ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕಂ, ೧೩ ವರಸಶ್ವೇಶ್ವರನಾಜ್ಞೆಯಿಂದವರವರ್ ಸ್ವಸ್ಕಾಧಿಕಾರಂಗಳಾಂ 1 ತಿರೆ ನೀಂ ಭಕ್ತಿವಿರಕ್ಕಿನಿರ್ಣಯಕೆ ನಾಂ ಕಾಮಕ್ಕೆ ನಿರ್ವಾಹಕಂ || ನಾರದಂ-(ಸೋಪಹಾಸವಾಗಿ) ಮನ್ಮಥಾ ! ಸಾಕು ಸುಮ್ಮನಿರು ! ನಿನ್ನ ನಿರ್ವಾಹಶಕ್ತಿಯನ್ನು ನಾನು ಬಲ್ಲೆನು! ನಿನ್ನನ್ನು ನಂಬಿದವರಿಗೆ ಸೀನೇ ಅಂತಶ್ಯತ್ರುವಾಗಿ ಅವರಿಗೆ ಅನರವನ್ನು ತಂದಿಡುವೆಯೇ ಹೊರತು, ನಿನ್ನನ್ನು ನಂಬಿ ಶ್ರೇಯಸ್ಸನ್ನು ಪಡೆದವರೊಬ್ಬ ರೂ ಇಲ್ಲ ! ಮನ್ಮಥಂ ನಾರದಮುಸೀಂಟಾ ! ಈ ದೇವತೆಗಳು ಕೃತಜ್ಞತೆಯುಳ್ಳ ವರಾಗಿದ್ದರೆ, ಎಂದಿಗೂ ನನ್ನ ವಿಷಯದಲ್ಲಿ ಹಾಗೆಣಿಸಲಾರರು. ಹಿಂದೆ ಅಮೃತಮಥನ ಕಾಲದಲ್ಲಿ, ಮೋಹಿನೀರೂಪವನ್ನು ನೋಡಿ ದಾನವರು ಕಾಮಮೋಹಿತರಾಗದಿದ್ದ ಪಕ್ಷದಲ್ಲಿ, ಈ ದೇವ ತೆಗಳಿಗೆ ಅಮೃತವೆಲ್ಲಿ ಲಭಿಸುತಿತ್ತು ? ಇದಲ್ಲದೆ ಭಸ್ಮಾಸುರ ನೆಂಬ ಕ್ರೂರವಾನವನು,ಭಗವಂತನ ಮೋಹಿನೀರೂಪಕ್ಕೆ ಮರು ಳಾಗದಿದ್ದ ಪಕ್ಷದಲ್ಲಿ, ರುದ್ರನು ಇದುವರೆಗೆ ಕ್ಷೇಮದಿಂದಿರುತಿದ್ದ ನೆ? ಇವೆಲ್ಲಕ್ಕೂ ನಾನಲ್ಲವೇ ಪ್ರೇರಕನು! ಹೀಗೆ ಅನೇಕಸಂದರ್ಭ ಗಳಲ್ಲಿ ನಾನು ಈ ದೇವತೆಗಳನ್ನು ಅಪಾಯದಿಂದ ತಪ್ಪಿಸಿರು ವಾಗ, ನನ್ನನ್ನು ಇಂದ್ರನಿಗೆ ಅಂತಶತ್ರುವೆಂದು ಹೇಳುವೆಯ ಬ್ಲ್ಯಾ ! ಇದು ಒಬ್ಬೊಬ್ಬರಿಗೆ ನಿಷ್ಕಾರಣದ್ವೇಷವನ್ನು ತಂದಿಡ ತಕ್ಕ ನಿನ್ನ ಕಲಹಪ್ರಿಯತ್ವವನ್ನು ತೋರಿಸುವುದೇಹೊರತು ಬೇರೆಯಲ್ಲ ! ಹೀಗೆ ನಾನು ಆಗಾಗ ನನ್ನ ಶಕ್ತಿಯನ್ನು ಪಯೋಗಿ ಸದಿದ್ದರೆ ದೇವತೆಗಳಿಗೆ ಕ್ಷೇಮವೆಲ್ಲಿಯದು? ನಾರದಂ-ಮನ್ಮಥಾ! ಆಹಾ! ನಿನ್ನ ಶಕ್ತಿಯನ್ನು ನಾನೇನೆಂದು ಹೇಳಲಿ ! ದುರ್ಬಲಹೃದಯರನ್ನು ಸ್ವಾಧೀನಪಡಿಸಿಕೊಳ್ಳುವುದರಲ್ಲಿ ನಿನ್ನ ಸಾಮರವೇಹೊರತು ಜಿತೇಂದ್ರಿಯರಮುಂದೆ ನೀನು ತಲೆ ಯೆತ್ತುವುದೆಂದರೇನು ?