ಗಿರೀಶನು ಅದುವರೆಗೆ ಯೋಚನೆಯಲ್ಲಿ ಮೈಮರೆತು ಕುಳಿತಿದ್ದ ವನು ಆಗ ಎಚ್ಚತ್ತು ಶಶಿಯ ಕಡೆ ತಿರುಗಿ ನೋಡಿದ. ಶಶಿಯು ಮತ್ತೆ ಅತ್ತು ಅತ್ತು ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡಿದ್ದುದನ್ನು ಕಂಡರೂ, ಕಾಣದವನಂತೆ ಅವಳನ್ನೆಬ್ಬಿಸಿ ಹೊರಕ್ಕೆ ಕರೆತಂದ. ಕೂಲಿಯವರು ಇಬ್ಬರ ಸಾಮಾನುಗಳನ್ನೂ ಒಂದು ಟ್ಯಾಕ್ಸಿಗೆ ಸೇರಿಸಿದ ಮೇಲೆ ಶಶಿಯೊಡನೆ ಅದರಲ್ಲಿ ಕುಳಿತು, ಟ್ಯಾಕ್ಸಿ ಡ್ರೈವರಿಗೆ ಗ್ವಾಲಿಯಾ ಂಕ್ ರೋಡಿಗೆ ಹೋಗುವಂತೆ ತಿಳಿಸಿದ. ಅವನ ಮಾತಿನಲ್ಲಿ ಒಂದು ಬಗೆಯ ಬದಲಾವಣೆಯಾಯಿತು. ಶಶಿಗೆ ಬೊಂಬಾಯಿನ ರಸ್ತೆಗಳು, ಭಾರಿ ಕಟ್ಟಡಗಳ ವರಿಚಯವನ್ನು ಮಾಡಿಕೊಡುತ್ತ ಅವಳನ್ನು ಹರ್ಷ ಚಿತ್ತಳನ್ನಾಗಿ ಮಾಡಲು ತನ್ನ ಬುದ್ದಿ ಶಕ್ತಿಯನ್ನೆಲ್ಲ ವೆಚ್ಚ ಮಾಡ ತೊಡಗಿದ. ಅದನ್ನು ಕಂಡು ಶಶಿಯು,
“ಏನು ಒಂದು ಘಳಿಗೆಲಿದ್ದಾರೆ ನೀವು ಇನ್ನೊಂದು ಘಳಿಗೆಲಿ ರೊಲ್ಲ. ಇದ್ದಕ್ಕಿದ್ದ ಹಾಗೇ ಬದಲಾಗಿಬಿಟ್ಟಿದ್ದೀರಿ ?” ಎಂದು ನಿರಾ ಸಕಳಾಗಿ, ಅರ್ಧರಹಿತ ಹುಸಿ ನಗುವಿನೊಡನೆ ಕೇಳಿದಳು.
ಬೊಂಬಾಯಿ ನನಗೆ ಸ್ವಂತ ಮನೆಯಿದ್ದ ಹಾಗಿದೆ. ಇಲ್ಲಿದ್ದಾಗ ನಾನು ಗೆಲುವಾಗೇ ಇರ್ತೆನೆ.” ಎಂದ ಗಿರೀಶ.
“ಈಗ ನನ್ನೆಲ್ಲಿಗೆ ಕರಕೊಂಡು ಹೋಗ್ತಿದ್ದೀರಿ ?”
“ಒಂದಾಶ್ರಮಕ್ಕೆ, ಅಲ್ಲಿ ನನಗೆ ಗುರ್ತಿರೋರೇ ಇದ್ದಾರೆ. ಅವರು ನಿನ್ನ ಚೆನ್ನಾಗೂ ನೋಡಿಕೊಳ್ತಾರೆ.”
“ನೀವಿರೋದೆಲ್ಲಿ ?” “ನಾನು ಇನ್ನೊಂದು ಮೂಲೇಲಿದೇನೆ.”
“ಯಾಕೆ, ಹೇಳಬಾರದೇನು ?”
“ಹೇಳಿ ಬಿಡ್ತೀನಿ ನೀನು ಹುಡುಕ್ಕೊಂಡು ಬಂದುಬಿಡು.”