೫೨
"ಏನೂ ಇಲ್ಲ ; ಸುಮ್ಮನೆ ನಾನು ಪೂನಾಯಿಂದ ಈ ಗಾಡೀಲಿ
ಬರ್ತಿನೀಂತ ತಿಳಿಸಿದ್ದೆ ಅಷ್ಟೆ.”
"ಆಷ್ಟೇನೆ ? ನಿಮ್ಮ ಹೆಂಡತಿ ಬರ್ತಿದಾಳೆ ಜೊತೇಲೀಂತ
ತಿಳಿಸಿರಲಿಲ್ವೆ ? ”
ಗಿರೀಶನ ಮುಖವು ತೀರ ಕೆಂಪೇರಿತು. ಶಶಿಗೆ ಮುಖ ತೋರದೆ
ಹೋಗಿ ಕುರ್ಚಿಯೊಂದರ ಮೇಲೆ ಕುಳಿತ.
ನಾನು ಆಗಲೇ ಅದನ್ನ ಊಹಿಸಿದೆ ..ಆದರೆ ನನಗಾವಿಚಾರ
ರೈಲಿನಲ್ಲೇ ಏಕೆ ಹೇಳಬಾರದಾಗಿತ್ತು ? ಸುಮ್ಮ ಸುಮ್ಮನೆ ನನ್ನ ಮನಸ್ಸು
ಯಾಕೆ ನೋಯಿಸ್ಟೇಕಾಗಿತ್ತು ?”
“ ಅಯಾಂ ಸಾರಿ ....ಹಾಗೆ ತಂತಿ ಕೊಟ್ಟ ಮೇಲೆ ಪುನಃ ನನ್ನ
ಮನಸ್ಸು ಬದಲಾಯ್ತು....ಈ ತಾಪತ್ರಯಗಳೆಲ್ಲಾ ಏಕೆ ಅಂತನ್ನಿಸ್ತು ;
....“ಬಟ್ ಐ ರ್ಡಿಟ್ ಆನೆಸ್ಟ್ಲಿ ಮೀನಿಟ್ !...."”
" ಹೋಗಲಿ ಬಿಡಿ....ಇನ್ನು ಆ ಮಾತೇಕೆ ?.... ಅದಿರಲಿ....
ನಿಮ್ಮ ವಿಚಾರಾನೇ ಏನೂ ನನಗೆ ಹೇಳೇ ಇಲ್ಲವಲ್ಲಾ....ಒಂದು ವೇಳೆ
ಅವನ್ಯಾರಾದರೂ ನನ್ನ ಏನಾದರೂ ಕೇಳಿದರೆ ಏನು ಹೇಳಬೇಕು ?"
"ಗಂಡಸರ್ಯಾರೂ ನಿನ್ನ ಕೇಳೋರಲ್ಲ; ನನ್ನ ಕತೆ ಅವರಿಗೆ
ಗೊತ್ತು. ಇನ್ನು ಹೆಂಗಸರು. ನಿನಗೆ ಹಿಂದಿ ಮಾತಾಡೋಕೆ ಬರೊಲ್ಲ
ವಲ್ಲ ...ಆ ಹೆಂಗಸರಿಗೆ ಇಂಗ್ಲಿಷ್ ಅರ್ಥವಾಗೋಲ್ಲ. ಆದ್ರಿಂದ ನೀನು
ಹಿಂದಿ ಮಾತಾಡೋಕೆ ಕಲಿಯೋದರೊಳಗಾಗಿ ನನ್ನ ಕಥೇನೆಲ್ಲಾ
ಹೇಳ್ತಿನಿ.... ನಿಧಾನವಾಗಿ ಕೇಳೂವಂತೆ.”
“ ಹೋಗಲಿ....... ಇನ್ನೊಂದು ಮಾತು ಕೇಳ್ತೆನೆ.......ನಿಜಾ
ಹೇಳೀರಾ ?"
"ಏನು.... ?"
"ನಿಮಗೆ ನಿಜವಾಗಿ ಮದುವೇ ಆಗಿದೆಯೇ ?"
"ಆಗದೇನೇ ಈಗ ಅವರೆಲ್ಲಾ ನನ್ನ ಹೆಂಡತಿ ಪರಿಚಯಾ
ಪಡೆದರೆ ?”