ಈ ಪುಟವನ್ನು ಪ್ರಕಟಿಸಲಾಗಿದೆ
ಚರಿತ್ರೆ

ಜಂತುಗಳಂತೆ ಪಾಶ್ಚಿಮಾತ್ಯರನ್ನು ಅನುಸರಿಸುತ್ತ ಬಂದೆವು. ಇದರಿಂದ ಪ್ರತಿಯೊಂದಕ್ಕೂ ಅವರನ್ನೇ ನೆಚ್ಚಿಕೊಳ್ಳಬೇಕಾಯಿತು. ಭಾರತೀಯರು ಯೋಗಭೋಗಭ್ರಷ್ಟರಾಗಿ ನಾವಿಕನಿಲ್ಲದ ನಾವೆಯಂತೆ ಐಹಿಕಾಮುಷ್ಮಿಕಗಳೆರಡರಲ್ಲಿಯೂ ಕೇವಲ ಅಸಹಾಯರಾದರು.

ಈ ಸಮಯದಲ್ಲಿಯೇ ಪಾದ್ರಿಗಳು ಬಂದು ನಮ್ಮ ಕೋಟ್ಯನುಕೋಟಿ ದೇವತೆಗಳೂ ವಿಗ್ರಹಾರಾಧನೆಯೂ ಅಸಂಖ್ಯಾತವಾದ ಜಾತಿ ಭೇದಗಳೂ ಅನರ್ಥಕಾರಿಗಳೆಂದೂ ಇವೆಲ್ಲಾ ಹಾಳಾದರೆ ಈ ಅರ್ಧಬರ್ಬರ (half-barbarous) ಭಾರತ ದೇಶವು ನಾಗರಿಕತೆಯನ್ನು ಪಡೆದು ಉದ್ಧಾರವಾದೀತೆಂದೂ ಉದ್ಘೊಷಿಸುತ್ತಾ ಬಂದರು. ಅಲ್ಲಲ್ಲೇ ಸಮಾಜಗಳನ್ನೂ ಸಭೆಗಳನ್ನೂ ಏರ್ಪಾಡುಮಾಡಿ ಸ್ತ್ರೀ ಸ್ವಾತ೦ತ್ರ್ಯ : ವಿಧವಾವಿವಾಹ ಮುಂತಾದ ಸಮಾಜಸಂಸ್ಕಾರಗಳನ್ನು ಪ್ರಚಾರಕ್ಕೆ ತಂದು ನಿರ್ಜೀವವಾದ ಭರತಖಂಡಕ್ಕೆ ಜೀವವನ್ನು ತುಂಬುತ್ತೇವೆಂದು ತಿಳಿದುಕೊಂಡರು. ಆದರೆ ರೋಗಿಯ ರೋಗವನ್ನು ಪರೀಕ್ಷೆ ಮಾಡದೆ ಔಷಧಿಯನ್ನು ಕೊಟ್ಟರೆ ರೋಗ ಗುಣವಾಗುವುದು ಹೇಗೆ ? ಹೋಗುತ್ತಿದ್ದ ಜೀವವು ಪುನಃ ಬರುವುದು ಹೇಗೆ ? ಜಡವಾದಿಗಳಾದ ಪಾಶ್ಚಿಮಾತ್ಯರು ಈ ರೋಗವನ್ನು ಹೇಗೆ ತಾನೇ ಗುರುತಿಸಬಲ್ಲರು ? ಧರ್ಮವೇ ಭಾರತದ ಜೀವ. ಆ ಜೀವವನ್ನು ಪೋಷಿಸದಿದ್ದರೆ ಅದು ಹೇಗೆ ಉದ್ಧಾರವಾದೀತು ? ನಾಸ್ತಿಕ ಪಾಶ್ಚಾತ್ಯರಿಂದ ಧರ್ಮಗ್ಲಾನಿ ಹೇಗೆ ಗುಣವಾದೀತು ? ಧರ್ಮಗ್ಲಾನಿಯು ಪಶ್ಚಿಮದಿಂದ ಪ್ರವಹಿಸಿ ಎಲ್ಲೆಲ್ಲಿಯೂ ಹರಡಿ ಹೋಯಿತು. ಜನರು ಐಹಿಕ ಸುಖವೆಂಬ ಬಿಸಿಲುಗುದುರೆಯನ್ನು ಬೆನ್ನು ಹತ್ತಿ ಬಳಲಿ ಬೇಸತ್ತು ಹೋದರು. ಈ ನಮ್ಮ ವೇದನೆಯನ್ನೂ ಅಶಾಂತಿಯನ್ನೂ ನಮ್ಮ ಸಮಕ್ಕೆ ಅನುಭವಿಸಿ ಮರುಕಪಟ್ಟು ಸರಿಯಾದ ಧರ್ಮವನ್ನು ಬೋಧಿಸಬಲ್ಲ ಮಹಾನುಭಾವನಾವನು? ಪಾಶ್ಚಿಮಾತ್ಯರ ಸಂಯೋಗ