ಈ ಪುಟವನ್ನು ಪ್ರಕಟಿಸಲಾಗಿದೆ

೩೭೮ | ಕುಕ್ಕಿಲ ಸಂಪುಟ
ಭಟ್ಟರಿಗೂ ತಮಗೂ ಇದ್ದ ಬಾಂಧವ್ಯ ಸಂಪರ್ಕಗಳ ಬಗ್ಗೆ ಸೇಡಿಯಾಪು ಅವರು ಹಲವಾರು ವಿಷಯಗಳನ್ನು ಹೇಳಿದರು.
ಕುಕ್ಕಿಲ ಕೃಷ್ಣ ಭಟ್ಟರು ಅಧ್ಯಯನಕ್ಕಾಗಿ ಮಂಗಳೂರಿಗೆ ಬಂದವರು ಸೇಡಿಯಾಪು ಅವರೊಂದಿಗೇ ಇದ್ದರು. ಅವರೊಳಗೆ ಜೊತೆಜೊತೆಯಾಗಿ ಅಧ್ಯಯನ ಚರ್ಚೆಗಳೂ ನಡೆಯುತ್ತಿದ್ದುವು. ಸೇಡಿಯಾಪು ಅವರೊಂದಿಗಿದ್ದುದು ಅವರಿಗೆ ಹಳಗನ್ನಡ ಕಾವ್ಯ ಗ್ರಂಥಗಳ ಮತ್ತು ಶಾಸ್ತ್ರೀಯ ಕೃತಿಗಳ ಅಧ್ಯಯನಕ್ಕೆ ಬಹಳ ಸಹಾಯವಾಯಿತು. ಅದೇ ಸಮಯದಲ್ಲಿ 'ರಾಷ್ಟ್ರಬಂಧು ಪತ್ರಿಕೆಯ ಸಂಪರ್ಕ ಅವರಿಗೆ ಹೆಚ್ಚಿನ ಪ್ರಯೋಜನ ವಿತ್ತಿತ್ತು. ಅದರ ಉಪಸಂಪಾದಕರಾಗಿಯೂ ಅವರು ಕೆಲಸ ಮಾಡಿದರು. ಸೇಡಿಯಾಪು ಅವರು ಕನ್ನಡ ಛಂದಸ್ಸಿನ ಬಗ್ಗೆ ಸ್ವತಂತ್ರ ವಿಚಾರ ಮಾಡುತ್ತ ನಾಗವರ್ಮನ ಛಂದೋಂ ಬುಧಿಯ ಬಗ್ಗೆ ವಿಶೇಷಾಧ್ಯಯನ ಮಾಡುತ್ತಿದ್ದ ಆ ಕಾಲದಲ್ಲಿ ಕುಕ್ಕಿಲ ಕೃಷ್ಣ ಭಟ್ಟರೂ ಅವರೊಂದಿಗಿದ್ದರು. ೧೯೩೨ನೇ ಇಸವಿಯಲ್ಲಿ ಮಡಿಕೇರಿಯಲ್ಲಿ ದಿವಂಗತ ಡಿ. ವಿ. ಜಿ. ಯವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನ ದಲ್ಲಿ ಮಂಡಿಸಲು 'ಕನ್ನಡ ಛಂದಸ್ಸು' ಎಂಬ ಪ್ರೌಢ ಪ್ರಬಂಧವನ್ನು ಸೇಡಿಯಾಪು ಅವರು ತಯಾರಿಸಿದ್ದರು. ಈ ಪ್ರಬಂಧ ಮಂಡನೆಗಾಗಿ ಸೇಡಿಯಾಪು ಅವರು ಮಡಿಕೇರಿಗೆ ಹೋದಾಗ ಕುಕ್ಕಿಲ ಕೃಷ್ಣ ಭಟ್ಟರೂ ಜೊತೆಗಿದ್ದರು. ಕುಕ್ಕಿಲ ಕೃಷ್ಣ ಭಟ್ಟರೂ ಅಲ್ಲಿ ತಮ್ಮದೊಂದು ಲೇಖನವನ್ನು ಓದಿದರಂತೆ. (ಈ ಲೇಖನದ ವಿಷಯ ಮತ್ತು ಅದು ಪ್ರಕಟಗೊಂಡಿದೆಯೇ ಎಂಬ ವಿಷಯ ಸೇಡಿಯಾಪು ಅವರ ನೆನಪಿನಲ್ಲಿಲ್ಲ), ಕುಕ್ಕಿಲ ಕೃಷ್ಣ ಭಟ್ಟರು ನಾಗವರ್ಮನ ಛಂದೋಂಬುಧಿಯನ್ನು ಸಂಪಾದಿಸಲು ಸೇಡಿಯಾಪು ಅವರ ಸಂಪರ್ಕ ಸಹವಾಸಗಳೇ ಕಾರಣವೆಂದೂಹಿಸಿದರೆ ತಪ್ಪಾಗಲಾರದು.
