ಈ ಪುಟವನ್ನು ಪ್ರಕಟಿಸಲಾಗಿದೆ
೮೮
ಬಿ, ಎಸ್. ವೆಂಕಟರಾಮ
ಬೇಕಾಗಿದೆಯೆಂಬುದೂ ಅವನ ಕಿವಿಗೆ ಬಿತ್ತು. ತಟ್ಟನೆ ಮನೋರಂಗದ
ದೃಶ್ಯದಲ್ಲಿ ರಾಜಿಯ ನಿಲುವಿನ ಠೀವಿ ಬದಲಾಗಿತ್ತು. ಅಸ್ತವ್ಯಸ್ತ
ಕೇಶರಾಶಿ, ಹರಿದ ಬಟ್ಟೆಗಳು. ಮೈಯೆಲ್ಲ ರಕ್ತದ ಕಲೆಗಳು. ಕಣ್ಣು
ಗಳಲ್ಲಿ ಭೀತಿಯೊಂದೇ ಎದ್ದು ಕಾಣುತ್ತಿದೆ. ಒಂದಿಗೆ ಮುಖದಲ್ಲಿ
ದೈನ್ಯತೆ ಮೂಡಿದೆ........ ರಾಜಿ ಕೈ ಮುಗಿದು ಯಾರನ್ನೂ ಅಂಗಲಾಚಿ
ಬೇಡಿಕೊಳ್ಳುತ್ತಿದ್ದಾಳೆ.
ರಾಜಿ ! ರಾಜಿ ಅಳುತ್ತಿದ್ದಾಳೆ; ರಾಜಿ ಅಳುತ್ತಿದ್ದಾಳೆ' ಎಂದು
ಮೂರ್ತಿ ಅರಚಿಕೊಂಡೆದ್ದ. ಎದ್ದು, ಅವಳ ಸಹಾಯಕ್ಕೆಂದು ಮುಂದೆ
ನುಗ್ಗಿದ. ತಾನು ಕುಂಟು ಕುರುಡನೆಂಬುದೇ ಅವನಿಗೆ ಮರೆತು
ಹೋಗಿತ್ತು. ಧಡಾರನೆ ನೆಲಕ್ಕುರುಳಿಬಿದ್ದ. ಬೀಳುವಾಗ ತಲೆ
ಮೇಜಿನ ಅಂಚಿಗೆ ಹೊಡೆದು ತೂತುಬಿತ್ತು.
ಬಿದ್ದವನು ಬಹುಕಾಲ
ಮೇಲೇಳಲಿಲ್ಲ.