ಈ ಪುಟವನ್ನು ಪ್ರಕಟಿಸಲಾಗಿದೆ

೧೦೪ / ಕುಕ್ಕಿಲ ಸಂಪುಟ

ರಾಗಪ್ರಸ್ತಾರವೆಂದು ತಿಳಿದುಬಾರದಿರದು. ಉದಾಹರಣ, ವಿಮರ್ಶ, ವಧ- ಇತ್ಯಾದಿ ಅಕಾರಾಂತಗಳು ಉದಾಹರಣೆ, ವಿಮರ್ಶೆ, ವಧೆ- ಇತ್ಯಾದಿಯಾಗಿ ಕನ್ನಡದಲ್ಲಿ ಎಕಾರಾಂತ ಗಳಾಗಿ ಪ್ರಯುಕ್ತವಾಗುವಂತ, ಈ 'ಠಾಯ'ವು ಕನ್ನಡ ಸಾಹಿತ್ಯದಲ್ಲಿ 'ತಾಯೆ' ಎಂಬ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

'ಆಣತಿ' ಎಂಬುದು ಆಲ ಎಂಬುದರ ತದ್ಭವವೇ ಸರಿ. ಇದಕ್ಕೆ ಕನ್ನಡದಲ್ಲಿ 'ಆಳತಿ' ಎಂಬ ಇನ್ನೊಂದು ರೂಪವೂ ದೊರಕುತ್ತದೆ. ಆದುದರಿಂದ ಅದು ಉಂಟಾದುದು-ಆಲಪ್ತಿ-ಆಳತಿ-ಆಣತಿ ಎಂದಾಗಿದೆಯೆನ್ನಬೇಕು. (ಪಂಡಿತ ತಿಮ್ಮಪ್ಪಯ್ಯ ನವರು 'ಆಣತಿ' ಎಂಬುದು 'ಆಲ' ಎಂಬುದರ ತದ್ಭವವೆಂದು ಹೇಳದಿದ್ದರೂ, 'ಆಲಾಪ' ಎಂದು ಸರಿಯಾದ ಅರ್ಥವನ್ನೇ ಅದಕ್ಕೆ ಹೇಳಿದ್ದಾರೆ.)

ನಮ್ಮ ರತ್ನಾಕರನ 'ಭರತೇಶ ವೈಭವ'ದಲ್ಲಿಯೂ ಠಾಯ ಎಂದರೇನೆಂಬುದರ ಪರಿಚಯವಾಗುತ್ತದೆ. ಅದರ 'ಉತ್ತರ ನಾಟಕ ಸಂಧಿ'ಯಲ್ಲಿ ಹೀಗಿದೆ :

ರೇಖೆಗಾಣಿಸಿ ಜವನಿಕೆಯಿದಿರೂಳು ರಂಗ | ಶೇಖರನಿಂದು ಸೂಚಿಸಲು ǁ
ಶಾಖೋಪಶಾಖೆಯೊಳಾಳಾಪಚಂದ್ರ ಮ | ಯೂಖದೋರಿದರು ನೀರೆಯರು

