ತೃತೀಯಾಂಕಂ. ( ಆಸ್ಥಾನ:-ಅರಮನೆಯ ಗೃಹೋದ್ಯಾನ. (ನಿಯಮಸಿಷ್ಠಳಾದ ಶ್ರೀಮತಿಯು, ಮಂತ್ರಕಲಶದ ಮುಂದೆ.. ಧೂಪದೀಪಾದಿಪೂಜಾಸಾಮಗ್ರಿಗಳೊಡನೆ ನಿಂತಿರುವಳು. ರಾಜ ಪತ್ತಿ ಯು ಅವಳ ಪಕ್ಕದಲ್ಲಿರುವಳು. ಸುಮಂಗಲಿಯರೂ, ವೃದ್ಧ ತಾಪಸಿಯರೂ ನೆರೆದಿರುವರು.) ರಾಜಪತ್ನಿ -ಕುಮಾರೀ ! ಗಂಧಪುಷ್ಮಾದಿಗಳಿಂದ ಕಲಶವನ್ನು ಪೂಜಿಸಿ, - ಅಂಜಲಿಬಂಧಪೂರೈಕವಾಗಿ ನಿನ್ನ ಇಷ್ಟಸಿದ್ಧಿಯನ್ನು ಪ್ರಾಸು! ಶ್ರೀಮತಿ-(ಪೂಜೆಯನ್ನು ಮುಗಿಸಿ ಕೈಮುಗಿದು ನಿಂತು ಪ್ರಾರ್ಥಿಸುವಳು.) - ಶ್ರೀರಾಗ - ಆದಿ - ತಾಳ ಪಾಲಿಸ್ | ಪಂಕಜನಾಭನ ರಾಣಿ ಪಾಲಿಸಾಗುಣಮಣಿ ಫಣಿವೇಣಿ। ಪಾಲಿಸೆನ್ನ ಪ | ಬ್ಯಾಲಯೆ ಸದಯೆ ! ನೀಲವೇಣಿ ನವ ಪಂಕಜಪಾಣಿ! ಬಾಲಚಂದ್ರನಿಭ | ಫಾಲೆ ಸುಶೀಲೆ | ಪಾಲಿಸೆನ್ನ ನಿಗೆ ಮಾಗಮವಿನುತೆ ೧ || ಇಂದೀವರಾಕ್ಷೀ ಶ್ರೀವರಲಕ್ಷಿ : ವಂದಾರುಜ | ನಾನಂದಕಟಾಕ್ಷಿ | ಕುಂದಕುಸುಮಕು | ಟ್ರ ಲಭರದನೆ | ಮಂದಹಾಸರುಚಿ | ಸುಂದರವದನೆ! ಮಂದರಾದ್ರಿಧರ | ಹೃದಯೋಲ್ಲಾಸಿನಿ | ವಂದಿಸಿ ನಿನ್ನನು ಬೇಡುವೆ ಜನನಿR೨೧ ಭಾಮಾಮಂ | ಡಲಮಣಿ ಮಂಜುಳವಾಣಿ | ಕಾಮಾರಿಕರಾರ್ಚಿತೆ ಕಲ್ಯಾಣಿ) ಸಾಮಜಗಾಮಿನಿ | ಕಾಮಿತದಾಯಿಸಿ | ಕಾಮಜನನಿ ಕಲಿ | ಕಲ, ಷನಾಶಿನಿ | ಕಾಮಿತಾರವಿತ್ತೆನ್ನನು ಕಾಯೆ | ಕೋಮಲಾಂಗಿ ಕರುಣಾಲಯೆ ತಾಯೆ೩ (ಶ್ರೀಮತಿಯು ಹೀಗೆ ಸ್ತೋತ್ರವನ್ನು ಮಾಡಿ ನಮಸ್ಕರಿಸುವಳು) (ಕಂಚುಕಿಯು ಪ್ರವೇಶಿಸುವನು.) ಕಂಚುಕಿ ದೇವಿ ! ಮಹಾರಾಜನು ಧರಾಸನದಲ್ಲಿರುವನು! ದೇವರ್ಷಿಗಳಾ ದನಾರದಪರೈತರಿಬ್ಬರೂ,ರಾಜದರ್ಶನಾರವಾಗಿ ಬಂದಿರುವರು. ಅಲ್ಲಿನ ರಾಜಕಾರವು ಮುಗಿದಕೂಡಲೇ, ಮಹಾರಾಜನು ಬರುವ ನು, ಆಮಹರ್ಷಿಗಳನ್ನು ಮಾತ್ರ ಮಂದಾಗಿಯೇ ಇಲ್ಲಿಗೆ ಕಳುಹಿಸಿ ಕೊಡುವುದಕ್ಕಾಗಿ, ಇಲ್ಲಿನ ಸಮಯವನ್ನು ತಿಳಿದುಬರುವಂತೆ ಹೇಳಿಕಳುಹಿಸಿರುವನು.
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.