೨೮ ಶ್ರೀಮತೀಪರಿಣಯಂ ಸರೋಜಸಂಭವ | ಪುರಾರಿಮುಖಸುರ | ವರಾರ್ಚಿತಾಂಫಿಸ ರೋರುಹಾ ಖಲವಿದಾರ | ನಿಗಮೋದ್ಧಾರ 1 ಭಕ್ತ ಮಂದಾರ | ವರಕರುಣಾಕರಾ ||೨|| ವಿನಾಶಿತಾಖಿಲ ! ಘನಾಮಸಂಕುಲ ! ಕೃಪಾಲವಾಲ ಸು | ನಿರ್ಮಲಾ!! ಭವವಿನಾಶ | ಶುಭವಿಲಾಸ | ಜಯ ಪರೇಶ 1 ಪಂಕಜಲೋಚನಾ 11 ೩ 8. (ಸಭಾಸದರೆಲ್ಲರೂ ಇದಿರೆದ್ದು ನಿಲ್ಲುವರು.!ರಾಜನು ಆಸನದಿಂದ - ಕೆಳಗಿಳಿದು ಬಂದು ) ರಾಜಂ-ಪೂಜ್ಯರಾದ ದೇವಮುಗಳಿಗೆ ವಹಿಸುವೆನು. ನಾರದಂ-ವಿಜಯೀಭವ ! ಪರ್ವತಂ-ಕಲ್ಯಾಣಮಸ್ತು ! ರಾಜಂ-ಪೀಠವನ್ನು ತೋರಿಸಿ) ಪೂಜ್ಯರೆ! ಈ ಪೀಠಗಳನ್ನಲಂಕರಿಸಬೇಕು. (ಎಲ್ಲರೂ ಕುಳ್ಳಿರುವರು) ರಾಜಂ-ಮುನಿವರರೆ : ಮಹಾತ್ಮರಾದ ನಿಮ್ಮ ಪಾದಸ್ಪರ್ಶದಿಂದ ಈಗ ನನ್ನ ಗೃಹವು ಪಾವನವಾಯಿತು, ನಿಮ್ಮ ದರ್ಶನದಿಂದ ನಾನು ಕೃತಾರ್ಥನಾದೆನು, ಆದರೆ ಆಕಸ್ಮಿಕವಾದ ತಮ್ಮ ಆಗಮನಕ್ಕೆ ಕಾರಣವೇನೆಂದು ತಿಳಿಯಲು ನನ್ನ ಮನಸ್ಸು ಕುತೂಹಲಪಡುತ್ತಿ ರುವುದು ! ಮಹರ್ಷಿಗಳ ತಪಸ್ಸಿಗಾಗಲಿ, ಗೋಬ್ರಾಹ್ಮಣರಿಗಾ ಗಲಿ, ಅವರವರ ವರ್ಣಾಶ್ರಮಧರಗಳಿಗಾಗಲಿ ವಿಫುತವೇನೂ ಇಲ್ಲವಷ್ಟೆ ? ಪರ್ವತಂ-ಕಂ।l 'ನೃಪ ನೀಂ ಪಾಲಕನಾಗಿರೆ || ತಪಸ್ವಿಗಳ ತಪಕೆ ನಿಮ್ಮ ಮೆತ್ತಣಿನಕ್ಕುಂ ! ತಪನಂ ಪ್ರಜ್ವಲಿಸುತ್ತಿರೆ ವಿಪುಲಾಮಂಡಲದ ತಿಮಿರಮೆಂತುವಿಕುಂ ?” ನಾರದ-ರಾಜೇಂದ್ರಾ ! ನಿನ್ನ ತೇಜಃಪ್ರಭಾವದಿಂದಲೇ ತಪೋವಿಘ್ನು ಗಳೆ ಲ್ಲವೂ ನಾಶವಾಗುವುವು. ಭಗವಂತನ ಸುದರ್ಶನಚಕ್ರವು ನಿನ್ನ ಹಸ್ತಗತವಾಗಿರುವುದರಿಂದ, ಚಕ್ರಪಾಣಿಯಾದ ಆ ಶ್ರೀಮನ್ನಾ ರಾಯಣನ ಸಾಕ್ಷಾದರ್ಶನದಂತೆ ನಿನ್ನ ದರ್ಶನವೇ ನಮ್ಮ ತಪಸ್ಸಿ ಗೆ ಫಲರೂಪವಾಗಿರುವುದು.
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.