ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                  ಆಹ್ವಾನ
  ಋಷಿ :
           "ಸಂ ಗಚ್ಛಧ್ವ ಸಂ ವದಧ್ವ ಸಂವೋ ಮನಾಂಸಿ ಜಾನತಾಮ್
           ದೇವಾ ಭಾಗಂ ಯಥಾಪೂರ್ವ ಸಂಜಾನನ ಉಪಾಸತೇ
           ಸಮನೋ ಮಂತ್ರಃ  ಸಮಿತಿಃ ಸಮಾನೀ ಸಮಾನಂ ಮನಃ
                                                 ಸಹಚಿತ್ತ ಮೇಷಾಮ್
           ಸಮಾನಂ ಮಂತ್ರಮಛಿಮಂತ್ರಯೇ ವಃ ಸಮಾನೇನ
                                                ವೋ ಹವಿಷಾ ಜುಹೋಮಿ
           ಸಮಾನಿ ವ ಆಕೃತಿಃ ಸಮಾನಾ ಹೃದಯಾನಿ ವಃ
           ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ”        ಸ್ರೀಕಂಠ :
        [ಮೇಲಿನ ಶ್ಲೋಕದ ಕೊನೆಯ ಚರಣಗಳ ಹಿನ್ನೆಲೆಯಲ್ಲಿ)
 ಒಂದೆಡೆ ಕರೆಯಿರಿ;  ನಿಮ್ಮದಾಗಲಿ ಏಕ ಗುರಿ, ಸಮಾನ ಸಮಿತಿ; ಒಂದಾದ    ವರ ಮನ ವಿಚಾರಗಳಿರಲಿ ಸಮಾನ.  ನಿಮ್ಮ ಮುಂದಿಡುವೆ ಏಕೋದ್ದೇಶ. ಪೂಜಿಸಿರಿ ನೀವೆಲ್ಲ ಸಮಾನ ಬಲಿಯನ್ನಿತ್ತು.  ನಿಮ್ಮದಾಗಲಿ ಏಕ ಧ್ಯೇಯ.      ಇರಲಿ ಹೃದಯಗಳ ಐಕ್ಯ.  ಒಂದಾಗಿರಲಿ ನಿಮ್ಮ ಮನ. ಹೀಗೆ ಸರ್ವರೂ  ಸುಖವಾಗಿ ಒಟ್ಟಾಗಿ ಬಾಳಲಿ.

ನಿರೂಪಕ : ಸಾಮಾಜಿಕ ಐಕ್ಯವನ್ನು ಕುರಿತ ಈ ವೇದಘೋಷವೇ ಪ್ರಾಚೀನ ಜನಪದದ ರೀತಿ ನೀತಿಗಳ ತಿರುಳು. ಜನಕನಂತಹ ರಾಜರ್ಷಿಗಳಿಂದ, ಯಾಜ್ಞವಲ್ಕ್ಯ ನಂತಹ ಬ್ರಹ್ಮರ್ಷಿಗಳಿಂದ, ಬಾಳು ಆಗ ಬೆಳಗಿತು. ಮುಂದೆ ರಾಮಾಯಣ ಮಹಾಭಾರತಗಳು ರೂಪುಗೊಂಡು, ಪುರಾಣ ಗ್ರಂಥಗಳಾದುವು. ಅಲ್ಲಿದೆ ರಾಷ್ಟ್ರ ವಿಸ್ತಾರದ_ಸಮಗ್ರತೆಯ_ಕಲ್ಪನೆ. ಆಗಿನ ಅರಸರೆಲ್ಲ ಇಡಿಯ ದೇಶವನ್ನೇ ಆಳಬಯಸಿದರೆಂಬುದಕ್ಕೆ ಅಶ್ವಮೇಧ ಯಾಗವೊಂದು ದೃಷ್ಟಾಂತ. ....ನಾಲ್ಕನೆಯದಾದ ಅಥರ್ವವೇದ ಸೃಷ್ಟಿಯಾದುದು ಆರ್ಯ_ಅನಾರ್ಯ ಸಂಕರದಿಂದ ಪ್ರಭಾವಿತವಾಗಿ. ....ಉಪನಿಷತ್ತುಗಳು ರಚಿತವಾಗಿ ವೈಚಾರಿಕ ವಿಕಾಸಕ್ಕೆ ಇಂಬು ದೊರೆಯಿತು.