ಈ ಪುಟವನ್ನು ಪ್ರಕಟಿಸಲಾಗಿದೆ
೮೦
ರಾಮಕೃಷ್ಣಪರಮಹಂಸರ

ಬಹುದು. ಮತ್ತೆ ಕೆಲವರು ಕಾಪಾಲಿಕ ಮುಂತಾದವರ ಪೂಜೆಪುರಸ್ಕಾರಗಳ ವಿಚಾರವಾಗಿ ಗ್ರಂಥಗಳಲ್ಲಿ ಓದಿರಬಹುದು. 'ದೇವಿಯ ಉಪಾಸಕರು', 'ನರಸಿಂಹದೇವರ ಉಪಾಸಕರು' ಎಂದು ಮುಂತಾಗಿ ಜನಗಳು ಹೇಳುತ್ತಿರುವುದನ್ನು ಕೇಳಿರಬಹುದು. ಇವೆಲ್ಲವೂ ಉದ್ದೇಶ್ಯಹೀನವಾಗಿ, ಮಾಡುವವರಿಗೆ ಅಹಂಕಾರ ಜನಕವಾಗಿ, ನೋಡುವವರಿಗೆ ಕುತೂಹಲ ಜನಕವಾಗಿ, ಕ್ಷುದ್ರವಾದ ಫಲಜನಕವಾಗಿ ಪರಿಣಮಿಸಿವೆಯೆಂದು ಹೇಳಿದರೆ ಸುಳ್ಳಾಗಲಾರದು. ಹರಣೆಗಾಗಿ ಶ್ರೀಚಕ್ರ ಮುಂತಾದುವುಗಳನ್ನು ಪೂಜೆಮಾಡ ತಕ್ಕವರು ಅದರ ವಿಸ್ತಾರವಾದ ಪೂಜಾ ಕಲಾಪಗಳಲ್ಲಿ ಮುಳುಗಿಹೋಗಿ ಹೊರಗಿನ ಆಡಂಬರಗಳನ್ನೇ ಮೆಚ್ಚುತ್ತಿರುವರು. ಸಂಚಿತನಾದ ಅಲ್ಪ ಸ್ವಲ್ಪ ಯೋಗಶಕ್ತಿಯನ್ನು ಮತ್ತೊಬ್ಬರಿಗೆ ಕೇಡುಮಾಡುವುದರಲ್ಲಿಯೋ, ರೋಗ ರುಜಿನಗಳನ್ನು ನಾಶಮಾಡುವದರಲ್ಲಿಯೋ ಪ್ರಯಮಾಡಿಬಿಡುವರು. ಜನಗಳು ಇವರನ್ನು ಹೊಗಳಿದರೆಂದರೆ ಅಹಂಕಾರವು ಹೆಚ್ಚುವುದು.( ಕಾಮಕ್ರೋಧಾದಿಗಳನ್ನು ತಡೆದು, ಸಂಯವನ್ನು ಬಲಪಡಿಸಿಕೊಂಡು, ಅಭ್ಯಾಸ ವೈರಾಗ್ಯಗಳ ಮೂಲಕ ಚಿತ್ತೈಕಾಗ್ರತೆಯನ್ನೂ ಚಿತ್ರಶುದ್ಧಿಯನ್ನೂ ಪಡೆದು ಈಶ್ವರಸಾಕ್ಷಾತ್ಯಾರಮಾಡಿಕೊಳ್ಳುವುದೇ ಈ ಸಾಧನಗಳ ಉದ್ದೇಶ.) ಅದಕ್ಕೆ ಗಮನಕೊಡದೆ ಇನ್ನೂ ಕಾಮಕ್ರೋಧಗಳಿಗೆ ಅವಕಾಶಕೊಡುತ್ತ ಅಹಂಕಾರ ಮಮಕಾರಗಳ ಪಾಶಕ್ಕೆ ಸಿಕ್ಕಿ ತಾವೂ ಮರುಳಾಗಿ ಜನಗಳನ್ನೂ ಮರುಳುಗೊಳಿಸುತ್ತ ಹೋದರೆ ಸಾಧನಗಳ ಉದಾರ ವಾದ ಉದ್ದೇಶವೇ ಮರೆತು ಹೋಗಿ, ಇಂಥ ತಾಂತ್ರಿಕ ಮುಂತಾದ ಸಾಧಕರಲ್ಲಿ ಒಂದು ವಿಧವಾದ ಭಯವೂ ಅಸಹ್ಯತೆಯೂ ಹುಟ್ಟಿದರೆ ಆಶ್ಚರ್ಯವೇನು?

ಶ್ರೀ ಶ್ರೀರಾಮಕೃಷ್ಣ ಪರಮಹಂಸರ ಸಾಧಕಭಾವವನ್ನು ಆಲೋಚನೆ ಮಾಡಿದರೆ ಈ ಕೆಳಗೆ ಬರೆದಿರುವ ಅಂಶಗಳು ವಿಶದವಾಗಿ ತಿಳಿಯಬರುವುವು.