ಈ ಪುಟವನ್ನು ಪ್ರಕಟಿಸಲಾಗಿದೆ
೯೦
ಬಿ. ಎಸ್. ವೆಂಕಟರಾಮ್

ಆತನು ತನ್ನ ಕಥೆಯನ್ನು ಮೊದಲು ಮಾಡಿದ. ನಾನು ' ಹೂಂ' ಗುಟ್ಟುತ್ತ ಕೇಳುತ್ತಿದ್ದೆ.

“ನಮ್ಮ ಮನೆ ಇದ್ದುದು ಒಂದು ದೊದ್ದೂರಿನಲ್ಲಿ ದೊಡ್ಡರಿಗೆ ತಕ್ಕ ಹಾಗೆ ದೊಡ್ಡ ಮನೆ ನಮ್ಮದು. ನನ್ನ ತಂದೆ ಮಾಡಿಟ್ಟಿರುವ ಆಸ್ತಿಯೆಲ್ಲಾ ಅವರ ಸ್ವಯಾರ್ಜಿತವೇ ! ನಮ್ಮ ತಾಯಿಯ ವಿಷಯ ವಾಗೇನೂ ಹೇಳಬೇಕಾದ್ದೆ ಇಲ್ಲ. ಅವರು ತಾಯಿಯಹಾಗೇ ಇದ್ದ ರು. ನಾವು ಅಣ್ಣ ತಮ್ಮಂದಿರು ಮೂರು ಜನ. ನಮ್ಮ ದೊಡ್ಡಣ್ಣನಿಗೂ ನಮಗೂ ಮೂರು ವರ್ಷ ಹೆಚ್ಚು ಕಡಿಮೆ; ಅಂದರೆ ನಮ್ಮ ದೊಡ್ಡಣ್ಣನು ಹುಟ್ಟಿದ ೩ ವರ್ಷಕ್ಕೆ ನಾವಿಬ್ಬರೂ (ಅವಳಿ ಜವಳಿ ಮಕ್ಕಳು) ಒಟ್ಟಿಗೇ ಹುಟ್ಟಿದೆವಂತೆ. ನಮ್ಮಿಬ್ಬರಿಗೂ ರಾಮ-ಲಕ್ಷ್ಮಣ ಎಂದು ಹೆಸರಿಟ್ಟರು. ಅದಕ್ಕೆ ಕಾರಣ ನನಗೂ ರಾಮಗೂ ರೂಪಿನಲ್ಲಿ ಏನೂ ವ್ಯತ್ಯಾಸ ವಿಲ್ಲದ್ದು, ಒಂದು ಗುರುತಿನ ಮೇಲೆ ಮಾತ್ರ ನಾವು ಯಾರೆಂದು ಪತ್ತೆ ಮಾಡಬಹುದಾಗಿತ್ತೇ ಹೊರ್ತು ಮತ್ತೆ ಮಾತಿನಲ್ಲಾಗಲೀ (ಬಾಲ್ಯದಲ್ಲಿ) ಯಾವ ಬಗೆಯಲ್ಲಿ ಸಾಧ್ಯವಿರಲಿಲ್ಲ. ಆ ಗುರುತು ನನ್ನ ಬೆನ್ನ ಮೇಲಿದ್ದ ಹಸುರು ಮಚ್ಚೆಯೊಂದು, ಅದು ರಾಮೂಗೆ ಇರಲಿಲ್ಲ. ನಾವು ಬೆಳೆದು ದೊಡ್ಡವರಾದೆವು. ನಮ್ಮ ತಾಯಿಯು ನಮ್ಮನ್ನು ಅತಿ ಪ್ರೀತಿಯಿಂದ ಬೆಳೆಸಿದರು. ದೊಡ್ಡವರಾದ ಮೇಲೆ ನನ್ನ ನಮ್ಮಲ್ಲಿದ್ದ ಭಿನ್ನ ರುಚಿಗಳು ಕಂಡು ಬಂದುವು. ಅವನಿಗೆ ಸಂಗೀತವೆಂದರೆ ಸೇರುತ್ತಿರಲಿಲ್ಲ. ನನಗೆ ಸಂಗೀತವೆಂದರೆ ಪ್ರಾಣ ನನ್ನ ಕಂಠವು ಚೆನ್ನಾಗಿದೆಯೆಂದು ನನ್ನ ಹಾಡನ್ನು ಕೇಳಿದವರೆಲ್ಲರೂ ಹೇಳುತ್ತಿದ್ದರು. ಯಾವುದಾದರೂ ವರ್ಣವಾಗಲೀ ಕೀರ್ತನೆಯಾಗಲೀ ಕೇಳಿ ಮನಸ್ಸು ಬಿದ್ದರೆ, ವಿಶ್ವ ಪ್ರಯತ್ನ ಮಾಡಿ ಅದರ ಸಾಹಿತ್ಯ ಸಂಪಾದಿಸಿ, ಕೇಳಿ, ಕಲಿತು ಹಾಡಿ ಬಿಡುತ್ತಿದ್ದೆ, ರಾಮಗೆ ಒಳ್ಳೆಯ ಕಂಠವಿದ್ದರೂ ಅವನು ಹಾಡುತ್ತಲೇ ಇರಲಿಲ್ಲ. ನಮ್ಮ ತಂದೆಗೂ ಸಂಗೀತಕ್ಕೂ ಬಹಳ ದೂರ ಅವರ ದೃಷ್ಟಿಯಲ್ಲಿ ಸಂಗೀತಗಾರರೆಲ್ಲರೂ ಪೋಲಿಗಳೆಂದು. ನಮ್ಮ ತಾಯಿಗೆ