ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು

________________

೬ ಆನ್ನ ಪೂರ್ಣಾ ವೆಂಕಟಪ್ಪನ ಮುಖದಲ್ಲಿ ನಗುವಿಲ್ಲದೆ ದುಃಖದ ಛಾಯೆ ಕಾಣುವ ದುರ್ದೆಸೆ ನನಗೆ ಒದಗಿದುದು ಆನಂತರ, ಗ್ರೀಸಿನ ರಣರಂಗದಿಂದ ಬ್ರಿಟಿಷ್ ಸೇನೆಗಳನ್ನು ಸುರಕ್ಷಿತವಾಗಿ ಹಿಂದೆಗೆಯುವ ಗಲಭೆಯಲ್ಲಿ, ಲಿಂಗಣ್ಣನಿದ್ದ ದಂಡೊಂದು ಕಾಣದಾಯಿತೆಂದು ವಿಶ್ವಾಸಾರ್ಹವಾದ ವಾರ್ತೆ ಬಂತು. ಕೆಲವೇ ದಿನಗಳಲ್ಲಿ ಊರ ತಹಶಿಲ್ದಾರರು ನನ್ನ ಕಡೆಗೆ ಬಂದು, ವೆಂಕಟಪ್ಪನನ್ನು ಕರೆದರು. ' ವೆಂಕಟಪ್ಪ ದಫೇದಾರನ ರೀತಿಯಲ್ಲಿ ನಂದಾ ಮಾಡಿ ನಿಂತುಕೊಂಡ, ಲಿಂಗಣ್ಣ ಅದೃಶ್ಯನಾಗಿರುವ ವಾರ್ತೆಯನ್ನು ಅವರು ಅವನಿಗೆ ಹೇಳಿ ದರು. ಅವನನ್ನು “ ವಿಜಯಿ ! ” ಎಂದು ಸ್ತುತಿಸಿದರು. ಯಾರದೊ. ಸ್ವಾತಂತ್ರ್ಯದ ಮಾರಣ ಹೋಮದಲ್ಲಿ ಅವನೇನಾದ ? ಬಲಿಯಾದನೇ ? ಅಥವಾ ಅವನು ಒಂದು ವೇಳೆ ವೈರಿಗಳ ಕೈಗೆ ಸಿಕ್ಕು ಕೈದಿಯಾಗಿದ್ದರು, ಇರಬಹುದು ! ಗಾ

18 ಈಗಲೀಗ, ವೆಂಕಟಪ್ಪನನ್ನು ನೋಡುವುದೇ ಕಷ್ಟ. ಕಾಣಸಿಕ್ಕಿದ ಶನಾಗಿ, ಬಡಕಲಾಗಿ, ಬಾಗಿ ಇರುವ ಆ ಮುದುಕ, ತನ್ನ ಮಗನ “ವಿಜಯಿಯಾದನೆಂದೂ, ಆದರೆ, ಮುಂದೆ ಬರಲು ವಿಳಂಬವಾಗುವುದೆಂದೂ ಹೇಳುವ.

  • * * ಊರಲ್ಲೆಲ್ಲ ಸರಕಾರದವರು ಭಾರತೀಯ ಸೈನ್ಯದ ವಿಜಯ ವನ್ನು ಆಚರಿಸಿದರು. ಲಿಂಗಣ್ಣ ನೀರ-ವಿಜಯಿ ವೀರನಾಗಿದ್ದ!