ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೇಳಿ, ಅವಳನ್ನು ಸಮಾಧಾನಗೊಳಿಸಬೇಕೆಂಬುದು ಅವನ ಚುರುಕು ಬುದ್ಧಿಗೆ ಹೊಳೆಯದಾಯಿತು. ಅವನು ಮೊದಲು ಬೊಂಬಾಯಿಗೆ ಬಂದಾಗ ಕೇವಲ ನಿರ್ಗತಿಕನಾಗಿ ಬಂದಿದ್ದನು ; ತನ್ನ ಬುದ್ಧಿ ಸಾಮರ್ಥ್ಯದಿಂದ ಚಾತುರದಿಂದ ಇಂದು ಹಲವಾರು ಸಹಸ್ರ ರೂಪಾಯಿಗಳನ್ನು ಸುಲಲಿತವಾಗಿ ಕೈಯಲ್ಲಿ ಓಡಾಡಿಸಬಲ್ಲಂತಹವ ನಾಗಿದ್ದ. ಅವನು ತಮ್ಮ ಗೆಳೆಯನೆಂದು ಹೇಳಿಕೊಳ್ಳುವಂತಹವರು ಹಲವರಿದ್ದರು. ಅವನ ಹೃದಯವನ್ನು ಹರಿದು ಪಂಜು ಹಿಡಿದು ಹುಡುಕಿದರೂ ಅವನಿಗೆ ಯಾರೊಡನೆಯೂ ಗೆಳೆತನದ ಭಾವವಿದ್ದಂತೆ ಕಾಣುತ್ತಿರಲಿಲ್ಲ. ಹಾಗೆ ಇರುವುದೇ ಮೇಲೆಂದು ಅವನ ಮನಸ್ಸು ನುಡಿಯುತ್ತಿತ್ತು. ಇಷ್ಟೆಲ್ಲ ತತ್ವಗಳನ್ನಿಟ್ಟು ಕೊಂಡು ವ್ಯಾಪಾರವಹಿ ವಾಟುಗಳಲ್ಲಿ ಮೇಲುಗೈ ನಡೆದಿದ್ದ ಗಿರೀಶನ ಚಾಣಾಕ್ಷಮತಿಯು ಈ ಕ್ಷಣದಲ್ಲಿ ಮಂಕಾಯಿತು. ಐದು ನಿಮಿಷ ಕಳೆಯಿತು ; ೧೦ ನಿಮಿಷ, ೧೫ ನಿಮಿಷ ಕಳೆಯಿತು ; ಶಶಿಯ ಅಳುವು ಮುಗಿಯಲಿಲ್ಲ. ಕೊನೆಗೆ ಅವನಿಗೇನು ಮಾಡಲೂ ಹೊಳೆಯದೆ, 'ಪ್ಲಾಸ್ಟಿ ನಿಂದ ಎರಡು ಗಾಜಿನ ಲೋಟಗಳಿಗೆ ಟೀ ಬಗ್ಗಿಸಿದ. ಒಂದು ಲೋಟವನ್ನು ಕೈಯಲ್ಲಿ ಹಿಡಿದು ಶಶಿಯ ತಲೆಯಬಳಿ ನಿಂತು,

" ಸ್ವಲ್ಪ ಟೀ ತೆಗೆದುಕೊಳ್ಳಿ: ; ಸಮಾಧಾನವಾದೀತು” ಎಂದ. ಸಾಧಾರಣವಾಗಿ ಸ್ತ್ರೀಯರಿಗೆ ಹೆಚ್ಚು ಗೌರವಕೊಡುವ ಜಾತಿಗೇ ಗಿರೀಶನು ಸೇರಿದವನು. ಸ್ತ್ರೀಯರು ಔಚಿತ್ಯಮೀರಿ ನಡೆದುಕೊಂಡಾಗ, ಅವರು ಯಾರೇ ಆಗಲಿ ಅವರ ಮೇಲೆ ರೇಗಿ, ಏಕವಚನದಲ್ಲೇ ಮಾತನಾಡಿಬಿಡುತ್ತಿದ್ದ. ಅವನ ಕೋಪವು ಸಹನೆ ತಪ್ಪಿದೆಯೆನ್ನು ವುದಕ್ಕೆ ಅದೊಂದೇ ಸಾಕ್ಷಿ ಮರುಕ್ಷಣವೇ ತನ್ನ ಆಚಾರಕ್ಕೆ ವಿರುದ್ಧ ವಾಗಿ ತಾನು ವರ್ತಿಸುತ್ತಿರುವುದನ್ನು ಮನಗಂಡು, ನಾಚಿ ಮತ್ತೆ ಶಾಂತಭಾವ ತಾಳಿ ತನ್ನ ತಪ್ಪನ್ನು ತಿದ್ದಿಕೊಳ್ಳುತಿದ್ದ. ಅವನು ಹೇಳಿದ್ದಕ್ಕೆ ಶಶಿಯು ಕಿವಿಗೊಡಲಿಲ್ಲ ; ಮತ್ತೊಮ್ಮೆ ಒತ್ತಿ ಹೇಳಿದನು.