ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

ಇತರ ದೇಶಗಳಲ್ಲಿ ಕಂಡುಬರುವ ಐಕ್ಯ ನಮ್ಮಲ್ಲಿ ಇಲ್ಲವೇಕೆ ?

ಕಳೆದ ಎರಡು ಸಾವಿರ ವರ್ಷಗಳಲ್ಲಿ ಯೆಹೂದಿಯರು ಭೌಗೋಳಿಕ ಐಕ್ಯವನ್ನು ಕಂಡವರಲ್ಲ. ಚಾರಿತ್ರಿಕ ಐಕ್ಯವನ್ನೂ ಕಂಡವರಲ್ಲ. ರಾಜಕೀಯ ಐಕ್ಯವೂ ಅವರಲ್ಲಿರಲಿಲ್ಲ. ಅವರು ಮಾತನಾಡುವ ಭಾಷೆಗಳೂ ಹಲವು. ಅವರು ಬೇರೆ ಬೇರೆ ರಾಷ್ಟ್ರಗಳ ಪ್ರಜೆಗಳು. ಧಾರ್ಮಿಕ ಐಕ್ಯವೂ ಅವರನ್ನು ಬೆಸೆದಿಲ್ಲ. ಹೀಗಿದ್ದರೂ ಯೆಹೂದಿಯರಲ್ಲಿ ಭಾವೈಕ್ಯವುಂಟು. ಸ್ವಿಸ್ಸರೂ ಹಲವು ಭಾಷೆಗಳನ್ನಾಡುವ ಜನ, ಒಂದೇ ಬುಡಕಟ್ಟಿನವರೂ ಅಲ್ಲ. ಆದರೂ ಸ್ವಿಟ್ಸರ್ಲೆಂಡಿನ ರಾಷ್ಟ್ರಕ್ಕೆ ಅನಾದೃಶವಾದದ್ದು. ಐದಾರು ವಿಭಿನ್ನ ಪ್ರಾಂತ ಗಳ, ಐದು ಮುಖ್ಯ ಭಾಷೆಗಳ ಹಾಗೂ ಹಲವಾರು ಸಣ್ಣ ಪುಟ್ಟ ಭಾಷೆ ಮತ್ತು ಭಾಷಾ ಪ್ರಭೇದಗಳ ಯುಗೋಸ್ಲಾವಿಯಾ, ಈಗ ಒಂದು ದೇಶ. ಅರುವತ್ತಕ್ಕೂ ಹೆಚ್ಚು ವಿಭಿನ್ನ ಜನಾಂಗಗಳಿದ್ದೂ ಒಂದಾಗಿರುವ ರಾಷ್ಟ್ರ- ರಷ್ಯಾ, ಕಳೆದ ಮೂರು ಶತಮಾನಗಳಲ್ಲಿ ವಿವಿಧ ದೇಶಗಳಿಂದ ಜನ ವಲಸೆ ಬಂದು ನೆಲಸಿರುವರಾದರೂ ಅಮೆರಿಕ ಐಕ್ಯವುಳ್ಳ ರಾಷ್ಟ್ರ.

ಆದರೆ ಭಾರತೀಯರು ಮಾತ್ರ ಭಾವೈಕ್ಯವನ್ನೂ ಸಾಧಿಸಲು ಸಮರ್ಥರಾಗಿಲ್ಲ !

ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಏನಾಗಬಹುದು ?

ನಮ್ಮ ದೇಶದ ಇತಿಹಾಸ ಕಲಿಸುವ ಒಂದು ಪಾಠವನ್ನು ಈ ಸಂದರ್ಭದಲ್ಲಿ ನಾವು ಗಮನಿಸಬೇಕು.

ಯುವಕ ದೊರೆ ಅಲೆಗ್ಲಾಂಡರನ ನಾಯಕತ್ವದಲ್ಲಿ ಜಗತ್ತನ್ನು ಜಯಿಸಲು ಹೊರಟ ಗ್ರೀಕರ ಪಡೆಗಳು ಕ್ರಿಸ್ತಪೂರ್ವ ೯೨೭ ರಲ್ಲಿ ಹಿಂದೂಸ್ಥಾನದತ್ತ ಬಂದುವು. ಹಿಂದೂಖುಶನ್ನು ದಾಟಿ ಅಫ್ಘಾನಿಸ್ತಾನದ ಬೆಟ್ಟಗಳ

೧೧