನೇತಕೆ ಸುಮ್ಮನಿರ್ದಪೆ ನಿ | ಧಾನವನೆಡೆಹಿ ಕಂಡವೋಲಾಯ್ತು ನಿಮ್ಮಯ್ಯ ಬಕನಂ ಕೊಂದ ಭೀಮನೆಂಬ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೬:
ಸಂಪಾದಿಸಿಮತ್ತಾತನಂ ಕೊಂದವನ ತಮ್ಮನಂ ಪಿಡಿದು | ಮತ್ತಾತನಂ ಸದೆವೆನವನ ಹರಿಬಕೆ ಬಂದ | ಮತ್ತಾತನಂ ಸೀಳ್ವೆನಂತಿರಲಿ ನೀನೆನ್ನೊಳೆಂದ ಯಜ್ಞದ ಪಶುವಿಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೭:
ಸಂಪಾದಿಸಿರಾಕ್ಷಸೋತ್ತಮರೊಳಾರ್ ಪಿಂತೆ ನರಮೇಧಮಖ | ದೀಕ್ಷೆಯಂ ಕೈಕೊಂಡರಿದಕೆ ಋತ್ವಿಜರಾರ | ಪೇಕ್ಷಿತವದೇನಾರ್ಗೆ ಸಂತುಷ್ಟಿ ಪೇಳೆಂದು ಭೀಷಣಂ ಬೆಸಗೊಳಲ್ಕೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೮:
ಸಂಪಾದಿಸಿಸುರೆ ನೆತ್ತರಿಂದೆ ಚಾತುರ್ಮಾಸ್ಯಮಂ ಕಳೆದ | ಹಿರಿಯರಿದೆ ಮಾಸೋಪವಾಸಿಗಳ ತಲೆಮಿದುಳ | ನುರತರಶ್ರಾವಣಕೊದಗಿಪರಿದೆ ಯತಿಮಾಂಸಮಂ ಭಾದ್ರಪದಕೆ ಬಿಡದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೨೯:
ಸಂಪಾದಿಸಿಇನ್ನುಮಿವರಲ್ಲದೆ ಮಹಾಬ್ರಹ್ಮರಾಕ್ಷಸರ್ | ಮುನ್ನಿನ ಯುಗಂಗಳವರಿರ್ದಪರ್ ಪಿರಿಯರ್ ಸ | ಮುನ್ನತ ವಟದ್ರುಮ ನಿವಾಸಿಗಳನೇಕ ಪುರುಷಾದಕರ್ ದುರ್ದರ್ಶರು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೦:
ಸಂಪಾದಿಸಿದಾನವರ ದಂಪತಿಸಹಸ್ರಮಂ ಪ್ರತಿದಿನಂ | ಮಾನವರ ಮಾಂಸಭೋಜನದಿಂದೆ ತಣೀಸಬೇ | ಕಾನವರನುಪಚರಿಪೆನಧ್ವರವನೆಸಗು ನೀಂ ಮಂಟಪವನ್ನಿಲ್ಲಿ ರಚಿಸು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೧:
ಸಂಪಾದಿಸಿಪೊಕ್ಕು ಪಡೆಯೊಳ್ ವಿಜಯನಂ ಪಿಡಿದು ನರಮೇಧ | ಕಿಕ್ಕುವೆಂ ಬೇಗ ಕಟ್ಟಿಸು ಮಂಟಪವನೆಂದು | ಹೆಕ್ಕಳದೊಳಾತನಂ ಬೀಳ್ಕೊಂಡು ಭೀಷಣಂ ಮುಳಿದೆದ್ದು ನಡೆಯುತಿರಲು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೨:
ಸಂಪಾದಿಸಿಭೀಷಣನೊಡನೆ ಮೂರುಕೋಟಿ ದೈತೇಯರತಿ | ರೋಷದಿಂದೈದುತಿರ್ದರು ಕಾಳಗಕೆ ಘೋರ | ವೇಷದ ಮಹಾರಾಕ್ಷಸಿಯರಂದೊಡಲ್ಗಳಂ ರುಧಿರಮಾಸಂಗಳಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೩:
ಸಂಪಾದಿಸಿಆ ರಾಕ್ಷಸಿಯರೊಳೊರ್ವಳ್ ಧನಂಜಯನ ಪೊಂ | ದೇರ ಪಳವಿಗೆದುದಿಯ ಹನುಮಂತನಂ ಕಂಡು | ದೂರಕೋಡಿದಳಂದು ಲಂಕಿಣಿಯನೊದೆದ ಕೋಡಗಮೆಂದು ಮತ್ತೋರ್ವಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩4:
ಸಂಪಾದಿಸಿಆಗಸಕೆ ಚಿಗಿದು ರವಿಯಂ ತುಡಿಕಿ ಧೀಂಕಿಟ್ಟು | ಸಾಗರಕೆ ಸೀತೆಯಂ ಕಂಡು ಬನಮಂ ಕಿಳ್ತು | ತಾಗಿದ ನಿಶಾಟರಂ ಸದೆದು ಲಂಕೆಯನುರುಪಿ ದಶವದನನಂ ಭಂಗಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೫:
ಸಂಪಾದಿಸಿಬೆದರಿದಿರಿ ಬರಿದೆ ನೀವೀ ಕೋತಿಯಂ ತನ್ನ | ತುದಿಮೊಲೆಗಳಿಂದಪ್ಪಳಿಸಿ ನರನ ಸೈನ್ಯಮಂ | ಸದೆದು ಕೆಡಪುವೆನೆಂದು ಯೋಜನಸ್ತನಿಯೆಂಬ ರಕ್ಕಸಿ ನುಡಿಯೆ ಲಾಲಿಸಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೬:
ಸಂಪಾದಿಸಿಬಳಿಕುಳಿದ ರಕ್ಕಸಿಯರೆಲ್ಲರುಂ ಫಲುಗುಣನ | ದಳಮಂ ಪೊಡೆದು ನುಂಗಲೆಂದು ಬಾಯ್ದೆರೆದು ಕಿಡಿ | ಗಳನುಗುಳುತಾರ್ಭಟಿಸುತೈದಿದರ್ ಕೂಡೆ ಲಂಭೋದರಿ ನರನ ಪಡೆಯನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೭:
ಸಂಪಾದಿಸಿಅಸುರಕೋಟಿತ್ರಯದೊಡನೆ ಬಂದು ಭೀಷಣಂ | ಮುಸುಕಿದಂ ಕೈದುಗಳ ಮಳೆಗಳಂ ಕರೆಯುತ್ತೆ | ಮುಸಗಿದುರಿ ಪೊಗೆ ಸಿಡಿಲ್ಮಿಂಚು ಕತ್ತಲೆ ಗಾಳಿ ಮುಗಿಲೊಡ್ಡು ದೂಳ್ಗಳಿಂದೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೮:
ಸಂಪಾದಿಸಿಮಸಗಿದಂ ಬಳಿಕ ರಣಭೀಷಣಂ ಭೀಷಣಂ | ವಸುಮತಿಗೆ ಕಾಲಾಂತಕೋಪಮಂ ಕೋಪಮಂ | ಪಸರಿಸಿದನರಿದಂ ನಿದಾನವಂ ದಾನವಂ ಫಲುಗುಣನ ಮುಂದೆ ನಿಂದು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೯:
ಸಂಪಾದಿಸಿಈಗಳದರಿಂದೆ ನಿನ್ನಂ ಪಿಡಿದು ನರಮೇಧ | ಯಾಗಕ್ಕೆ ಪಶುಮಾಳ್ಪೆನೆಂದು ಫಲುಗುಣನ ರಥ | ಕಾಗಿ ಭೀಷಣನೆರಗಲರ್ಜುನಂ ನಗುತೆ ರಕ್ಷೋಘ್ನ ಬಾಣವನೆ ಪೂಡಿ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೩೯:
ಸಂಪಾದಿಸಿಮಡಿದವರ್ ಕೆಲರಂಗಭಂಗದಿಂ ಕೈಕಾಲ್ಗ | ಳುಡಿದವರ್ ಕೆಲರೆಚ್ಚ ಕೂರ್ಗಣಿಗಳವಯವದೊ | ಳಿಡಿದವರ್ ಕೆಲರೇರ್ಗಳಿಂದೆ ವೇದನೆಗಳಂ ಸೈರಿಸದೆ ಗಳದಸುವನು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೧:
ಸಂಪಾದಿಸಿಓಡಿಸಿ ಬಲೌಘಮಂ ಬೀಸಿ ಬಿರುಮೊಲೆಗಳಿಂ | ತಾಡಿಸುವ ಯೋಜನಸ್ತನಿಯನುರೆ ಬಾಯ್ದೆರೆದು | ನಾಡಪಡೆಯಂ ತುತ್ತುಗೊಂಬ ಲಂಬೋದರಿಯನುಳಿದಸುರಿಯರ ಕೃತ್ಯವ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೨:
ಸಂಪಾದಿಸಿನರನ ಶರಜಾಲದಿಂ ಕಡಿವಡೆದು ವೀರವಾ | ನರನ ಲಾಂಗೂಲದಿಂ ಬಡಿವಡೆದು ರಕ್ಕಸರ | ನೆರವಿ ಹೇರಾಳದಿಂ ಪುಡಿವಡೆದು ಬಯಲಾಗೆ ಭೀಷಣಂ ಭೀತಿಗೊಂಡು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೩:
ಸಂಪಾದಿಸಿಎಲ್ಲಿ ನೋಡಿದೊಡೆ ಗಂಗಾಪ್ರವಾಹದ ಸಲಿಲ | ವೆಲ್ಲಿ ನೋಡಿದೊಡೆ ಪುಣ್ಯಾಶ್ರಮಕುಟೀರಂಗ | ಳೆಲ್ಲಿ ನೋಡಿದೊಡೆ ನಿಬಿಡದ್ರುಮಚ್ಛಾಯೆಗಳ್ ಕುಸುಮಫಲಮೂಲಂಗಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೩:
ಸಂಪಾದಿಸಿಆ ದಿವ್ಯ ಋಷಿಗಳಾಶ್ರಮದಿಂದಮೊರ್ವ ಮುನಿ | ಸಾದರದೊಳೈತಂದು ಫಲುಗುಣನ ಮುಂದೆ ನಿಂ | ದೀದನುಜರಂ ಕೊಂದಡೇನಹುದು ಪರಹಿಂಸೆ ಲೇಸಲ್ಲ ಬಲ್ಲವರ್ಗೆ || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೫:
ಸಂಪಾದಿಸಿಬೆರಗಾದನರ್ಜುನಂ ದಾನವನ ಕೃತಕಮೆಂ | ದರಿದು ಮುನಿಯಾಗಿರ್ದವನ ತುಡುಕಲಾ ಮಾಯೆ | ಬರೆತು ಮುನ್ನಿನ ರಾಕ್ಷಸಾಕೃತಿಗೆ ನಿಲಲಾಗಿ ಪಿಡಿದಾಕ್ರಮಿಸಿ ಮನೆಯೊಳು || |
[ಆವರಣದಲ್ಲಿ ಅರ್ಥ];=
|
ಪದ್ಯ :-:೪೬:
ಸಂಪಾದಿಸಿಕೋಳೊಡವೆ ಮುಂತಾಗಿ ತಿರುಗಿದಂ ಫಲಗುಣಂ | ಮೇಲೆ ನಡೆದುದು ಕುದುರೆ ತೆಂಕದೆಸೆಗೊಡನೆ ಕೆಂ | ದೂಳಿಡುತೆ ಬಹ ಬಹಳಬಲಸಹಿತ ಮಣಿನಗರವೆಂಬ ಪಟ್ಟಣದ ಬಳಿಗೆ || |
[ಆವರಣದಲ್ಲಿ ಅರ್ಥ];=
|
ಹೋಗಿ
ಸಂಪಾದಿಸಿನೋಡಿ
ಸಂಪಾದಿಸಿಜೈಮಿನಿ ಭಾರತ-ಸಂಧಿಗಳು:*1 * 2 *3 * 4 * 5 *6 * 7 * 8 *9 * 10 * 11* 12* 13 * 14 * 15 * 16 *17* 18 * 19* 20 * 21 * 22* 23* 24 * 25* 26* 27* 28* 29* 30* 31* 32* 33* 34 |
ಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ
ಉಲ್ಲೇಖ
ಸಂಪಾದಿಸಿ
- ↑ ಉ(.ದಕ್ಷಿಣಾಮೂರ್ತಿ ಶಾಸ್ತ್ರಿ ಮಕ್ಕಳು ಡಿ.ಸುಬ್ಬಾಶಾತ್ರಿಗಳ ಮಕ್ಕಳಾದ ರಂಗಶೇಷಶಾಸ್ತ್ರಿ ; ದಕ್ಷಿಣಾಮೂರ್ತಿ ಶಾಸ್ತ್ರಿ ; ಇವರಿಂದ ರಚಿತವಾದ ನಡುಗನ್ನಡದಲ್ಲಿರುವ ಸುಮಾರು ೧೯೨೦ರಲ್ಲಿ ಅಚ್ಚಾದ ಜೈಮಿನಿಭಾರತ- ಸಟೀಕಾ ಇದರ ಆಧಾರ. -ಕಳಪೆ ಕಾಗದದ ಪುಸ್ತಕ ಜೀರ್ಣವಾಗಿದ್ದು ಮುದ್ರಣ ವಿವರ ಅಸ್ಪಷ್ಟ)
- ↑ ಜೈಮಿನಿ ಭಾರತ -ಟಿ ಕೃಷ್ನಯ್ಯ ಶೆಟ್ಟಿ & ಸಂನ್ಸ ಬಳೆಪೇಟೆ ಬೆಂಗಳೂರು.