೧೯೩೦ರ ದಶಕದಲ್ಲಿ ಒಂದೆರಡು ಲೇಖನಗಳನ್ನು ಪ್ರಕಟಿಸಿ ಬರವಣಿಗೆಯನ್ನೇ ನಿಲ್ಲಿಸಿದ್ದ ಕುಕ್ಕಿಲ ಕೃಷ್ಣ ಭಟ್ಟರು ಪುನಃ ಬರವಣಿಗೆ ತೊಡಗಿದುದು ಯಕ್ಷಗಾನ ವಿಚಾರ ವಾದ ಲೇಖನಗಳ ಮೂಲಕವೇ. 'ಯಕ್ಷಗಾನವೇ ನಿನ್ನ ಆಸಕ್ತಿಯ ಕ್ಷೇತ್ರ, ಅದರಲ್ಲೇ ನೀನು ಹೆಚ್ಚಿನದನ್ನು ಸಾಧಿಸಬೇಕು' ಎಂದು ಸೇಡಿಯಾಪು ಅವರು ಅವರಿಗೆ ಸೂಚಿಸಿದ್ದ ರಂತೆ. ೧೯೬೧ರಲ್ಲಿ ಸೇಡಿಯಾಪು ಅವರೇ ಸಂಪಾದಕರಾಗಿದ್ದ 'ರಾಷ್ಟ್ರಮತ' ವಿಶೇಷ ಸಂಚಿಕೆಯಲ್ಲಿ ಕುಕ್ಕಿಲ ಕೃಷ್ಣ ಭಟ್ಟರ 'ಎಕ್ಕಲಗಾಣ' ಎಂಬ ಅಮೂಲ್ಯ ಲೇಖನವನ್ನು ಪ್ರಕಟಿಸಿದರು. ಈ ಲೇಖನದ ತಯಾರಿಯಲ್ಲಿಯೂ ಅವರಿಬ್ಬರು ಸಾಕಷ್ಟು ವಿಚಾರ ವಿನಿಮಯ ಮಾಡಿಕೊಂಡಿದ್ದರು. ಇದೊಂದು ಬಹು ಮುಖ್ಯ ಲೇಖನವೆಂದು ಸೇಡಿಯಾಪು ಅವರೂ ಭಾವಿಸುತ್ತಾರೆ.
ಪಾರ್ತಿಸುಬ್ಬನ ಬಗೆಗೆ ಹತ್ತು ಹಲವು ವಿಧದ ಅಭಿಪ್ರಾಯಗಳು, ಲೇಖನಗಳು, ಚರ್ಚೆಗಳು, ಆಕ್ಷೇಪ ಪ್ರತ್ಯಾಕ್ಷೇಪಗಳು ಬಂದು ಗೊಂದಲದ ಪರಿಸ್ಥಿತಿ ನಿರ್ಮಾಣ ವಾಗಿದ್ದಾಗ ಸೇಡಿಯಾಪು ಅವರು 'ಇನ್ನೊಬ್ಬನು ತಂದಿರಿಸಿದ ಕೋಲೊಂದು ಓರೆಯಾಗಿದೆ ಯೆಂದಾದರೆ, ಅದು ಓರೆಯಾಗಿದೆಯೆಂದು ನೂರಾರು ವಿಧಗಳಿಂದ ವಾದ ಮಾಡಿಯೂ ಚರ್ಚೆ ಮಾಡಿಯೂ ಪ್ರಯೋಜನವಿಲ್ಲ, ಮಾಡಬೇಕಾದ ಮುಖ್ಯ ಕೆಲಸ ಚರ್ಚೆ ವಿವಾದ ಗಳಿಲ್ಲದೆ, ನೇರವಾದ ಸರಿಯಾದ ಕೋಲೊಂದನ್ನು ತಂದು ಆ ಕೋಲಿನ ಸಮೀಪವೇ ಇರಿಸುವುದು. ಆಗ ಓರೆಯಾದ ಕೋಲು ಯಾವುದು, ನೆಟ್ಟಗಿರುವ ಕೋಲು ಯಾವುದು ಎಂದು ಎಲ್ಲರಿಗೂ ಸುಸ್ಪಷ್ಟವಾಗಿ ತಿಳಿಯುವುದು' ಎಂದು ಹೇಳಿದರಂತೆ. ಈ ಮಾತನ್ನು ಗಂಭೀರವಾಗಿ ಪರಿಗಣಿಸಿದ ಕುಕ್ಕಿಲ ಕೃಷ್ಣ ಭಟ್ಟರು ಪಾರ್ತಿಸುಬ್ಬನ ಕೃತಿಗಳ ಶಾಸ್ತ್ರೀಯ