ಈ ಪುಟವನ್ನು ಪ್ರಕಟಿಸಲಾಗಿದೆ
“ಎಕ್ಕಲಗಾಣ”-?/೧೧೧

ಛಾಯಾಲಗೇತಿ ಶಬ್ದಾಪಭ್ರಂಶಃ ಸಾಲಗ ಇತ್ಯಯಂ |
ಶುದ್ಧ: ಛಾಯಾಲಗಷ್ಟೇತಿ ದ್ವಿವಿಧಃ ಸೂಡ ಉಚ್ಯತೇ ǁ
ಏಲಾದಿ: ಶುದ್ಧ ಇತ್ಯು ಧ್ರುವಾದಿ: ಸಾಲಗೋ ಮತಃ |
ತತ್ರೋಕ್ತ: ಶುದ್ಧ ಸೂಡಃ ಪ್ರಾಕ್ ಸಾಲಗಧುನೋಚ್ಯತೇ|
ಆದ್ಯೋ ಧ್ರುವಃ ತತೋ ಮಂಠ ಪ್ರತಿಮಂತ ನಿಸಾರುಕಾಃ |
ಅಡ್ಡ ತಾಲಸ್ತತೋ ರಾಸ ಏಕತಾಲೀತ್ಯಸೌ ಮತಃ ǁ

ಇದರ ಅರ್ಥ ಹೀಗೆ : “ಸಾಲಗಸೂಡ ಎಂಬ ಹೆಸರಿನ ಗೀತವನ್ನು ನಿರೂಪಿಸುತ್ತೇನೆ: 'ಸೂಡ' ಎಂಬುದು ದೇಶೀಯ ಶಬ್ದ, ಇದನ್ನು ಗೀತಾಲಿ (ಗೀತಗಳ ಸಮೂಹ) ಎಂಬ ಅರ್ಥದಲ್ಲಿ ಪ್ರಯೋಗಿಸುತ್ತಾರೆ. ಸಾಲಗ ಎಂಬುದು ಛಾಯಾಲಗ ಎಂಬ ಶಬ್ದದ ಅಪಭ್ರಂಶ. ಸೂಡವು ಶುದ್ಧವೆಂದೂ, ಛಾಯಾಲಗವೆಂದೂ ಎರಡು ವಿಧ. ಏಲಾದಿ'ಗಳು ಶಬ್ದ ಸೂಡಗಳು; 'ಧ್ರುವಾದಿಗಳು ಸಾಲಗ ಸೂಡಗಳು, ಶುದ್ಧ ಸೂಡವನ್ನು ಮೊದಲೇ ವಿವರಿಸಲಾಗಿದೆ. ಈಗ ಸಾಲಗಸೂಡವನ್ನು ನಿರೂಪಿಸುತ್ತೇನೆ : ಧ್ರುವ, ಮಂಠ, ಪ್ರತಿಮಂಠ, ನಿಸಾರುಕ, ಅಡ್ಡ ತಾಲ, ರಾಸ, ಏಕತಾಲಿ ಎಂಬವು ಸಾಲಗಸೂಡಗಳು.”

ಇಲ್ಲಿ ಹೇಳಿರುವ ಧ್ರುವ, ಮಂಠ (ಮಟ್ಟೆ), ಅಡ್ಡ ತಾಲ (ಅಟ್ಟತಾಳ), ಏಕತಾಲಿ (ಏಕತಾಳ) ಎಂಬುವು ತಾಳಸೂಚಕಗಳೆಂಬುದು ಸುಸ್ಪಷ್ಟವಾಗಿರುವುದರಿಂದ, ಆ ವರ್ಗ ದೊಳಗಿರುವ ಪ್ರತಿಮಂಠ, ನಿಸಾರುಕ, ರಾಸ ಎಂಬಿವೂ ಉಳಿದುವುಗಳಂತೆ ತಾಳಸೂಚಕ ಗಳೇ ಎಂಬುದರಲ್ಲಿ ಸಂದೇಹವಿಲ್ಲ. 'ಸಾಲಗ ಸೂಡ' ಎಂದರೆ ಸಾಲಗ ಗೀತ, ಹಾಗಾದರೆ, ಧ್ರುವ ಮೊದಲಾದ ಸಪ್ತ ತಾಳಗಳೊಳಗೆ ಯಾವುದೊಂದರಲ್ಲಿ ರಚಿತವಾದ ಗೀತವು 'ಸಾಳರಗೀತ'ವೆಂದು ತಿಳಿದಂತಾಯಿತು. ಅಗ್ಗಳನಾದರೂ, ಧ್ರುವಾದಿ ದೇಶೀಗೀತಂ ಗಳೊಳಂ' (ಆಶ್ವಾಸ ೧೫ - ಪುಟ ೨೦೧) ಎಂದು ಈ 'ಸಾಳಗ ಸೂಡ'ಗಳನ್ನು ದೇಶೀ ಗೀತಗಳೆಂದು ಸ್ಪಷ್ಟವಾಗಿ ಹೇಳುತ್ತಾನೆ.

