ಈ ಪುಟವನ್ನು ಪರಿಶೀಲಿಸಲಾಗಿದೆ

 ಆಹ್ವಾನ

  ನಿರೂಪಕ :
    ಇದೀಗ ಭಾರತೀಯ ಜೀವನದಲ್ಲಿ ನಾವು ಕಾಣುವ ಸಾಮ್ಯ, ಸಾಮರಸ್ಯ.
    ಸಪ್ತವರ್ಣಗಳ ವೈವಿಧ್ಯ, ನಮ್ಮ ವೈಶಿಷ್ಟ್ಯ.
 
       ಅಧ್ಯತ್ಮಿಕ ಚಿಂತನೆಗೇ ಪ್ರಥಮ ಪ್ರಾಶಸ್ತ್ಯವಿತ್ತು, ಎಲ್ಲ ಚಟು 
    ವಟಿಕೆಗಳನ್ನೂ ಅದಕ್ಕೆ ಅಧೀನಗೊಳಿಸಿದ ಅನಾದಿ ಕಾಲದಿಂದ, ವೈಜ್ಞಾನಿಕ 
    ಸಂಸತ್ತು ಕೂಗಿ ಕರೆಯುತ್ತಿರುವ ಈ ದಿನದ ವರೆಗೆ ಭಾರತದ ಕಥೆ ಸಾಗಿ      
    ಬಂದಿದೆ. ಈ ಸಂಧಿಕಾಲದಲ್ಲೀಗ ವಿರೋಧಾಭಾಸದ ಸವಾಲನ್ನು ನಾವು     
    ಇದಿರಿಸುತ್ತಿದ್ದೇವೆ. ಜಗತ್ತನ್ನೇ ಬೆರಗುಗೊಳಿಸುವಂತಹ ಹಿರಿಯ ಗುಣಗಳು   
    ನಮ್ಮಲ್ಲಿವೆ! ಆ ಹಿರಿಮೆಗೆ ಮಸಿ ಬಳೆಯುವಂತಹ ಅಲ್ಪತನವೂ ಇಲ್ಲಿದೆ.
    ಇದು ಯಾಕೆ ಹೀಗೆ? ಇದಕ್ಕೆ ಉತ್ತರನೀಡಲು ನಾವು ಸಮರ್ಥರಾಗಬೇಕು.   
    ಅನೈಕ್ಯ ಅವನತಿಗೆ ದಾರಿ ಎಂಬ ಇತಿಹಾಸದ ಪಾಠ, ನಮ್ಮನ್ನು ಎಚ್ಚರಿಸ  
    ಬೇಕು. ಎಚ್ಚರಗೊಳ್ಳಲು ನಿರಾಕರಿಸಿದೆವೋ, ದುರ್ದಿನಗಳು ನಮ್ಮನ್ನು  
    ಖಂಡಿತವಾಗಿಯೂ ಕಾಡುವುವು. ಸ್ವತಂತ್ರ ಭಾರತ ಮತ್ತೆ ದಾಸರಾಷ್ಟ್ರ 
    ವಾಗುವ ಸಾಧ್ಯತೆಯೊಂದು ದುಃಸ್ವಪ್ನ. ಅದೆಂದೂ ನಿಜವಾಗಬಾರದು.    
    ಸ್ವಾತಂತ್ರ್ಯಾನಂತದು ಈ ಮುಂಜಾವ ಬರಿಯ ಬೆಳಗಲ್ಲ. ಎಲ್ಲ ಜನರೂ
    ಸುಖಿಗಳಾಗಲೆಂಬ ವೇದಕಾಲದ ಸದಾಶಯವನ್ನು ಸತ್ಯಗೊಳಿಸುವ ಮಹಾ
    ಪ್ರಯತ್ನವೊಂದು ಸಮಗ್ರ ದೇಶದಲ್ಲಿ ನಡೆಯುತ್ತಿದೆ, ಆ ಪ್ರಯತ್ನ ಸಫಲ
    ವಾಗಬೇಕು. ಆಗ ಮಾತ್ರ ಭಾರತೀಯ ಬದುಕಿನ ಕಾಮನ ಬಿಲ್ಲು ನಿಜ 
    ವಾಗುವುದು; ಶಾಶ್ವತವಾಗುವುದು; ಭಾವೈಕ್ಯವುಳ್ಳ ಬಲಾಢ್ಯ ಭಾರತ 
    ಸಾಧ್ಯವಾಗುವುದು, ಶತಮಾನಗಳ ಕನಸು ನೆನಸಾಗುವುದು.
     [ಮಾತುಗಳು ಮುಕ್ತಾಯವಾಗುವುದಕ್ಕೆ ಮುನ್ನವೇ ಮೂಡಿಬರುವ
             ವಾದ್ಯವೃಂದ : ಲಲಿತರಾಗ]

の&&