ತನುವಿನ ಸತ್ವವ ನಿಲಿಸಿತ್ತು ಮನದ ವಿರಕ್ತಿಯ ಕೆಡಿಸಿತ್ತು. ಘನವ ಕಾಣಲೀಯದು ದುಃಖ. ಅರುಹಿರಿಯರ ತರಕಟ ಕಾಡಿತ್ತು. ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಮರೆಗೊಂಡ ಸಂಸಾರದ ತೆರೆ ಎನ್ನ ಬರಲೀಯದಯ್ಯಾ.