ಈ ಪುಟವನ್ನು ಪ್ರಕಟಿಸಲಾಗಿದೆ

ಆಕಾಂಕ್ಷೆ

೬೩

ಯನ್ನು ಕಾಯುವಳು ; ಅವನು ಬಂದು ಕೊಟ್ಟ ಕಾಗದಗಳಲ್ಲಿ ತನಗೆ ಬೇಕಾದ್ದು ದೊರೆಯದೆ ನಿರಾಶಳಾಗುವಳು. ಹೀಗೆ ಒಂದೆರಡು ತಿಂಗಳು ಕಳೆಯಿತು. ಅವಳಿಗೆ ಜೀವನದಲ್ಲೇನೂ ಬೇಡವಾಯಿತು. ದಿನದಿನಕ್ಕೆ ಕೊರಗಿನಿಂದ ಕೃಶಳಾಗಲಾರಂಭಿಸಿದಳು. ತನ್ನ ಹೃದಯದ ದುಃಖವನ್ನು ಯಾರಲ್ಲಿ ತೋಡಿಕೊಳ್ಳಬೇಕೆಂಬುದೂ ಕೊನೆ ಕೊನೆಗೆ ಅವಳಿಗೆ ತೋಚದಾಯಿತು. ಒಂದು ದಿನ ಇದ್ದಕ್ಕಿದ್ದಂ ಂತೆ ಮೂರ್ತಿ ಯಿಂದ ಒಂದು ತಂತಿಯು ಅವರ ತಂದೆಗೆ ಬಂದಿತು. ಮೂರ್ತಿಯು ಮಾರನೆಯ ಬೆಳಿಗ್ಗೆ ಊರಿಗೆ ಹಿಂದಿರುಗಿ ಬರುವುದಾಗಿಯೂ, ತನ್ನನ್ನು ಸಮರ ಸೇವೆಯಿಂದ ಮುಕ್ತನನ್ನಾಗಿ ಮಾಡಿರುವರೆಂದೂ ಸುದ್ದಿ ಕೊಟ್ಟಿದ್ದ.
ಮಾರನೆಯ ಬೆಳಿಗ್ಗೆ ಸುಮಾರು ೧೦ ಘಂಟೆಯ ಸಮಯ. ಮೂರ್ತಿಯ ಮನೆಯಲ್ಲಿ ಒಂದು ದೊಡ್ಡ ಹಬ್ಬದೂಟದ ಸಿದ್ಧತೆಗಳೇ ಆಗುತ್ತಿದ್ದವು. ಮೂರ್ತಿ ಯುದ್ಧ ಭೂಮಿಯಿಂದ ಹಿಂದಿರುಗಿ ಬರುತ್ತಿರುವ ನೆಂದಮೇಲೆ ಯಾರಿಗೆ ತಾನೇ ಸಂತೋಷವಾಗದಿರದು ? ರಾಜಿಯು ಹಿಡಿಸಲಾರದ ಆನಂದದಿಂದ ಹಿಗ್ಗಿ ಹೋಗಿದ್ದಳು. ಮನೆಗೆಲಸದಲ್ಲಿ ಅವಳಿಗಿಂದು ಎಂದೂ ಇಲ್ಲದ ಉತ್ಸಾಹ, ಮೂರ್ತಿಯು ಊರುಬಿಟ್ಟು ಹೋಗಿದ್ದಾಗ ಅವನ ಕೋಣೆಯು ಯಾವ ರೀತಿ ಇತ್ತೋ ಅದೇ ರೀತಿ ಕಾಣಬೇಕೆಂದು ಒಳಗಿನ ಸಾಮಾನುಗಳನ್ನೆಲ್ಲ ಅತ್ತಿಂದಿತ್ತ ಸ್ಥಾನ ಬದಲಾಯಿಸಿ ಒಪ್ಪವಾಗಿಟ್ಟಳು. ತನ್ನ ದೇಹಾಲಸ್ಯದ ಸುದ್ದಿ ಪತಿಗೆ ಪತ್ತೆಯಾಗಬಾರದೆಂದು ಅಲ್ಪಾರಿನಲ್ಲಿದ್ದ ಔಷಧಿ ಶೀಷೆಗಳನ್ನೆಲ್ಲಾ ತೆಗೆದು ಮನೆಯೊಳಗೆಲ್ಲೋ ಒಂದೆಡೆ ಮರೆಯಾಗಿಟ್ಟಳು. ಮುಖಾಲಂಕಾ ರಕ್ಕೆ ಮನಸ್ಸೇ ಕೊಡದಿದ್ದವಳು ಇಂದು ಅದರಲ್ಲಿ ಅಪೂರ್ವ ಆಸಕ್ತಿ ವಹಿಸಿದ್ದಳು. ನಿಮಿಷ ನಿಮಿಷಕ್ಕೂ ಕಿಟಕಿಯಲ್ಲಿ ತಲೆ ಹಾಕಿ ಬೀದಿಯ ಕಡೆ ನೋಡುವಷ್ಟು ಅವಳ ಚಿತ್ರವು ಚಂಚಲತೆಯಿಂದ ಕೂಡಿತ್ತು.
ಮನೆಯ ಮುಂದೆ ಒಂದು 'ಮಿಲಿಟರಿ ವ್ಯಾನು ' ಬಂದು ನಿಂತು ' ಹಾರ್ರ' ಶಬ್ದ ಮಾಡಿತು. ರಾಜಿಯ ಎದೆ ಡವಡವನೆ ಹೊಡೆದು