ಈ ಪುಟವನ್ನು ಪ್ರಕಟಿಸಲಾಗಿದೆ
“ಎಕ್ಕಲಗಾಣ”-? / ೧೦೫

ಈ ವಾಕ್ಯಕ್ಕೆ ಪಂಡಿತ ತಿಮ್ಮಪ್ಪಯ್ಯನವರು- 'ಪಂಚಮ ಶ್ರುತಿಯ)ದ ನುಣುಪಾದ ಸ್ವರಕ್ಕೆ ಸ್ವಲ್ಪವೂ ಕೂಟವಿಲ್ಲ'- ಎಂದೂ, ಶ್ರೀ ಕಾರಂತರು 'ಪಂಚಮಶ್ರುತಿಗೆ ಸರಿಬಾರದ ಎಂದೂ ಅರ್ಥ ಹೇಳಿದ್ದಾರೆ. ಅಗ್ಗಳನ ಮಾತಿನಲ್ಲಿ 'ನುಣ್‌ಚರ' - ಸ್ವರ ಎಂದಿದೆಯೇ ಹೊರತು 'ಶ್ರುತಿ' ಎಂದಿಲ್ಲ. ಸ್ವರವೆಂದರೂ ಶ್ರುತಿ ಎಂದರೂ ಒಂದೇ ಅಲ್ಲ. 'ಪಂಚಮ' ಎಂದರೆ ಸಪ್ತಸ್ವರಗಳೊಳಗೊಂದು. ನಮ್ಮ ಸಂಗೀತ ಶಾಸ್ತ್ರ ಪ್ರಕಾರ ಒಂದು 'ಸ್ವರಸಪ್ತಕ ದಲ್ಲಿ ಇಪ್ಪತ್ತೆರಡು ಶ್ರುತಿಗಳಿವೆ. ಆದರೆ, ಗಾಯಕರು ಗಾನಕ್ಕೆ ಆಧಾರವಾಗಿ ಇಟ್ಟು ಕೊಳ್ಳುವ ಸ್ವರವನ್ನು 'ಶ್ರುತಿ' ಎಂದು ಕರೆಯುವ ರೂಢಿ ಇದೆ. ಈ ಅಭಿಪ್ರಾಯದಿಂದ ಅವರು 'ಪಂಚಮಶ್ರುತಿ' ಎಂದು ಹೇಳಿದರೆನ್ನೋಣವೇ? ಅದೂ ಸರಿಯಲ್ಲ. ಏಕೆಂದರೆ, ಗಾನಕ್ಕೆ ಆಧಾರಶ್ರುತಿ'ಯೆಂದಿಟ್ಟುಕೊಳ್ಳುವ ಸ್ವರವು ಷಡ್ವವೇ ಹೊರತು ಪಂಚಮವಲ್ಲ. ಷಡ್ವಕ್ಕೆ ಸಂವಾದಿಯಾಗಿ ಪಂಚಮವನ್ನಿಟ್ಟುಕೊಳ್ಳುವುದುಂಟಾದರೂ, ಆ ಪಂಚಮವನ್ನು ಆಧರಿಸಿ ಗಾನಮಾಡುವುದಲ್ಲ. ಅದು ಶಾಸ್ರೋಕ್ತವೂ ಅಲ್ಲ, ಅಂತಹ ರೂಢಿಯೂ ಇಲ್ಲ. ಈ ಕುರಿತು, 'ಸಂಗೀತ ಸಾರಾಮೃತ' (ರಾಗವಿವೇಕ-ಸ್ವರಮೇಲನ ಪ್ರಕರಣ)ದಲ್ಲಿ ಸ್ಪಷ್ಟ ವಾಗಿ ಹೀಗಿದೆ :

ಗಾನಾದೌ ಗೃಹ್ಯತೇ ಯೇನ ಸ್ವರೇಣ ತುಲಿತೋ ಧ್ವನಿಃ |
ಸ ಷಡ್ವ: ಶ್ರುತಿಶಬ್ದೇನ ಲೋಕ ಉದ್ಭುಷ್ಯತೇ ಜನೈ: ǁ
ದ್ರಿಯತೇ ಯಃ ಸ್ವರಃ ಸ ಸ್ಯಾತ್ ಷಡ್ಜ ಏವ ನ ಚಾಪರ: |

