ಸೈನ್ಯಗಳ ಚಲನವಲನದ ಆಗು ಹೋಗುಗಳು ; ಜಯಾಪಜಯಗಳು;
ಸ್ಥಳೀಯ ಸೈನಿಕರು ನಿರಂಕುಶರಾಗಿ ಸ್ತ್ರೀಯರ ಮೇಲೆ ನಡೆಸುತ್ತಿರುವ
ಅತ್ಯಾಚಾರ, ಇವೇ, ಅಂತೂ ಒಂದೊಂದು ತೂಕವಾದ ಮಾತಿಗೂ
ಒಂದೊಂದು ತೂಕವಾದ ತುತ್ತೆ ಒಳಕ್ಕಿಳಿಯುತ್ತಿತ್ತು. ಯಾವ
ಮಹತ್ವದ ಮಾತೂ, ಭಕ್ಷ್ಯ ಭೋಜ್ಯಗಳನ್ನು ತಿನ್ನುವುದರಲ್ಲಿ ಪರಸ್ಪರ
ಉಪಚಾರಕ್ಕೆ ಕಿಂಚಿತ್ತಾದರೂ ಕೊರತೆಯನ್ನುಂಟುಮಾಡಲಿಲ್ಲ. ರೇರ್ಷ
ಕಾಲವಾದರೆ ತಾನೇ ಏನು ?
ಇವರ ಸಂಭಾಷಣೆಯಲ್ಲ, ಕೋಣೆಯಲ್ಲಿ ಮಲಗಿದ್ದ ಮೂರ್ತಿಯ
ಕಿವಿಗೆ ಚೆನ್ನಾಗಿ ಬೀಳುತ್ತಿತ್ತು. ಅಧಿಕಾರಯುತವಾಗಿ ಅವರ ಮುಖ
ದಿಂದ ಹೊರಬೀಳುತ್ತಿದ್ದ ಅಪಕ್ವ ಜ್ಞಾನವು ಮೂರ್ತಿಯ ಮೈ
ಉರಿಸುತ್ತಿತ್ತು. ಅತಿಧಿಗಳ ಸಂಭಾಷಣೆಯ ಸರಣಿಯು ತನ್ನ ಪತಿಯ
ಅಸ್ವಸ್ಥತೆಯನ್ನು ಅಧಿಕಗೊಳಿಸುವುದರೊಂದಿಗೆ, ಅವನ ಮನ
ನೋಯಿಸುವಂತಹುದೂ ಆಗುತ್ತಿದೆಯೆಂಬುದನ್ನರಿತ ರಾಜಿ ಯು
ಅಧೀರಳಾದಳು. ಮೂರ್ತಿಯು ಬಹುಕಾಲ ಮೌನದಿಂದಿರಲಾರ
ದವನಾದ.
....ಯುದ್ಧ ಭೂಮಿ ಮುಖಾನೇ ಕಾಣದ ಈ ಮಂಕುಗಳು
ಮನಸ್ಸಿಗೆ ಬಂದ ಹಾಗೆ ಮಾತಾಡ್ತಿವೆ. ಇವರಲ್ಲಿ ಸುಖವಾಗಿರೋ
ಕೋಸ್ಕರ ಅಲ್ಲಿ ಸೈನಿಕರು ಹೇಗೆ ಜೀವ ಕೈಲಿಡ್ಕೊಂಡು ಹೋರಾಡ್ತಾ
ಇದ್ದಾರೆ; ಅವರ ಕಷ್ಟ-ಸುಖಗಳೇನೂಂತನ್ನೋದ್ನ ಸ್ವಲ್ಪಾನೂ
ತಿಳ್ಕೊಳ್ದೆ ಕಿರಲ್ತಿದ್ದಾರೆ........ಶುದ್ಧ ಉಂಡಾಡಿ ಭಟ್ರು........ ಎಂದ.
ರಾಜಿಯು “ ಅವರೇನ್ಬೇಕಾದ್ರೂ ಮಾತಾಡ್ಕೊಂಡು ಹೋಗಲಿ ; ನಿಮ್ಮ
ಪಾಡಿಗೆ ನೀವು ಒಂದೂ ಕಿವಿಗೆ ಹಾಕ್ಕೊಲ್ಡೇ ಶಾಂತವಾಗಿರಬಾರ್ದೆನು?
....ಸದ್ಯ ಊಟವಾದಮೇಲೆ ನಿಮ್ಮ ಹತ್ರ ಬರದೇ ಹಾಗೇ ತೊಲಗಿ
ಹೋದ್ರೆ ಸಾಕು ” ಎಂದಳು.
“ ಬಂದರೇನಂತೆ........ಅಗತ್ಯವಾಗಿ ಬರಲೇಳು ?”