ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಹ್ವಾನ ಸತ್ಯಾನ್ವೇಷಕ : ಇಲ್ಲಿಗಾಯ್ತು ನೋಡು ತಮ್ಮ, ಕಡೆಗಣಿಸಿದ ಕಿಡಿ ಮನೆಯನ್ನೇ ಸುಟ್ಟ ಕಥೆ. ನಿರಸನಿ : ಈ ತುಣುಕು ಚೂರಿನ ಬೆಂಕಿನ ಮುಗೀತು ನನ್ನ ಸಿಗರೇಟು ಕೂಡಾ. ಕಡೆಗಣಿಸೋದಿಲ್ಲ. ಇಗೋ, ಚುರುಟಿ ಆರಿಸ್ತೀನಿ, ಸತ್ಯಾನ್ವೇಷಕ : [ಕಾತರದಿಂದ] ಹ್ಯಾಗನಿಸ್ತದೆ ನಿನಗೆ ? ನಿರಸನಿ : ಅನಿಸೋದು ? ಅಂದರೆ ? ಸತ್ಯಾನ್ವೇಷಕ : ನಿನ್ನ ಮೇಲೇನೂ ಪರಿಣಾಮ ಮಾಡ್ಲಿಲ್ವೆ ಈ ಕತೆ ? ನಿರಸನಿ : ಹುಚ್ಚಪ್ಪ ! ಕಟ್ಟುಕತೆ ಏನು ಪರಿಣಾಮ ತಾನೆ ಮಾಡೀತು ? ಸತ್ಯಾನ್ವೇಷಕ : [ಸೋಲಿನಿಂದ ನೊಂದು, ತುಸು ವ್ಯಂಗ್ಯವಾಗಿ ಏನು ಮಾಡೀತು, ಅಲ್ವೆ ? ಹುಂ! [ಸ್ವರವೇರಿಸಿ] ಮದುವೆಯಾಗಿ ಹೆಂಡತಿ ಮಕ್ಕಳು ಇದ್ದಿದ್ದರೆ ನಿನಗೆ ತಿಳೀತಿತ್ತು ! ಆಗ ಇದು ಅರ್ಥವಾಗಿತ್ತು. ನಿರಸನಿ : ಅದೊಂದು ಸೌಭಾಗ್ಯ ಕಮ್ಮಿ ಆಗಿದೆ ! ಸತ್ಯಾನ್ವೇಷಕ : ನಿನ್ನ ಆರೋಗ್ಯ ಕೆಟ್ಟಿದೆ, ತಮ್ಮ ನಿರಸನಿ : ಅದೇನೋ ನಿಜ. OOF