ಈ ಪುಟವನ್ನು ಪರಿಶೀಲಿಸಲಾಗಿದೆ

 ಆಹ್ವಾನ ಮೇಲಿಂದ ಈ ದಿಕ್ಕಿಗೆ ಅವರು ಕಾಲಿಟ್ಟರು. ಭಾರತದ ಪರ್ವತ ಪ್ರದೇಶ ದಲ್ಲಿ ಮಸಾಗಾ ಎನ್ನುವ ಒಂದು ದುರ್ಗವಿತ್ತು. ಗ್ರೀಕರು ತಮ್ಮ ದಾಖಲೆ ಗಳಲ್ಲಿ ಕ್ಲಿಯಾಫೆಸ್ ಎಂದು ಕರೆದಿರುವ ಒಬ್ಬಳು ರಾಣಿ ಅದನ್ನು ಆಳುತ್ತಿ ದ್ದಳು.ಅಸಮ ಸಾಹಸದಿ೦ದ ಆಕೆ ಆಕ್ರಮಣಕಾರರನ್ನು ಇದಿರಿಸಿದಳು. ಮೂವತ್ತೇ ಸಾವಿರದ ಅವಳ ಸೇನೆ, ಅದರ ನಾಲ್ಕು ಪಾಲಷ್ಟಿದ್ದ ಗ್ರೀಕ್ ದಂಡಿನೊಡನೆ ಕಾದಾಡಿತು. ಕೊನೆಯಲ್ಲಿ ಆಕೆಗೆ ಸೋಲಾಯಿತಾದರೂ ಗಳಿಸಿದ ವಿಜಯಕ್ಕಾಗಿ ಆಕ್ರಮಣಕಾರ ಬಹಳ ಸಾವು ನೋವುಗಳ ನಷ್ಟ ವನ್ನು ಅನುಭವಿಸಬೇಕಾಯಿತು. ಸ್ವಾಭಿಮಾನಕ್ಕೂ ಶೌರ್ಯಕ್ಕೂ ಈ ದೇಶದಲ್ಲಿ ಕೊರತೆ ಇರಲಿಲ್ಲ ಎನ್ನುವುದಕ್ಕೆ ಮಸಾಗಾ ದುರ್ಗದ ರಾಣಿ ಸಾಕ್ಷಿ. ಆದರೆ, ಅಭಿಮಾನ ಶೂನ್ಯತೆ, ಸಂಕುಚಿತ ಮನೋಭಾವ, ವಿಶ್ವಾಸಘಾತ ಪ್ರವೃತ್ತಿಗಳಿಗೂ ಇಲ್ಲಿ ಅಭಾವವಿರಲಿಲ್ಲ. ಅಲೆಗ್ಝಾ೦ಡರ್ ಕದತಟ್ಟುವುದಕ್ಕೆ ಮುನ್ನವೇ ಇಲ್ಲಿ ಅಗಣಿ ತೆಗೆದರು. ತಕ್ಷಶಿಲೆಯ ಅರಸ ಆಂಭಿ ಆಕ್ರಮಣಕಾರನನ್ನು ಸ್ವಾಗತಿಸಿ, ತನ್ನ ಹಗೆಯಾದ ಪೌರವನನ್ನು ಸದೆಬಡೆಯುವ ಕಾರ್ಯದಲ್ಲಿ ಸಹಕಾರ ನೀಡುವು ದಾಗಿ ಆಶ್ವಾಸನೆ ಇತ್ತ. ಈ ಭಾರತೀಯ ಅರಸ ಬಗೆದ ದ್ರೋಹದ ಫಲವಾಗಿ ಪೌರವನಿಗೆ ಸೋಲಾಯಿತು.

  ಮುಂದೆ ಮೌರ್ಯ ವಂಶದ ಅಶೋಕ ಭಾರತದ ಧರ್ಮ ಸಮ್ರಾಟನೆನಿಸಿ

ಕೊಂಡನಷ್ಟೆ ? ಅವನ ಆನಂತರ ದೇಶ ದುರ್ಬಲವಾಯಿತ. ಸುಂಗರ, ಕಣ್ವರ ಆಳ್ವಿಕೆಗಳಲ್ಲಿ ಅರಸು ಮನೆತನದೊಳಗೆ ಯಾದವೀ ಕಲಹಗಳು ನಡೆ ದುವು. ಆಂಧ್ರರು ದಕ್ಷಿಣದಿಂದ ಬಂದು ಪಾಟಲೀಪುತ್ರವನ್ನು ವಶಪಡಿಸಿ ಕೊ೦ಡರು.

  ಈ ರೀತಿ  ಅ೦ತರ್ಯುದ್ಧಗಳಾಗುತ್ತಿದಾಗ ಪರಕೀಯರು ಮತ್ತೆ 

ಬಂದರು : ಶಕರು, ಕುಶಾಣರು, ಹೂಣರು.... ಬಲಾಢ್ಯ ಸಮ್ರಾಟನಾದ ಹರ್ಷನ ಬಳಿಕ ಕಂಡು ಬರುವ ಭಾರತದ ಚಿತ್ರ ಗೃಹಛಿದ್ರದ್ದು. ಅರಬರು ಬಂದರು. ರಜಪೂತ ರಾಜರಲ್ಲಿ ಐಕ್ಯವಿಲ್ಲದ