೭೪
ರಣಭೂಮಿಯ ಭಯಂಕರ ಸ್ವರೂಪವನ್ನು ಅವರ ಮುಂದೆ ವರ್ಣಿಸಲು
ಆಗದೆ ಹೋದುದಕ್ಕಾಗಿ ನಿರಾಶೆಯಾಯಿತು.
ಆದರೂ ಇಷ್ಟೆಲ್ಲ
ಚರ್ಚೆಯಿಂದ ಆದ ಉದ್ವೇಗದಲ್ಲಿ ಜ್ವರವಿನ್ನೂ ಅಧಿಕವಾಯಿತು.
ನಿಟ್ಟುಸಿರುಬಿಟ್ಟು ಹಾಸಿಗೆಯನ್ನಪ್ಪಿದ.
+××+
ಆ ಸಂಜೆ ಮೂರ್ತಿಯ ಮೈಗೆ ಅಂಟಿದ್ದ ಜ್ವರವಿಳಿದಿದ್ದರೂ
ಮಧ್ಯಾನ್ಹದ ವಾಗ್ವಾದದಿಂದ ಮೆದುಳಿಗೇರಿದ್ದ ಜ್ವರ ಇಳಿದಿರಲಿಲ್ಲ.
ಅತಿಥಿಗಳ ಪೈಕಿ ಒಬ್ಬರಾಡಿದ್ದ ಮಾತು ಮನಸ್ಸಿಗಂಟಿಕೊಂಡಿತ್ತು.
ಅದನ್ನೇ ಮೆಲುಕುಹಾಕುತ್ತಿದ್ದ. ತಾನು ಕುಂಟು- ಕುರುಡನಾಗದೆ
ಸರ್ವಾಂಗ ಸಹಿತನಾಗಿ ಅವರೆಲ್ಲರಂತೆಯೇ ಇದ್ದಿದ್ದರೆ ಆರೀತಿ ಅವರು
ಮಾತನಾಡುವ ಎದೆಗಾರಿಕೆ ತೋರಿಸುತ್ತಿರಲಿಲ್ಲವೆಂದು ಭಾವಿಸಿದ.
ಆ ವೇಳೆಗೆ ಸರಿಯಾಗಿ ಸ್ಥಳೀಯ ಕನ್ನಡ ಪತ್ರಿಕೆಯೊಂದನ್ನು ಹಂಚುವ
ಮನುಷ್ಯನು - ಪೇವರ್ ' ಎಂದು ಕೂಗಿ ಮನೆಯೊಳಕ್ಕೆ ಪತ್ರಿಕೆ
ಯನ್ನೆಸೆದು ಹೋದ ; ಮೂರ್ತಿಯು, " ರಾಜೀ....” ಎಂದು ಕೂಗು
ಹಾಕಿದ. ಒಂದೆರಡು ನಿಮಿಷಗಳ ಮೇಲೆ ರಾಜಿಯು ಬಂದು, “ಏನು??
ಎಂದಳು. ಮೂರ್ತಿಯು, “ ಪೇಪರ್ ಬಂದಿರಬೇಕು. ತಗೊಂಡು
ಬಂದು ಓದ್ದೀಯಾ?” ಎಂದು ಕೇಳಿದ. ರಾಜಿಯು ಮರು
ಮಾತನಾಡದೆ ಹೋಗಿ ಪತ್ರಿಕೆಯನ್ನು ತಂದಳು.
ಮೊಟ್ಟ ಮೊದಲನೆಯದೇ ಎದೆಯೊಡೆಯುವ ಸುದ್ದಿ, ರಾಜಿಯು
ಓದಿದಳು : ' ಕೋಕನಾಡು, ವಿಶಾಖಪಟ್ಟಣಗಳ ಮೇಲೆ ಜಪಾನೀ
ವಿಮಾನಗಳ ದಾಳಿ.'
ಮೂರ್ತಿಯು ಜಗ್ಗನೆ ಹಾಸಿಗೆಯಲ್ಲಿದ್ದು ಕುಳಿತು, “ ಏನೂ ?”
ಎಂದ. ರಾಜಿಯು ಮತ್ತೊಮ್ಮೆ ಶಿರೋನಾಮೆಯಿಂದ ಹಿಡಿದು
ಸುದ್ದಿಯನ್ನು ಓದಿದಳು. ಮೂರ್ತಿಯು ವಿಕಟ ನಗುವನ್ನು ಮೆಲುವಾಗಿ
ನಕ್ಕು, “ ಹೂಂ! ..... ಇನ್ನು ನಮ್ಮ ಮನೆ ಬಾಗಿಲಿಗೇ ಶತ್ರುಗಳು