ಈ ಪುಟವನ್ನು ಪ್ರಕಟಿಸಲಾಗಿದೆ

೩೨

ಶ್ರೀ ರಾಮಕೃಷ್ಣ ಪರಮಹಂಸರ

ಯಾವದೇವತೆಯ ವಿಚಾರವಾಗಿ ಧ್ಯಾನಮಾಡುತ್ತಿದ್ದನೋ ಆ ದೇವತೆಯ ವಿಷಯಕವಾದ ಒಂದು ವಿಧವಾದ ದಿವ್ಯ ದರ್ಶನವಾಗುತ್ತಿತ್ತೆಂದು ಹೇಳುವನು. ಚಂದ್ರಾದೇವಿ ಮುಂತಾದವರು ಮೊದಲು ಮೊದಲು ಇದನ್ನು ಕಂಡು ಹೆದರುತ್ತಿದ್ದರೂ, ಗದಾಧರನ ದೇಹಾರೋಗ್ಯವು ಯಾವರೀತಿಯಲ್ಲಿಯೂ ಕೆಡದಿದದನ್ನ ನೋಡಿ ಆಮೇಲೆ ಅಷ್ಟು ಲಕ್ಷ್ಯಮಾಡುತ್ತಿರಲಿಲ್ಲ. ಕ್ರಮೇಣ ಈ ವಿಧವಾದ ಭಾವಸಮಾಧಿಯ. ಅವನಿಗೆ ಅಭಾಸವಾಗಿ ಇಷ್ಟ ಪಟ್ಟಾಗ ಬರುವಂತಾಯಿತು.

ಇವನ ಧರ್ಮಪ್ರವೃತ್ತಿಯು ಅಭಿವೃದ್ಧಿಯಾದಂತೆ ವಿದ್ಯಾಭ್ಯಾಸ ಮಾತ್ರ ವೃದ್ಧಿ ಹೊಂದಲಿಲ್ಲ. ಪಂಡಿತ ಭಟ್ಟಾಚಾರಮುಂತಾದ ಬಿರುದುಗಳನ್ನು ಪಡೆಯುವುದು ಕೇವಲ ಧನದಾಸೆಯಿಂದಾಗಲೀ ಅಥವಾ ಐಹಿಕ ಭೋಗಸುಖಗಳನ್ನು ಪಡೆಯುವುದಕ್ಕಾಗಲೀ ಸಾಧನಗಳೆಂದು ತಿಳಿದು ಲೌಕಿಕ ಸಿದ್ಯಾಭ್ಯಾಸ ವಿಚಾರದಲ್ಲಿ ಅವನು ಉದಾಸೀನನಾದನು. ಅದಕ್ಕೆ ಬದಲಾಗಿ ತನ್ನ ತಂದೆಯ ವೈರಾಗ್ಯ, ದೇವಭಕ್ತಿ, ಸತ್ಯ, ಸದಾಚಾರ, ಧರ್ಮ ಪಾರಾಯಣತೆ ಇನೇ ಅವನಿಗೆ ಅಭ್ಯಾಸಕ್ಕೆ ಯೋಗ್ಯವಾಗಿ ಕಂಡುಬಂದುವು. ಪ್ರಪಂಚದಲ್ಲಿ ಎಲ್ಲರೂ ಅನಿತ್ಯವಾದ ಸಂಸಾರವನ್ನು ನಿತ್ಯವೆಂದು ಭ್ರಮೆಗೊಂಡು, ಸರ್ವದಾ ದುಃಖಸಾಗರದಲ್ಲಿ ಮುಳುಗಿರುವರೆಂದು ತಿಳಿದು ಅವನನನಸ್ಸಿಗೆ ತುಂಬ ಕೊರತೆಯಾಯಿತು. ಪಾಠಕರು ಇದನ್ನು ಓದಿ “ ಹನ್ನೆರಡು ವರ್ಷದ ಹುಡುಗನಿಗೆ ಇಷ್ಟು ಸೂಕ್ಷ್ಮ ಬುದ್ದಿಯೂ, ವಿಚಾರಶಕ್ತಿಯೂ ಎಲ್ಲಿಯಾದರೂ ಇರಬಹುದೇ? ” ಎಂದು ಆಕ್ಷೇಪಿಸಬಹುದು. ಸಾಧಾರಣವಾದ ಹುಡುಗರಿಗೆ ಎಂದಿಗೂ ಇರುವುದಿಲ್ಲ. ನಿಜ. ಆದರೆ ಗದಾಧರನು ಸಾಮಾನ್ಯ ಹುಡುಗನೇ? ಅವನು ಅಸಾಧಾರಣ ಬುದ್ದಿ ಮತ್ತು ಮಾನಸಿಕ ಸಂಸ್ಕಾರಗಳೊಡನೆಯೇ ಜನ್ಮಗ್ರಹಣ ಮಾಡಿದನು. ವಯಸ್ಸು ಚಿಕ್ಕದಾದರೂ ಆ ಶಕ್ತಿ ಎಲ್ಲಿಹೋದೀತು ? ಅಂತೂ ಪಾಠಶಾಲೆಗೆ