ಈ ಪುಟವನ್ನು ಪರಿಶೀಲಿಸಲಾಗಿದೆ

೨೭ ಘಂಟೆಗಳಲ್ಲಿ

೧೯

ತನ್ನ ಕಡೆಯ ಕಿಟಕಿಯಿಂದಾಚೆ ತಲೆಹಾಕಿ ದೇವರನ ಕಡೆಗೆ ಗಮನಕೊಟ್ಟ. ೫-೩೫ ಆಗಲು ಮೊದಲನೆಯ ಘ೦ಟೆಯ ಶಬ್ದ ಕೇಳಿಬಂತು. ಅಲ್ಲಿ ಇಲ್ಲಿ ಎಲ್ಲಕಡೆಯೂ ಅರಸಿ ಕೊನೆಗೆ ಪ್ಲಾಟ್‌ಫಾರಮ್ಮಿನ ಒಂದು ಮೂಲೆಯಲ್ಲಿ ದೇವರತ್ನನು ಷರಾಯಿ ಜೇಬುಗಳಲ್ಲಿ ಕೈಯಿಟ್ಟುಕೊಂಡು ನಿಂತಿದ್ದುದನ್ನು ಕ೦ಡ, ಮತ್ತೆ ರೈಲು ಕದಲುವವರೆಗೂ ಗಿರೀಶನು ಅವನ ಮೇಲಿಂದ ತನ್ನ ದೃಷ್ಟಿಯನ್ನು ಹೊರಳಿಸಲಿಲ್ಲ. ಘಂಟೆ ೫-೪೦ ಆಯಿತು. ರೈಲು ಕದಲಿತು. ದೇವರತ್ನನು ಗಿರೀಶನಿಗೆ ಭರವಸೆಕೊಟ್ಟಿದ್ದಂತೆ ಬೇರೆ ಕಂಪಾರ್ಟ್‌ಮೆಂಟಿಗೆ ಹತ್ತಿ ಕೂಡುವ ಪ್ರಯತ್ನವನ್ನೇ ಮಾಡಲಿಲ್ಲ. ರೈಲು ಗು೦ತಕಲ್ ಸ್ಟೇಷನ್ನನ್ನು ದಾಟಿತು, ಗಿರೀಶನು 'ನಾನಂದು ಕೊಂಡಂತೆಯೇ ಮಾಡಿದ' ಎಂದುಕೊಂಡು ಕಿಟಕಿಯಿಂದ ತಲೆಯನೊಳಕ್ಕೆ ತೆಗೆದುಕೊಂಡು, ಒಂದು ಸಿಗರೇಟು ಹಚ್ಚಿ ಬಾತ್ ರೂಮಿನ ಕಡೆ ನೋಡಿದ. ಶಶಿಯು ತನಗಾಗಿ ಕಾದಿದ್ದ ದೌರ್ಭಾಗ್ಯದ ಅರಿವೇ ಇಲ್ಲದೆ 'ಬಾತರೂಮಿ'ನಲ್ಲಿ ತನ್ನ ಶೃಂಗಾರದಲ್ಲಿ ಮಗ್ನಳಾಗಿದ್ದಳು. ಗಿರೀಶನು ಯೋಚನಾಮಗ್ನನಾಗಿ ಕುಳಿತನು.

ರೈಲು ಗುಂತಕಲ್ ಸ್ಟೇಷನ್ನನ್ನು ಬಿಟ್ಟು ಮೂರು ನಾಲ್ಕು ಮೈಲಿಗಳಷ್ಟು ದೂರ ಹೋಗಿತ್ತು. ಆ ವೇಳೆಗೆ ಶಶಿಯು 'ಬಾತ್‌ರೂಮಿ'ನಿಂದ ತನ್ನ ಮುಖಾಲಂಕಾರವನ್ನು ಮುಗಿಸಿಕೊಂಡು ಹೊರಕ್ಕೆ ಬಂದಳು. ಕಂಪಾರ್ಟ್‌ಮೆಂಟಿನಲ್ಲಿ ಗಿರೀಶನೊಬ್ಬನೇ ಇದ್ದುದನ್ನು ಕಂಡು 'ಇವರೆಲ್ಲಿ?' ಎಂದು ಕೇಳಿದಳು.

'ಪ್ಲಾಟ್‌ಫಾರಮ್ಮ'ನ ಮೇಲೆ ಓಡಾಡುತ್ತಿದ್ದರು. ಅವರು ಆ ಕೊನೆಯಲ್ಲಿದ್ದಾಗಲೇ ರೈಲು ಕದಲಿತು ಬಹುಶಃ ಅಲ್ಲೇ ಹತ್ತಿರದ 'ಕಂಪಾರ್ಟ್‌ಮೆಂಟ'ಗೆ ಹತ್ತಿಕೊಂಡಿರಬೇಕು. ಮುಂದಿನ ಸ್ಟೇಷನ್ನಿನಲ್ಲಿ ಬರಬಹುದು” ಎಂದು ಗಿರೀಶನು ಉತ್ತರಕೊಟ್ಟ. ಶಶಿಯು ನಿಶ್ಚಿಂತಳಾಗಿ ತನ್ನ ಸೋಪು, ಟವಲು, ಕುಂಕುಮದ ಭರಣಿ,