ಈ ಪುಟವನ್ನು ಪ್ರಕಟಿಸಲಾಗಿದೆ
ಕುಕ್ಕಿಲ ಕೃಷ್ಣ ಭಟ್ಟರ ಕಣ್ಮರೆ / ೩೭೧

ಒಪ್ಪತಕ್ಕವಾಗಿವೆ. ಗ್ರಹಣೀಯವಾಗಿವೆ. ಆ ವಿಷಯಗಳಲ್ಲಿ ಇನ್ನು ಸಂಶಯಪಡತಕ್ಕಂತೆ ವಿವೇಕಿಗಳಿಗಾದರೂ ಎಡೆದೊರೆಯಲಾರದೆಂದು ನಾನು ನಂಬುತ್ತೇನೆ.

ಕೃಷ್ಣಭಟ್ಟರ ಸಂಶೋಧನೆ, ವಿಮರ್ಶೆಗಳ ದೃಷ್ಟಿ ನನಗೆ ಬಹುವಾಗಿ ಮೆಚ್ಚುಗೆ ಯಾಗಿತ್ತು. ಅದು ಬಹುಕಾಲದಿಂದಲೂ ಮನಸ್ಸಿನಲ್ಲಿ ನೆಲೆಯಾಗಿತ್ತು. ಆದುದರಿಂದಲೇ ಎಪ್ಪತ್ತರ ದಶಕದ ಆರಂಭದಲ್ಲಿ ಮಿತ್ರರಾದ ಜಿ. ಟಿ. ನಾರಾಯಣರಾಯರು "ಕುಕ್ಕಿಲ ಕೃಷ್ಣಭಟ್ಟರು ಸಂಪಾದಿಸಿದ ಪಾರ್ತಿಸುಬ್ಬನ ಯಕ್ಷಗಾನಗಳ ಸಮಗ್ರ ಸಂಪುಟವನ್ನು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಬಹುದೇ? ಎಂದು ಪ್ರಸ್ತಾಪಿಸಿದಾಗ ಸಂತೋಷದಿಂದಲೇ ಒಪ್ಪಿಕೊಂಡೆ. ಆ ದಿನಗಳಲ್ಲಿ ಕುಕ್ಕಿಲರು ಮೈಸೂರಿನಲ್ಲಿಯೇ ಇದ್ದರು. "ಪ್ರಬುದ್ಧ ಕರ್ನಾಟಕ', 'ಮಾನವಿಕ' ಕರ್ನಾಟಕಗಳಲ್ಲಿ ಅವರು ಬರೆದಿದ್ದ "ದೇಶೀಯ ಛಂದಸ್ಸುಗಳ ಮೂಲ', "ನಾಟ್ಯ ಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು', ಬೆದಂಡೆ-ಚತ್ತಾಣ' ಮೊದಲಾದ ಲೇಖನಗಳೂ, 'ಭಾರತೀಯ ಸಂಗೀತ ಶಾಸ್ತ್ರ' ಎಂಬ ಪುಸ್ತಕವೂ ಆಗ ಪಂಡಿತರ ಗಮನ ಸೆಳೆದಿದ್ದವು. "ಪಾರ್ತಿಸುಬ್ಬನ ಯಕ್ಷಗಾನಗಳು' ಪ್ರಕಟಣೆಯ ಸಂದರ್ಭದಲ್ಲಿ ನನಗೆ ಕೃಷ್ಣಭಟ್ಟರ ಪರಿಚಯ ನಿಕಟವಾಯಿತು. ಅವರು ಆಗಾಗ ನನ್ನ ಬಳಿ ಬರುತ್ತಿದ್ದರು. ಬಿಳಿಯುಡುಗೆಯ, ಕೆಂಪು ಮುಖದ, ಆಕರ್ಷಕ ನಗೆಯ ಅವರನ್ನು ನೋಡುವುದು ಸದಾ ಸಂತೋಷದಾಯಕವಾಗಿರುತ್ತಿತ್ತು. ಆ ಸಂದರ್ಭಗಳಲ್ಲಿ ನಾನು ಅವರಲ್ಲಿ ಕಾಣುತ್ತಿದ್ದ ಗುಣಗಳೆಂದರೆ ಅಧ್ಮಯನ ಪ್ರೀತಿ ಮತ್ತು ಸ್ನೇಹ ಶೀಲತೆ. ಅವರ ಸೊಗಸಾದ ವ್ಯಕ್ತಿತ್ವ ಇನ್ನೂ ನನ್ನ ಮನಸ್ಸಿನಲ್ಲಿ ಖಚಿತವಾಗಿ ನಿಂತಿದೆ.