ǁ ೨೪ ǁ

ಶಿಖರಿಣಿ ಸಿಂಜಿನಿಯೆಂದಂಬರಿರ್ವರು | ಮುಖರಿ ಗಾಯಕಿಯರು ನಿಂದು ǁ
ಸಖತನ ತಪ್ಪದಾಳಾಪಿಸಿದರು ತಿತ್ತಿ | ಮುಖವೀಣೆಗಳ ಶ್ರುತಿಗೂಡಿǁ ೨೫ ǁ
ಸರಲಸರಲವಾಗಿ ಸಪುರಸಪುರವಾಗಿ | ತರಲ ತರಲವಾಗಿ ತೋರಿ ǁ
ವಿರಲ್ಲ ವಿರಲವಾಗಿ ಠಾಯೆಗಾಣಿಸಿದರು | ಕೊರಳ ಬೆರಳ ಸರಿತದೊಳುǁ ೨೬ ǁ
ಮಂಜುಲನೇತ್ರವಟ್ಟಿಯ ಸೀಳಿದಂತಪ | ರಂಜಿ ಸರಿಗೆದೆಗೆದಂತೆ ǁ
ಕಂಜದ ಕಂಪನುಂಡೇಳ್ವ ತುಂಬಿಯ ಗಾನ | ರಂಜನೆಯೆನೆ ರಾಗಿಸಿದರುǁ ೨೭ ǁ
ಅಳೆವಂತೆ ರಾಗವ ತುಳಿವಂತೆ ಜಾಡ್ಯವ | ಹಿಳಿವಂತೆ ಮೋಹನರಸವ ǁ
ತೊಳೆವಂತೆ ಮನವ ಸಂಜೀವನಾಮೃತವನು | ತಳಿವಂತೆ ರಾಗದೋರಿದರುǁ ೨೮ ǁ

-ಇಲ್ಲಿ, ಠಾಯ ಎಂದರೆ ರಾಗಾಲಾಪದ ಅಂಗವೆಂಬುದು ಯಾರಿಗಾದರೂ ಸ್ಪಷ್ಟವಾಗಿ ತಿಳಿಯದಿರದು.

'ಠಾಯ' ಮತ್ತು 'ಆಣತಿ' ಎಂಬವುಗಳ ಈ ನಿಜಾರ್ಥವನ್ನು ತಿಳಿದರೆ, ತಾಳಮನಿತ್ತು ಸಮ್ಮನಿಸದು... ಎನಿಪ್ಪ ಠಾಯೆಯಿಂದಾಣತಿ ಮಾಡಿ' ಎಂಬ ಮಾತುಗಳಿಗೆ, “ತಾಳಬದ್ಧ ವಲ್ಲದ... `ಸಾವಯವವಾದ ರಾಗಾಲಾಪ ಮಾಡಿ- ಎಂಬ ತಾತ್ಪರ್ಯವು ಸರಳವಾಗಿ ತಿಳಿದುಬರುವುದು.

'ಏಕಲಗಾಯನ'ನ ತಾಳಬದ್ಧವಲ್ಲದ ರಾಗಾಲಾಪ ಸ್ವರೂಪವನ್ನು ಇನ್ನೂ ಎರಡು ಮಾತುಗಳಲ್ಲಿ ಅಗ್ಗಳನ್ನು ವಿವರಿಸಿದ್ದಾನೆ. ಅವುಗಳೊಳಗೆ “ಒತ್ತುವ ಪಂಚಮನುಣ್ಣ ರಕ್ಕಣಂ ಮೇಳತೆಯಿಲ್ಲ” ಎಂಬುದೊಂದು.


೧.ಮಂದ್ರ, ಮಧ್ಯ, ತಾರ ಎಂಬ 'ಸ್ವರಸಪ್ತಕ ಭೇದಗಳನ್ನು ತಿಳಿಸುವಾಗ, ಸ್ಥಾಯಿ
ಎಂಬ ಶಬ್ದವನ್ನು ಪ್ರಯೋಗಿಸುತ್ತೇವಷ್ಟೆ. ಆದರೆ ಆ 'ಸ್ಥಾಯಿ' ಎಂಬುದೂ ಮೇಲೆ
ವಿವರಿಸಿದ ಸ್ಥಾಯ (ಠಾಯ, ರಾಯ) ಎಂಬುದೂ ಬೇರೆ ಬೇರೆ ಅರ್ಥಗಳನ್ನು
ಹೇಳುವ ಭಿನ್ನ ಶಬ್ದಗಳು; ಅವುಗಳೊಳಗೆ ಒಂದನ್ನು ಮತ್ತೊಂದನ್ನಾಗಿ
ಭ್ರಮಿಸಬಾರದು.