ಈ ಪುಟವನ್ನು ಪ್ರಕಟಿಸಲಾಗಿದೆ

ಆಕಾಂಕ್ಷೆ
"ದೇವ್ರೇ ಗತಿ ! ಇಲ್ಕೇಳು ರಾಜಿ....”
" ನಿಧಾನವಾಗೆಲ್ಲಾ ನಿತ್ಕೊಂಡು ಕೇಳ್ತೇನೆ ಆಮೇಲೆ....ನೀವೀಗ ಡಾಕ್ಟರು ಬರೋವರ್ಗು ಸದ್ಯ ಸುಮ್ನೆ ಮಲಗಿದ್ರೆ ಸಾಕು.... ... ನಿಮ್ಮ ದಮ್ಮಯ್ಯ ” ಎಂದು ರಾಜಿಯು ಅಲ್ಲಿ ನಿಲ್ಲದೆ ಅಡಿಗೆಮನೆಯ ಕಡೆಗೋಡಿ ದಳು. ಹೋಗುವಾಗ ತನ್ನ ಕಣ್ಣುಗಳನ್ನು ಸೆರಗಿನಿಂದ ಬೇಗನೆ ಒರೆಸಿ ಮೂರ್ತಿಯು “...... ಹಬ್ಬದ ಅಡಿಗೆ ವಾಸ್ನೆ ಬಂದು ಬಾಯಲ್ಲಿ ನೀರೂರಿಸ್ತಾಯಿದೆ ...ಇನ್ನು ನೀನು ಡಾಕ್ಟರನ್ನು ಕರೆಸಿ ಅದನ್ನ ತಿನ್ನೋದಕ್ಕೂ ತುಂಡ್ಹಾಕಿಸ್ಬಿಡು ಸರಿಹೋಗತ್ತೆ....” ಎಂದ. ಉತ್ತರ ಬಾರದ್ದನ್ನು ತಿಳಿದು ಅವನಿಗೆ ರಾಜಿಯು ಅಲ್ಲಿಲ್ಲದ್ದು ಮನ ದಟ್ಟಾಯಿತು. ಕಣ್ಣುಗಳು ಮತ್ತು ಕಾಲನ್ನು ಕಳೆದುಕೊಂಡು ಜಡವಾಗಿ ಬಿದ್ದಿರುವ ತನ್ನ ಸ್ಥಿತಿಯಬಗ್ಗೆ ತನಗೇ ಕ್ರೋಧವಿಮ್ಮಡಿಸಿತು. ಹಲ್ಲು ಮುಡಿಕಚ್ಚಿದ, ಹಣೆಯ ನರಗಳುಬ್ಬಿದವು.
×XX

ಅಂದೆಲ್ಲ ಮೂರ್ತಿಯನ್ನು ನೋಡಿಕೊಂಡು ಹೋಗುವ ಕುತೂ ಹಲದಿಂದ ಮನೆಗೆ ಬಂದ ಬಂಧು, ಮಿತ್ರರೆಲ್ಲ ಅವನ ಬಗ್ಗೆ ತಮ್ಮ ಸಾಂಪ್ರದಾಯಿಕ ಸಹಾನುಭೂತಿಯನ್ನು ಅವನ ತಂದೆ ತಾಯಿಗಳ ಬಳಿ ವ್ಯಕ್ತಪಡಿಸುತ್ತಿದ್ದುದನ್ನು ಅವನು ಕೇಳಿ ಕೇಳಿ ಕೊರಗಿದ. ಅವರ ಮರುಕದ ಮಾತುಗಳಿಗೆ ಅವನ ಮೈ ಉರಿಯಿತು.ಅವರ ಕಪಟ ವಚನಗಳನ್ನು ಕೇಳಲಾರದ ರೋಷ ಅವನಿಗೆ ಹುಚ್ಚು ಹಿಡಿಸುತ್ತಿತ್ತು. ಅವರನ್ನೆಲ್ಲಾ ಒದ್ದು ಓಡಿಸಿಬಿಡಲು ಮನಸ್ಸು ಹಾತೊರೆಯುತ್ತಿತ್ತು. ಆದರೆ....... ಮಧ್ಯೆ ಮಧ್ಯೆ ಶಾಂತಿದೇವಿಯ ಹಸ್ತ ಅವನ ಹಣೆಯ ಮೇಲೆ ವಿರಮಿಸಿ ನಿಲ್ಲುತ್ತಿತ್ತು. ಅದರ ಹಿತಕರ ಸ್ಪರ್ಶದಿಂದ ಅವನ ಮನಸ್ಸನ್ನಾವರಿಸಿದ್ದ ಅಗ್ನಿ, ತನ್ನಂತೆ ಅಂಗವಿಹೀನರಾಗದೆ ನೆಟ್ಟಗಿದ್ದ ವರನ್ನೆಲ್ಲಾ ಸುಟ್ಟ ಭಸ್ಮ ಮಾಡಿಬಿಡಲು ಹಾತೊರೆಯುತ್ತಿದ್ದ ಆ ಅಗ್ನಿ ಅಲ್ಪ ಮಾತ್ರ ಅಣಗುತ್ತಿತ್ತು. ಕಾಡ್ಕಿಚ್ಚು ಕಿಂಚಿನ್ಮಾತ್ರ ಕಟ್ಟಿಗೊಳ