ಈ ಪುಟವನ್ನು ಪ್ರಕಟಿಸಲಾಗಿದೆ
೧೦೪
ಶ್ರೀ ರಾಮಕೃಷ್ಣ ಪರಮಹಂಸರ

ಎಲ್ಲೆಲ್ಲಿಗೆ ಎತ್ತಿಕೊಂಡುಹೋದರೆ ಅಲ್ಲಲ್ಲಿಗೆ ಹೊರಟುಹೋಗುತ್ತದೆ.ಅದರ ಹಾಗೆ. ಅವನ ಮೇಲೆ ಭಾರಹಾಕಿದ್ದು ಬಿಡಬೇಕು. ಚೈತನ್ಯವಾಯುವು ಹ್ಯಾಗೆ ಹ್ಯಾಗೆ ಮನಸ್ಸನ್ನು ತಿರುಗಿಸುತ್ತೋ ಹಾಗೆ ಹಾಗೆತಿರುಗಬೇಕು---ಇಷ್ಟೆ! ಇನ್ನೇನು? ” ಎಂದರು. ಹೀಗೆ ಹೆಂಗಸರು,ಗಂಡಸರು, ಯುವಕರು, ಯುವತಿಯರು, ವೈದ ರು, ವಿಧವೆಯರು,ಸಧವೆಯರು ಯಾರು ಬಂದರೂ ಅವರವರಿಗೆ ತಕ್ಕ ಮಾರ್ಗವನ್ನುಅವರವರಿಗೆ ತಕ್ಕ ರೀತಿಯಲ್ಲಿ ಬೋಧಿಸುತ್ತಿದ್ದರು. ಮೇಲೆ ಕೊಟ್ಟರುವ ಕೆಲವು ಉದಾಹರಣೆಗಳಿಂದ ಒಬ್ಬರಿಗೆ ಹೇಳಿದ ಮಾರ್ಗವುಮಿಕ್ಕವರಿಗೆ ಎಂದಿಗೂ ಸರಿಹೋಗಲಾರದೆಂದು ಪಾಠಕರೇ ತಿಳಿದುಕೊಳ್ಳಬಹುದು.

ಆದರೆ ಕೆಲವು ಅಸಹ್ಯಕರಗಳಾದ ಕೈಶಕರಗಳಾದ ತಾಂತ್ರಿಕ,ಕಾಪಾಲಿಕ ಮುಂತಾದ ಮಾರ್ಗಗಳನ್ನು ಮಾತ್ರ ಯಾರಿಗೂಅನುಸರಿಸುವ ಹಾಗೆ ಹೇಳುತ್ತಿರಲಿಲ್ಲ. ಅವೆಲ್ಲ ನಿರುಪಯೋಗವೆಂದಾಗಲಿ ಸುಳ್ಳೆಂದಾಗಲಿ ಅವರ ಅಭಿಪ್ರಾಯವಲ್ಲ. ಆ ವಿಚಾರವಾಗಿ “ಎಲೋ ದ್ವೇಷಬುದ್ದಿ ಯಾಕೋ ? ಅದೂ (ಕಾಪಾಲಿಕಅಥವಾ ತಾಂತ್ರಿಕಮಾರ್ಗ) ಒಂದುಮಾರ್ಗ. ಆದರೆ ಕೊಳಕುಮಾರ್ಗ. ಒಂದು ಮನೆಯೊಳಗೆ ಹೋಗುವುದಕ್ಕೆ ಎಷ್ಟೋ ಬಾಗಿಲುಗಳಿವೆ. ದೊಡ್ಡ ಬೀದಿಯ ಬಾಗಿಲಿದೆ, ಕಿಟಕಿಯ ಬಾಗಿಲಿದೆ.ಗುಡಿಸುವವನು ಬರುವುದಕ್ಕೆ ಹಿತ್ತಿಲುಕಡೆ ಒಂದು ಬಾಗಿಲೂಇದೆ. ಎಲ್ಲವನ್ನೂ ಬಿಟ್ಟು ಈ ಹಿತ್ತಿಲಿನ ಕೊಳಕು ಬಾಗಿಲಿಂದಏಕೆ ಬರಬೇಕು ? ” ಎಂದು ಹೇಳುತ್ತಿದರು. ಇದಕ್ಕೆ ಕಾರಣವೇನೆಂದರೆ ಅವರು ನಮ್ಮಂತೆ ಸ್ಕೂಲವಾದ ದೇಹವನ್ನು ನೋಡದೆಪ್ರತಿಯೊಬ್ಬರ ಮನಸ್ಸನ್ನೂ ಹೃದಯವನ್ನೂ ನೋಡಬಲ್ಲವರಾಗಿದರು. ರೋಗಿಯ ಸ್ಥಿತಿಯನ್ನು ತಿಳಿದುಕೊಂಡ ವೈದ್ಯನಂತೆ ಅವರವರ ಮನಸ್ಸು, ಸ್ವಭಾವ, ಸಂಸ್ಕಾರ, ಮುಂತಾದುವುಗಳಿಗೆ ಸರಿಯಾದ ಮಾರ್ಗವನ್ನು ವಿಧಿಸಿ ಅವಶ್ಯವಿದ್ದರೆ ಅವುಗಳನ್ನು ಹೇಗೆಬೇಕೋ ಹಾಗೆ ತಿರುಗಿಸುತ್ತಿದ್ದರು!