ದ್ವಿತೀಯಾಂಕಂ. ೨೫ ಕೊರತೆಯುಂಟು! ನಾನು ನಿಮಗೆ ಹೊಸದಾಗಿ ಹೇಳಿ ತಿಳಿಸಬೇಕಾ ದುದೇನೂ ಇಲ್ಲ! ಆದರೂ ಈಗ ನಾನು, ಈ ಸ್ಥಾನ ಗೌರವಕ್ಕಾ ಗಿ, ನಿಮಗೆ ಒಂದೆರಡು ಮಾತುಗಳನ್ನು ಹೇಳಬೇಕಾಗುವುದು. ಮುಖ್ಯವಾಗಿ ನೀವೆಲ್ಲರೂ ಗಮನಿಸಬೇಕಾದ ವಿಷಯವೇನೆಂದರೆ;- ಪ್ರಜೆಗಳಿಂದ ನಮಗೆ ಸಲ್ಲತಕ್ಕೆ ರಾಜಾದಾಯಗಳೆಲ್ಲವೂ,ಆ ಪ್ರಜೆ ಗಳ ಕ್ಷೇಮಕ್ಕಾಗಿಯೇ ವಿನಿಯೋಗಿಸಲ್ಪಡಬೇಕೆಹೊರತು,ನಮ್ಮ ಭೋಗಾರವಲ್ಲ. ನಮ್ಮ ಸೇನಾಪರಿಕರಗಳೆಲ್ಲವೂ ಶತ್ರುಟೊ ರಾಯಬಾಧೆಗಳಿಲ್ಲದಹಾಗೆ ಪ್ರಜೆಗಳನ್ನು ಕ್ಷೇಮದಿಂದಿರಿಸುವುದ ಕ್ಯಾಗಿಯೇ ಹೊರತು, ಲೋಭಬುದ್ಧಿಯಿಂದ ರಾಜ್ಯವನ್ನು ಹೆಚ್ಚಿ ಸುವುದಕ್ಕಲ್ಲ : ಈ ವಿಚಾರವನ್ನು ನೀವು ನೆನಪಿನಲ್ಲಿಟ್ಟು, ನಿಮ್ಮ ನಿಮ್ಮ ಅಧಿಕಾರಗಳನ್ನು ನಡೆಸುತ್ತ ಬರಬೇಕು, ಮುಖ್ಯವಾಗಿ ನಮ್ಮ ಪ್ರಜೆಗಳಿಗೆ ಯಾವ ವಿಧದ ಹಾನಿಯೂ ಇಲ್ಲದಂತೆ, ಅವರ ನ್ನು ಕ್ಷೇಮದಿಂದ ನಡೆಸುತ್ತಬರುವುದೇ ನಮ್ಮ ಅವಶ್ಯಕಾಠ್ಯವು. ವಸಿಷ್ಠಂ-ರಾಜೇಂದ್ರಾ ! ಸಾಕ್ಷಾನ್ನಾ ರಾಯಣನಿಗೆ ಅಸಾಧಾರಣಚಿಹ್ನ ವಾದ ಸುದರ್ಶನಚಕ್ರವೇ ನಿನಗೆ ಬೆಂಬಲವಾಗಿರುವಾಗ, ನಿನ ದೇಶಕ್ಕಾಗಲಿ, ನಿನ್ನ ಪ್ರಜೆಗಳಿಗಾಗಲಿ, ಹಾನಿಯೆಂದರೇನು ? ಲೋಕದಲ್ಲಿ ನಿನಗಿಂತಲೂ ಪರಮಧನ್ಯರಾರುಂಟು! ರಾಜಂ-ಪೂಜ್ಯರೆ ! ನಿಮ್ಮ ಪ್ರೀತಿವಚನಗಳಿಗಾಗಿ ನಾನು ಕೃತಜ್ಞನಾಗಿ ರುವೆನು. ಆದರೇನು ? ನನಗೆ ಸತ್ವವಿಧದಲ್ಲಿಯೂ ನೀವೇ ಮಾ ರ್ಗದರ್ಶಿಗಳಾಗಿರುವುದರಿಂದ, ನನಗೆ ಯಾವ ಅಭ್ಯುದಯವುಂಟಾ ಗಿದ್ದರೂ, ಅದೆಲ್ಲವೂ ನಿಮ್ಮ ಅನುಗ್ರಹದಿಂದಲ್ಲದೆ ಬೇರೆಯಲ್ಲ! ಅಸಾಧಾರಣವಾದ ಭಗವದನುಗ್ರಹಕ್ಕೆ ನಾನು ಪಾತ್ರನೆಂಬುದ ರಲ್ಲಿ ಸಂದೇಹವೇನು? ಏಕೆಂದರೆ: ಕಂ।l ಘನಮುನಿಗಳಂ ನಿಜದ | ರ್ಶನಮಾತ್ರ ಮನೀಯದಖಿಲಲೋಕೇಶಂ ಮ |
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೩೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.