ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

“ಮಧ್ಯರಾತ್ರಿಯ ಘಂಟೆ ಬಾರಿಸುತ್ತಲೇ, ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ, ಭಾರತವು ಎಚ್ಚೆತ್ತು ಜೀವ ತಳೆಯುವುದು, ಸ್ವತಂತ್ರವಾಗು ವುದು. ಇತಿಹಾಸದಲ್ಲಿ ಎಂದಾದರೊಮ್ಮೆ ಬರುವ ಮಹತ್ವದ ಘಳಿಗೆ ಯೊಂದುಂಟು.ಅಂತಹ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಪದಾರ್ಪಣೆ ಮಾಡುತ್ತೇವೆ. ಒಂದು ಯುಗ ಮುಕ್ತಾಯವಾಗುತ್ತದೆ. ದೀರ್ಘ ಕಾಲದಿಂದ ಅದುಮಿ ಹಿಡಿಯಲ್ಪಟ್ಟ ರಾಷ್ಟ್ರವೊಂದರ ಆತ್ಮ ನುಡಿಯತೊಡಗುತ್ತದೆ. ಈ ಗಂಭೀರ ಘಳಿಗೆಯಲ್ಲಿ ಭಾರತದ ಹಾಗೂ ಆಕೆಯ ಜನತೆಯ ಸೇವೆಗಾಗಿಯೂ ಇನ್ನೂ ಹಿರಿದಾದ ಮಾನವ ಕೋಟಿಯ ಒಳ್ಳಿತಿಗಾಗಿಯೂ ಸಮರ್ಪಣ ಭಾವದಿಂದ ಪ್ರತಿಜ್ಞೆ ಕೈ ಕೊಳ್ಳುವುದು ನ್ಯಾಯೋಚಿತವಾಗಿದೆ.

“ನಮ್ಮ ಮುಂದಿರುವುದು ಸುಖಜೀವನದ ಅಥವಾ ವಿಶ್ರಾಂತಿಯ ಭವಿಷ್ಯತ್ತಲ್ಲ. ಅದು ನಾವೆಷ್ಟೋ ಬಾರಿ ಸ್ವೀಕರಿಸುತ್ತ ಬಂದಿರುವ ಪ್ರತಿಜ್ಞೆಗಳೂ ಈ ದಿನ ಸ್ವೀಕರಿಸಲಿರುವ ಪ್ರತಿಜ್ಞೆಯೂ ಈಡೇರುವುದು ಸಾಧ್ಯವಾಗುವಂತೆ ನಾವು ನಡೆಸಬೇಕಾಗಿರುವ ಅವ್ಯಾಹತ ಹೋರಾಟದ ಭವಿಷ್ಯತ್ತು. ಭಾರತದ ಸೇವೆ ಎಂದರೆ ಸಂಕಟಪಡುತ್ತಿರುವ ಕೋಟ್ಯಂತರ ಜನರ ಸೇವೆ ಎಂದರ್ಥ; ದಾರಿದ್ರ್ಯ, ಅಜ್ಞಾನ, ರೋಗರುಜಿನ, ಅವಕಾಶ ಗಳ ಅಸಮಾನತೆ-ಇವುಗಳನ್ನೆಲ್ಲಾ ಕೊನೆಗಾಣಿಸುವುದು ಎಂದರ್ಥ.”

ಈ ಸ್ವಾತಂತ್ರ್ಯಕ್ಕಾಗಿ ದೇಶದ ಜನತೆ ತೆತ್ತ ಬೆಲೆ ಸಾಮಾನ್ಯ ವಾದುದೆ ? ರಾಷ್ಟ್ರದ ವಿಭಜನೆಯಾಯಿತು. ಆ ಕತ್ತಿಯ ಅಲಗಿನಿಂದ ಧಾರೆಗಟ್ಟಿ ಸುರಿದ ರಕ್ತ ಹುಚ್ಚು ಹೊಳೆಯಾಗಿ ದೇಶದಾದ್ಯಂತ ಹರಿಯಿತು. ಪ್ರಾಣರಕ್ಷಣೆಯನ್ನೂ ಅನ್ನ ಆಶ್ರಯಗಳನ್ನೂ ಬೇಡುತ್ತ ಒಂದು ಕೋಟಿ ನಿರಾಶ್ರಿತರು ಭಾರತಕ್ಕೆ ಓಡಿಬಂದರು. ಸಾಲದುದಕ್ಕೆ ಜಾಗತಿಕ ಯುದ್ಧಾ ನಂತರದ ಸಾರ್ವತ್ರಿಕ ನಿರುದ್ಯೋಗ ನಮ್ಮನ್ನು ಅಣಕಿಸಿತು. ಜುನಾಘಡ್ ಕಾಶ್ಮೀರ, ಹೈದರಾಬಾದ್, ಸಮಸ್ಯೆಗಳು ರಾಷ್ಟ್ರದ ಅಸ್ತಿತ್ವಕ್ಕೆ ಗಂಡಾಂತರ ಕಾರಿಯಾದುವು. ಉರಿಯುತ್ತಿದ್ದ ಮನೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಮಹಾದಂಡನಾಯಕನಾಗಿದ್ದ ಮಹಾತ್ಮನ ಪ್ರಾಣಾಹುತಿಯಾಯಿತು.

           ___________________
                   ೯