೩೪ ಶ್ರೀಮತೀಪರಿಷಯಂ ಸಿದ ಅನಾರದನಿಗೆ ತಕ್ಕ ಪ್ರತಿಕ್ರಿಯೆಯನ್ನು ಮಾಡದೆ ತೀರದು! ಹರಿಹರಬ್ರಹ್ಮಾದಿಗಳನ್ನೂ ಮೋಹಪಾಶದಲ್ಲಿ ಬಂಧಿಸಿ, ತ್ರೆ, ಲೋಕ್ವಿಜಯಿಯೆಂಬ ಖ್ಯಾತಿಯನ್ನು ಹೊಂದಿದ ನಾನು, ಆ ಬ ಡಯೋಗಿಯನ್ನು ನನ್ನ ಕಾಮಪಾಶದಲ್ಲಿ ಕಟ್ಟಲಾರದೆಹೋದ ರೆ, ಈ ಧನುರ್ಬಾಣಗಳನ್ನು ಹೊತ್ತು ಫಲವೇನು ? ಇರ ಲಿ! ಆ ನಾರದನನ್ನು ಕ್ಷಣಮಾತ್ರವಾದರೂ ನನ್ನ ಕಾಮಪಾಶ ದಲ್ಲಿ ಬಂಧಿಸದೆ ಬಿಡುವವನಲ್ಲ! (ಸ್ವಲ್ಪ ಹೊತ್ತು ಚಿಂತಿಸಿ) ಆದರೆ ಈಗ ಪತಮುಸಿಯೂ ನಾರದನ ಜತೆಯಲ್ಲಿರುವನು ! ಅ ವನೂ ನನ್ನ ವಿರೋಥಿಕೋಟೆಯಲ್ಲಿಯೇ ಸೇರಿ, ನನ್ನನ್ನು ದ್ವೇಷಿ ಸುತ್ತಿರುವನು. ನಾನು ಪ್ರಯತ್ನ ಪೂರಕವಾಗಿ ಆ ನಾರದನ ಮನಸ್ಸನ್ನು ಕದಲಿಸುತ್ತ ಬಂದರೂ, ಪರೂತನು ಅವನ ಸಮೀಪದಲ್ಲಿಯೇ ಇರುವುದರಿಂದ, ಆಗಾಗ ಅವನಿಗೆ ಸಮ ಯೋಚಿತವಾದ ಬೋಧನೆಗಳಿಂದ ಅವನನ್ನೆ ಚರಿಸಿ, ಅವನ ಬುದ್ಧಿ ಯು ಕದಲದಂತೆ ಮಾಡಬಹುದು. ಆಗ ನನ್ನ ಸಾಹಸವೆಲ್ಲವೂ ವಿಫಲವಾಗುವುದು. ಆದುದರಿಂದ ಆ ನಾರದಪರೈತರಿಬ್ಬರನ್ನೂ ಈ ನನ್ನ ಪಪ್ಪಬಾಣದಿಂದ ಏಕಕಾಲದಲ್ಲಿಯೇ ಮೋಹಗೊಳಿಸಿ ಕಾಮಪಾಶದಲ್ಲಿ ಕಟ್ಟಿ, ಅವರವರಲ್ಲಿಯೇ ಪರಸ್ಪರಮಾತ್ಸರವ ನ್ನು ಹುಟ್ಟಿಸುವೆನು. ಇನ್ನು ಕಾಲವಿಳಂಬವು ಸಾಕು ! ಹೊತ್ತು ಮೀರುವುದು! ಇದೊ ಹೊರಡುವೆನು. ರಾಗ - ನೋಟು - ತಾಳ. ಇದೊ'ಪೋಗುವೆ | ನಿದೆ! ಪೋಗುವೆ | ನಿದೊ ಪೋಗಿ ಸೇರುವೆ | ನಾ ಬೇಗ! ಸಾಗದ ಗದೆ 1 ಬೀಗಿದ ನಾರದ (ಯೋಗಿಯ ಮದವುಡುಗಿಸಲೀಗ | ಛಲವ ಮೀರಿ | ಬಲವ ತೋರಿ ಮೆರೆವ ವೈರಿ/ವಜವ ಸಾರಿ? ಭಂಗಿಪ ನನ್ನ ಶರಾಳಿಯ! ಬಲುಮೆಗೆ | ನಿಲುವನೆ ಫಡಫಡ ಬಡಜೋಗಿ|| ಸುರಾಸುರರ ) ನಿರಾಕರಿಸಿ | ಪರಾಭವಿಪ ಶರಾಸನದಿ { ೧ | ಆ ಬಡಮ್ನಿಯ | ಭಕ್ತಿವಿರಕ್ತಿಗೆ 1 ಮುಕ್ತಿಯನೀಗಲೆ | ಸಲಿಸುವೆನು||೨|| ಎಂದು ಹೋಗುವನು.
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.