ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಶ್ರೀಮತೀಪರಿಣ್ಯಂ ತೆನಗಿತ್ತಂ ತನ್ನ ಸುದ || ರ್ಶನಮನೆ! ತನ್ನಂತೆ ಧನ್ಯರಾರಿನ್ನಿಳೆಯೋಳ?|| ಅದುದರಿಂದ:- ರಾಗ. ತಾಳ. ಅಹಹ ನಾನೇ 1 ಧನ್ಯನಖಿ | ಲೋಕಮಾನ್ಯನು | ಮಹಿಯೊಳೆನ್ನ ! ಭಾಗ್ಯಕಾವುದೆಣೆಯೊ | ಕಾಣೆನು!iell ಎನ್ನ ಜನ್ಮ 1 ವೆನ್ನ ಜೀವನ 1 ವೆನ್ನ ಭಾಗ್ಯವು| ಸನ್ನು ತಾಂಗನ | ಸೇವೆಯಿಂದ 1 ಸಫಲವಾದುದು || 11 ೨ || ಸರಸಿಜಾಕ್ಷನ | ಸುಗುಣಕೀರ್ತನೆ | ಸುಧೆಯ ಸವಿಯುವ | ಪರಮಭಾಗ್ಯವೆ / ಭಾಗ್ಯವೆಣಿಸಲಖಿಲಲೋಕಕೆ !! 10 & || ಶರಣಜನಕೆ | ತನ್ನನ ತಾ 1 ನೆರೆದು ಪೋಷಿಪ | ಹರಿಯ ಕರುಣೆ | ದಳತೆಗೆ ನೆರೆ ! ಪಾರಮಾವುದೊ 11, 11 ೪ || ಆದರೇನು ? ಎಲೈ ಅಮಾತ್ಯರೆ ! ಕೇವಲಸ್ವಾರ ಪರರಂತೆ ಈ ನನ್ನ ಭಾಗ್ಯಕ್ಕಾಗಿ ನಾನೇ ಸಂತೋಷಪಡುತ್ತಿರುವುದರಲ್ಲಿ ನನಗೆ ಅಷ್ಟಾಗಿ ಮನಸ್ತ್ರಪ್ತಿಯಿಲ್ಲ! ನನ್ನಂತೆಯೇ ನನ್ನ ಸಮಸ್ತ ಪ್ರಜೆ ಗಳೂ, ಅಶ್ರೀಹರಿಯ ಪರಮಾನುಗ್ರಹಕ್ಕೆ ಪಾತ್ರರಾಗಿ, ಸುಖಿ ಸುತ್ತಿರಬೇಕೆಂಬುದೇ ನನ್ನ ಕೋರಿಕೆ ! ಆದುದರಿಂದ ಎಲೈ ಮಂ ತ್ರಿವರರೆ ! ನಮ್ಮ ದೇಶದ ಗ್ರಾಮಗ್ರಾಮಗಳಲ್ಲಿಯೂ, ಪ್ರಜೆಗ ಳೆಲ್ಲರೂ ಸದಾಹರಿಕೀರ್ತನಪರರಾಗಿದ್ದು, ನಿಷ್ಕಲ್ಮಷವಾದ ಭಕ್ತಿಯಿಂದ ಆ ಭಗವದನುಗ್ರಹಕ್ಕೆ ಪಾತ್ರರಾಗುವಂತೆ ಮಾಡ ಬೇಕಾದುದು ನಮ್ಮ ಪ್ರಧಾನಕಾರವು, ಆ ಶ್ರೀಹರಿಯನ್ನೋಲಿ ಸುವುದಕ್ಕೆ ಭಕ್ತಿಯೋಗಕ್ಕಿಂತಲೂ ಮೇಲಾದ ಉಪಾಯವಿಲ್ಲ. ಯಜ್ಞ, ಯಾಗ, ಜಪ, ತಪಸ್ಸುಗಳೆಲ್ಲವೂ ಆ ಹರಿಕೀರ್ತನೆಯೊಂ ದರಲ್ಲಿಯೇ ಅಡಗಿರುವುವು. ಆದುದರಿಂದ, ಕoll ಹರಿಚರಣಸ್ಕೃತಿಯೆ ತಪಂ ! ಹರಿಗುಣಕೀರ್ತನಮೇ ಸಕಲಮಂತ್ರಜಪಂ ಶ್ರೀ |