ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ ತೀಯತ್ವಕ್ಕೆ ಸಾಕ್ಷಿ. ಭಾಸ, ಶೂದ್ರಕ, ಕಾಳಿದಾಸ, ವಿಶಾಖದತ್ತ, ಭವಭೂತಿಯರ ಕೃತಿಗಳೆಲ್ಲ ಭಾರತೀಯ ಸಾಹಿತ್ಯ.

    ಬಂಗಾಳಿಯಲ್ಲಿ ಬರೆದರೂ ರವೀಂದ್ರರು ಭಾರತೀಯ ಕವಿಯೆಂದು [ವಿಶ್ವಕವಿಯೆ೦ದು] ವಂದ್ಯರಾದರು. ತಮಿಳಿನ ಸುಬ್ರಹ್ಮಣ್ಯ ಭಾರತಿ ರಾಷ್ಟ್ರ ಕವಿ ಎನ್ನಿಸಿಕೊಂಡರು. ಅವರ ಕಾವ್ಯ ಸೃಷ್ಟಿಗೆ ಪ್ರೇರಣೆಯಾದ ಉದಾತ್ತ ಭಾವನೆಗಳೇ ಮಲೆಯಾಳೀ ಭಾಷೆಯಲ್ಲಿ ಮಹಾಕವಿ ವಲ್ಲತ್ತೋಳರ ಕೃತಿಗಳಿಗೆ

ಕಾರಣವಾದುವು.

    ಪದ್ಯದಲ್ಲಿ ಎಂತೋ ಪದ್ಯದಲ್ಲಿ ಅಂತೆಯೇ.  ದ್ವಿಜೇಂದ್ರ ಲಾಲ್  ರಾಯ ಬರೆದ ನಾಟಕಗಳು_“ಅಹಲ್ಯಾ”“ಮೇವಾಡ ಪತನ""ಷ ಜಹಾನ್” ಭಾರತದ ಅನೇಕ ಭಾಷೆಗಳಲ್ಲಿ ಅಭಿನಯಿಸಲ್ಪಟ್ಟು ಜನರ ಮೆಚ್ಚುಗೆ ಗಳಿಸಿವೆ. ಶರತ್ ಸಾಹಿತ್ಯ, ಸಮಗ್ರ ಭಾರತಕ್ಕೆ ವಂಗಭಾಷೆ ನೀಡಿರುವ ಕಾಣ್ಕೆ.
    ಸಂಗೀತ, ಲಲಿತ ಕಲೆಗಳನ್ನು ಪರಿಶೀಲಿಸೋಣ.
    ಹಿಂದೂಸ್ಥಾನೀ ಮತ್ತು ಕರ್ನಾಟಕ ಸಂಗೀತಗಳು ಎರಡೂ ಪರಿಪುಷ್ಟ ವಾಗಿ ಬೆಳೆದಿರುವ ವಿಭಿನ್ನ ಶಾಸ್ತ್ರೀಯ ಪದ್ಧತಿಗಳಾದರೂ, ಅವುಗಳಲ್ಲಿ ಸಾಮ್ಯ ವಿರುವ ರಾಗಗಳು ಹೇರಳವಾಗಿವೆ. ಜಾನಪದ ಗೀತೆಗಳಲ್ಲಿ ಲಾಲೀಪದದಿಂದ ಹಿಡಿದು ಶ್ರಮಗಾನದವರೆಗೆ ಅದು ಯಾವ ಭಾಷೆಯಲ್ಲಿಯೇ ಇರಲಿ ವಸ್ತು ಒಂದೇ.
    ಭಾರತೀಯ ಜಾನಪದ ನೃತ್ಯಗಳಲ್ಲಿ ವೈವಿಧ್ಯವಿದೆ. ಆದರೆ ಸುಗ್ಗಿಯ ಕುಣಿತವಿರಲಿ ಹಬ್ಬ ಹರಿದಿನಗಳ ನರ್ತನವಿರಲಿ ವಸ್ತು_ಪ್ರೇರಣೆ ಒಂದೇ. ಶಾಸ್ತ್ರೀಯ ನೃತ್ಯಗಳಿಗೆಲ್ಲ ಭರತನ ನಾಟ್ಯಶಾಸ್ತ್ರವೇ ಮೌಲಿಕ ಗ್ರಂಥ. ಕಥಕ್_ ಕಥಕ್ಕಳಿ- ಮಣಿಪುರಿ.....ಪ್ರತಿಯೊಂದು ಪ್ರಕಾರದ ಹಿಂದೆಯೂ ಶತಮಾನ ಗಳ  ಶ್ರದ್ಧೆಯಿದೆ.  ಭಾರತೀಯ ನೃತ್ಯವೆಂಬುದು ಇವೆಲ್ಲದರ ಮೊತ್ತ.
    ಶಿಲ್ಪಕಲೆ ಈ ದೇಶದಲ್ಲಿ ಹೊಸ ಹೊಸ ಪದ್ಧತಿಗಳನ್ನು ಮೈಗೂಡಿಸಿ ಕೊಂಡೇ ಬೆಳೆದಿದೆ. ಮಂದಿರ ಮಸೀದಿ, ಗೋರಿ, ಗುರುದ್ವಾರ ನಿರ್ಮಾಣ ವೈಖರಿ ಬೇರೆ ಬೇರೆ ಎಂದು ಕಂಡರೂ, ಎಲ್ಲದರಲ್ಲಾ ಸಮಾನ ಅಂಶಗಳಿವೆ.
                   ________
                     ೨೫