-ಇದರ ಅರ್ಥ ಹೀಗೆ : 'ಗಾನ ಪ್ರಾರಂಭದಲ್ಲಿ ಯಾವ 'ಸ್ವರ'ಕ್ಕೆ ಸಮನಾಗಿ ಧ್ವನಿ ಹಿಡಿಯಲ್ಪಡುತ್ತದೋ ಆ 'ಷಡ್ವಸ್ವರ'ವನ್ನು ಲೋಕದಲ್ಲಿ ಜನರು ಶ್ರುತಿ ಎಂದು ಕರೆಯುತ್ತಾರೆ. ಹಾಗೆ ಹಿಡಿಯಲ್ಪಡುವ ಸ್ವರವು ಷಡ್ಡವಲ್ಲದೆ ಬೇರಾವುದೂ ಅಲ್ಲ. ಎಂದರೆ 'ಆಧಾರಷಡ್ಡ'ವನ್ನು ಮಾತ್ರ 'ಶ್ರುತಿ' ಎಂದು ಕರೆಯುವ ವಾಡಿಕೆ ಇದೆ ಎಂದ ಹಾಗಾಯಿತು. ಆಧಾರ ಷಡ್ಡಕ್ಕೆ ಸ್ವರ ಸೇರುವುದಾದರೆ ಪಂಚಮಕ್ಕೆ ಸೇರದಿರಲು ಸಾಧ್ಯವೇ ಇಲ್ಲ. ಹೀಗಿರುವಲ್ಲಿ, ಶಾಸ್ತ್ರಕ್ಕೂ, ವಸ್ತುಸ್ಥಿತಿಗೂ ವಿರುದ್ಧವಾಗಿ 'ಪಂಚಮ ಶ್ರುತಿಗೆ ಸೇರುವುದಿಲ್ಲ' ಎಂದು ಹೇಳಿದರೆ ಅರ್ಥವೇನೆಂದು ತಿಳಿಯುವುದಿಲ್ಲ! ಶ್ರೀ ಕಾರಂತರು 'ಪಂಚಮಕ್ಕೆ ಎಟಕದ' - ಎಂಬ ಇನ್ನೊಂದು ಊಹೆಯನ್ನು ಮಾಡಿದ್ದಾರೆ. ಇದಕ್ಕೂ ಅರ್ಥವಿರುವಂತೆ ತೋರುವುದಿಲ್ಲ. ಏಕೆಂದರೆ, ಪಂಚಮ ಸ್ವರವು ಮೂರು ಸ್ಥಾಯಿಗಳಲ್ಲಿಯೂ ಇರುವಾಗ, ತಾರಸ್ಥಾಯಿಯ ಪಂಚಮವು ಎಟಕದಿದ್ದರೆ ಮಧ್ಯ ಮಂದ್ರಸ್ಥಾಯಿಗಳಲ್ಲಿ, ಕೊನೆಯ ಪಕ್ಷ ಮಧ್ಯಸ್ಥಾಯಿಯಲ್ಲಾದರೂ ಎಟಕುವುದಿಲ್ಲವೆ? ಅದು ಸಹ ಎಟಕದ ಹಾಡುಗಾರಿಕೆಯೆಂಬುದು ಲೋಕದಲ್ಲಿದೆಯೆ? ಅವರೇ ಹೇಳಬೇಕು.

ಆದರೆ ಒತ್ತುವ ಪಂಚಮನುರಕ್ಕಣಂ ಮೇಳತೆಯಿಲ್ಲ' ಎಂಬ ವಾಕ್ಯಕ್ಕೆ ಸುಸಂಬದ್ಧವಾದ - ಅರ್ಥವು ದುರೂಹ್ಯವಾಗಿದೆಯೆಂಬುದು ನಿಜ. ಈಯೊಂದು ಕಾರಣದಿರದ ಆ ವಾಕ್ಯಕ್ಕೆ ನಮಗೆ ಕಂಡಂತೆ ಯದ್ವಾತದ್ವಾ ಅರ್ಥ ಕಟ್ಟಿ, ಯಕ್ಷಗಾನವನ್ನು 'ಅವಹೇಳನ ಮಾಡುವುದಕ್ಕಾಗಿ ಅಗ್ಗಳನು ಅಸಂಬದ್ಧವಾಗಿ ಬರೆದನು ಎಂದು ಆರೋಪಿಸು ವುದು ಆಯುಕ್ತ, ಅನುಚಿತ, ಸಂಗೀತಾದಿ ಕಲೆಗಳಲ್ಲಿ ಅವನಿಗೆ ಅಸಾಮಾನ್ಯವಾದ


೧.ಆಧಾರ ಷಡ್ವದ ವಿಸ್ಮತಿಯಾಗದಂತೆ ಗಾನಕ್ಕೆ ಸಹಾಯವಾಗಿಟ್ಟುಕೊಳ್ಳುವ ವಾದ್ಯ
ವಿಶೇಷಗಳಿಗೆ (ಉದಾ : ಶ್ರುತಿಬುರುಡೆ, ಏಕನಾದ, ತಂಬೂರಿ) 'ಶ್ರುತಿವಾದ'ವೆಂಬ
ಹೆಸರೂ ವಾಡಿಕೆಯಲ್ಲಿದೆ.