ಕುಕ್ಕಿಲರ ಪ್ರಕಟಿತ ಕೃತಿಗಳು ಬಹುಶಃ ನಾಲ್ಕೇ ನಾಲ್ಕು ಇರಬೇಕು. "ಕುಂಬಳೆ ಪಾರ್ತಿ ಸುಬ್ಬಕವಿಯ ಕಾಲ ಮತ್ತು ಕರ್ತೃತ್ವದ ನಿರ್ಣಯ' ಎಂಬುದು ಅವರ ಒಂದು ಸುದೀರ್ಥು ಭಾಷಣ (೧೯೬೧). ಕೋಟೆಕಾರಿನ ಸಾಹಿತ್ಕ ಸಂಘ ಇದನ್ನು ಪ್ರಕಟಿಸಿದೆ. ಈ ಪುಸ್ತಕ ದಿಂದಲೇ ಕೃಷ್ಣಭಟ್ಟರು ಪ್ರಸಿದ್ಧಿಗೆ ಬಂದರೆಂದರೆ ತಪ್ಪಾಗಲಾರದು. ೧೯೭೧ರಲ್ಲಿ ಪ್ರಕಟ ವಾದ "ಭಾರತೀಯ ಸಂಗೀತ ಶಾಸ್ತ್ರ' (ಪ್ರ : ಡಿ. ವಿ. ಕೆ. ಮೂರ್ತಿ, ಮೈಸೂರು) ಒಂದು ವಿಶಿಷ್ಟವಾದ ಪುಸ್ತಕ. "ಛಂದಸ್ಸಿನ ಯಥಾರ್ಥಜ್ಞಾನಕ್ಕೆ ಸಂಗೀತದ ಮೂಲತತ್ವಗಳ ಜ್ಞಾನವು ಅಪರಿಹಾರ್ಯವೆಂದು ಸೇಡಿಯಾಪು ಕೃಷ್ಣಭಟ್ಟರು ಹೇಳುತ್ತಾರೆ. "ವ್ಯಾಕರಣ ಛಂದಸ್ಸುಗಳಿಗೆ ಎಲ್ಲಿ ಅಂತ್ಯವೋ ಅಲ್ಲಿ ಸಂಗೀತ ಹುಟ್ಟುವುದು ಎಂಬುದು ಕುಕ್ಕಿಲ ಕೃಷ್ಣಭಟ್ಟರ ಅಭಿಪ್ರಾಯ. ಆದ್ದರಿಂದಲೇ ಅವರಿಗೆ ತುಂಬಾ ಸಹಜವಾಗಿ ಸಂಗೀತದಲ್ಲಿ, ಸಂಗೀತ ಶಾಸ್ತ್ರದಲ್ಲಿ ಆಸಕ್ತಿ. ಫಲವಾಗಿ ಇಂಥದೊಂದು ಪಾರಿಭಾಷಿಕ ಕೃತಿರಚನೆ ಮಾಡುವುದೂ ಅವರಿಗೆ ಸಾಧ್ಯವಾಯಿತು. ""ಯಾವುದನ್ನು ತಿಳಿಯುವ ಬಯಕೆಯಿಂದ ನಾನು ಶಾಸ್ತ್ರಾರ್ಥಮನನಾದಿ ಕ್ಷೇಷಗಳನ್ನು ಯಥಾಶಕ್ತಿ ಅನುಭವಿಸಿದ್ದೆನೋ ಅದಿಂದು ನನಗೆ ಸುಲಭವಾಗಿ ಮನವರಿಕೆಯಾಗುವಂತಾಗಿದೆಯೆಂದು ಸೇಡಿಯಾಪು ಅವರು ವ್ಯಕ್ತಪಡಿಸಿರುವ ಮೆಚ್ಚುಗೆಗೆ ಪುಸ್ತಕ ಅರ್ಹವಾಗಿದೆ. ಈ ಪುಸ್ತಕದಿಂದ ತಮ್ಮ ಕುತೂಹಲಕ್ಕೆ ವಿಶ್ರಾಂತಿ ಲಭಿಸಿದೆಯೆಂಬ ಅವರ ಮಾತು ಒಂದು ದೊಡ್ಡ ಶಿಫಾರಸ್‌. ಸಂಗೀತದ ಕೆಲವು ಮೂಲಭೂತ ವಿಚಾರಗಳು ಇದರಲ್ಲಿ ಚರ್ಚಿತವಾಗಿವೆ.
ಡೆಮ್ಮಿ ಆಕಾರದ ಏಳುನೂರೈವತ್ತು ಪುಟಗಳ ದೊಡ್ಡ ಪುಸ್ತಕ “ಪಾರ್ತಿಸುಬ್ಬನ ಯಕ್ಷಗಾನಗಳು' (೧೯೭೫). ಪಾರ್ತಿಸುಬ್ಬನ ಎಲ್ಲಾ ಹತ್ತು ಪ್ರಸಂಗಗಳೂ, ಸಭಾ ಲಕ್ಷಣವೂ ಈ ಮೊದಲು ಹೀಗೆ ಒಂದೆಡೆ ಪ್ರಕಟಗೊಂಡಿರಲಿಲ್ಲ. ಕುಕ್ಕಿಲರು ತುಂಬಾ ಎಚ್ಚರವಹಿಸಿ ಈ ಬೃಹತ್‌ ಸಂಪುಟವನ್ನು ಸಿದ್ಧಗೊಳಿಸಿದ್ದಾರೆ. ಅದಕ್ಕೆ ಅವರು