ಈಗ ನಮ್ಮ ಎಕ್ಕಲಗಾಣನು ಹಾಡಿದುದೇನೆಂಬುದು ಖಚಿತವಾಗಿ ತಿಳಿಯು ವಂತಾಯಿತು; ಅವನು ಮೊದಲು, ರಾಗದ ಅವಯವಗಳು ಸ್ಪುಟವಾಗಿ ಪ್ರಕಟವಾಗುವ ರೀತಿಯಲ್ಲಿ ತಾಳರಹಿತವಾದ ರಾಗಾಲಾಪವನ್ನು ಮಾಡಿ, - ಅನಂತರ ಕೇವಲ. ತಾಳಬದ್ಧ ವಾದ ಒಂದು ಹಾಡನ್ನು ಹಾಡಿದನು. 'ದೇಶೀಗೀತ'ಗಳನ್ನು ಹೀಗೆ ಹಾಡುವುದೇ ಶಾಸ್ತ್ರ ಸಂಮತ. ಇಂದು ನಾವು ಕೇಳುವ 'ಕರ್ನಾಟಕ ಶಾಸ್ತ್ರೀಯ ಸಂಗೀತ'ವಾದರೂ, - ಮೊದಲು


೧.ಏಲಾ (ನಾಗವರ್ಮನ ಛಂದೋಂಬುಧಿಯ 'ಏಳೆ) ಮೊದಲಾದ 'ಶುದ್ಧ ಸೂಡ
ಗಳು ಛಂದೋಬದ್ಧವಾದುವುಗಳು; 'ಸಾಲಗಸೂಡಗಳು' ಕೇವಲ ತಾಳಬದ್ಧವಾದ
ಗೀತಗಳು.

೨.ಇಂದು 'ಶಾಸ್ತ್ರೀಯ ಸಂಗೀತ' ಎಂದು ನಾವು ಹೇಳುತ್ತಿರುವುದು ಸಂಗೀತಶಾಸ್ತ್ರ
ಗ್ರಂಥಗಳಲ್ಲಿ 'ದೇಶೀ' ಎಂದೂ, 'ಗಾನ'ವೆಂದೂ ಕರೆಯಲ್ಪಟ್ಟಿರುವುದನ್ನೇ ಆಗಿದೆ.
ಹಳೆಯ 'ಮಾರ್ಗ' (ಗಾಂಧರ್ವ) ಪದ್ಧತಿಯ 'ಗ್ರಾಮರಾಗ'ಗಳನ್ನೂ ಆ ಪದ್ಧತಿಯ
'ಚಚ್ಚತ್ತುಟ' ಮೊದಲಾದ 'ಮಾರ್ಗೀತಾಳ'ಗಳನ್ನೂ ಪ್ರಯೋಗಿಸುವವರು ಈಗ
ಯಾರೂ ಕಾಣುವುದಿಲ್ಲ. ಅಗ್ಗಳನ ಕಾಲದಲ್ಲೇ ಆ ಪದ್ಧತಿ ಹಿಂದೆ ಬಿದ್ದಿರುವಂತೆ
ತೋರುತ್ತದೆ. ಏಕೆಂದರೆ, ದೇಶಿಯನ್ನು ಬಿತ್ತರಿಸಿದಂತೆ ಅವನು ಅದನ್ನೇನೂ
ವಿಸ್ತರಿಸದೆ, ಷಡ್ಡ ಮಧ್ಯಮಗ್ರಾಮ ಸಂಬಂಧಂಗಳಪ್ಪ ಅಷ್ಟಾದಶ ಜಾತಿಗಳೊಳ್
ಪುಟ್ಟಿದ ಪಲವುಂ ಗ್ರಾಮರಾಗಂಗಳೊಳಂ' (ಆಶ್ವಾಸ ೧೫) ಎಂದಿಷ್ಟೇ ಹೇಳುತ್ತಾನೆ.