ಈ ಪುಟವನ್ನು ಪ್ರಕಟಿಸಲಾಗಿದೆ
೨೭ ಘಂಟೆಗಳಲ್ಲಿ
೪೫

“ಏನೂ ಭಯಪಡಬೇಡಿ ನಿಮ್ಮ ಹಿಂದೇನೂ ಓಡಿಬರೊಲ್ಲ.”

“ಅದಿರಲಿ ! ಶಶಿ ! ಇಲ್ನೋಡು ನಾನೀಗ ನಿನ್ನ ಕರ್ಕೊಂಡು ಹೋಗೋಕಡೆ ನನಗೆ ಬೇಕಾದ ಸ್ನೇಹಿತರು ಬಹಳಜನ ಇದ್ದಾರೆ. ಅಲ್ಲಿ ನನ್ನ ಮಾನಕ್ಕೆ ಗೌರವಕ್ಕೆ ಏನಾದ್ರೂ ಸಂಚಕಾರ ಬರೋಹಾಗೆ ನೀನು ಒಂದು ಸ್ವಲ್ಪ ಏನಾದರೂ ಹೆಚ್ಚು ಕಡಿಮೆ ನಡಕೊಂಡರೆ ಅಲ್ಲಿಗೆ ನನ್ನ ಗತಿ ಮುಗೀತು. ತಿಳೀತೇ ? ನಾನು ಅಲ್ಲಿರೋ ಒಬ್ಬಿಬ್ಬರು ನನ್ನ ಸ್ನೇಹಿತರ ಹೆಂಡತಿಯರಿಗೆ ನಿನ್ನ ವರಿಚಯಮಾಡಿಕೊಡುತ್ತೇನೆ. ಅವರಿಗೆ ನಿನ್ನ ಬಗ್ಗೆ ಏನೊಂದೂ ಅನುಮಾನ ಬರದಹಾಗೆ ನೀನು ನಡಕೊಬೇಕು.”

“ಆಗಲಿ !”

“ನಿನಗೆ ಹಿಂದಿ, ಮರಾಠಿ ಯಾವುದಾದ್ರೂ ಭಾಷೆ ಮಾತಾ ಡೋಕೆ ಬರುತ್ತೋ ?”

“ಇಲ್ಲ. ಹಿಂದಿ ಮಾತನಾಡಿದರೆ ಅರ್ಧವಾಗುತ್ತೆ, ಓದಬಲ್ಲೆ. ಆದರೆ ತಪ್ಪು ತಪ್ಪಾಗಿ ಮಾತಾಡೋಕೆ ಹೋಗೋಲ್ಲ.”

“ಸರಿ ಬಿಡು ; ಅದೊಂದು ರೀತೀಲಿ ಈಗ ಒಳ್ಳೇದೇ ಆಯಿತು. ನನ್ನ ಸ್ನೇಹಿತರು ಒಂದುವೇಳೆ ಇಂಗ್ಲೀಷಿನಲ್ಲಿ ಮಾತನಾಡಿಸಿದರೆ ಜವಾಬೇ ಕೊಡಬೇಡ, ಸುಮ್ಮನೆ ನನ್ನ ಮುಖ ನೋಡು. ನಾನವರಿಗೆ ಏನು ಹೇಳಬೇಕೋ ಹೇಳ್ತಿನಿ. ನಾನು ಹೇಳಿದ್ದಕ್ಕೆ ಸರಿಯಾಗಿ ನೀನು ನಟನೆ ಮಾಡಬೇಕು. ನೀನೇನಾದರೂ ಕೇಳಬೇಕಾದ್ದಿದ್ದರೆ ಆ ಮೇಲೆ ನಾವಿಬ್ಬರೇ ಇದ್ದಾಗ ಕೇಳು.”

ಇಷ್ಟು ಹೇಳಿ ಗಿರೀಶನು, ಅವಳಿಗೆ ಮತ್ತೆ ರಸ್ತೆಗಳಲ್ಲಿ ಅದೂ ಇದೂ ತೋರಿಸುತ್ತ ಹಾಸ್ಯಕರವಾಗಿ ಏನಾದರೂ ಅಂದು ಅವಳನ್ನು ನಗಿಸುತ್ತ ಹೊರಟ. ಹರಿನಿವಾಸ್ ಬಿಲ್ಡಿಂಗ್ಸಿನ ಮುಂದೆ ಬರುತ್ತಲೂ ಟ್ಯಾಕ್ಸಿಯವನಿಗೆ ನಿಲ್ಲಲು ಹೇಳಿದ. ಕಟ್ಟಡದ ಹೆಬ್ಬಾಗಿಲಿನಲ್ಲಿ