ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆಹ್ವಾನ ಶಾಕ್ಯ ಸೇನಾನಿ:

   ಎಲ್ಲವೂ ಸಿದ್ಧ, ಮಹಾಪ್ರಭು !
            [ಮೇಲಿನ ಮಾತು ಮುಗಿಯುತ್ತಿರುವಂತೆಯೇ ತುತೂರಿ-ಭೇರಿ-ಶಂಖಧ್ವನಿ] 

ಕೋಲಿಯಾಧಿಪ :

   ಸನ್ನದ್ದರೆ, ಸೇನಾನಿ? 

ಕೋಲಿಯ ಸೇನಾನಿ:

   ಸನ್ನದ್ಧರು, ಮಹಾರಾಜ! 
          [ಗುಜುಗುಜು ಕಲರವ. ಕುದುರಿಗಳ ಹೇಷಾರವ, ಘೀಳಿಡುವ ಆನೆಗಳು. ಈ
           ಸದ್ದು ಹಿನ್ನೆಲೆಗೆ ಸರಿದಂತೆ ದೂರದಿಂದ ಹಾವುಗೆಗಳ ಸಪ್ಪಳ, ಹತ್ತಿರ ಹತ್ತಿರ
           ಬರುತ್ತ ಹಿರಿದಾಗುವ ಸದ್ದು, ಮತ್ತೆ ಗುಸುಗುಸು, “ಯಾರು?”-ಪಿಸುದನಿ ;
           “ಯಾರು ?” ತಗ್ಗಿದ ಕ೦ಠ - ಗಾಬರಿಯಿಂದ-“ಬುದ್ಧ !”....ಕಂಪಿಸುವ ಧ್ವನಿ:
           “ಭಗವನ್ ಬುದ್ಧ!”]

ಬುದ್ಧ:

       [ಉಚ್ಛ ಕಂಠದಲ್ಲಿ-ನಿಧಾನವಾಗಿ]

ನನ್ನ ಎಡಕ್ಕೂ ಬಲಕ್ಕೂ ನಿಂತಿರುವ ಯೋಧಗಣವೇ! ಶಾಕ್ಯರಾಜ! ಕೋಲಿಯಾಧಿಪ! ಇದೇನೀ ಮೂರ್ಖತನ ! ಒಬ್ಬರನ್ನೊಬ್ಬರು ಕೊಲ್ಲುವ ಇದೇನೀ ದುಷ್ಟತನ! ಯಾವ ಸುಖಕ್ಕಾಗಿ ಈ ಹಿಂಸಾಚರಣೆ ? ತಥಾಗತನ ಈ ಹಿತಬೋಧೆಗೆ ಕಿವಿಗೊಡಿ, ಧರ್ಮ ಒಳ್ಳೆಯದು. ಧರ್ಮಕ್ಕೆ ಶರಣೆನ್ನಿ. ಅಲ್ಪ ಆಸ್ರವ, ಬಹುಕಲ್ಯಾಣ, ದಯೆ, ದಾನ, ಸತ್ಯ,ಶೌಚ--ಇದೇ ಧರ್ಮ. ಇದು ಲೋಕದಲ್ಲಿ ವೃದ್ಧಿಯಾಗುವುದೇ ಧರ್ಮಕಾರ್ಯ, ಧರ್ಮಾಚರಣೆ. ಶೀಲವಿಲ್ಲದವನೆಂದೂ ಧರ್ಮವನ್ನಾಚರಿಸಲಾರ. ರಕ್ತದ ಕೋಡಿ ಹರಿಸಿ, ರುಂಡಗಳನ್ನು ಚೆಂಡಾಡಿ, ಪಾಪಕಾರ್ಯಗಳನ್ನು ಮಾಡಿ, ನೀವು ಸಾಧಿಸು ವುದಾರು ಏನು? ಹೆಜ್ಜೆಯನ್ನು ಹಿಂದಿಟ್ಟು ಚೆದರಿ ಹೋಗಿ! ಸಮ್ಯಕ್ ದೃಷ್ಟಿ, ಸಮ್ಯಕ್ ಸಂಕಲ್ಪ, ಸಮ್ಯಕ್ ವಾಕ್, ಸಮ್ಯಕ್ ಕರ್ಮ, ಸಮ್ಯಗಾ ಜೀವ, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ, ಸಮ್ಯಕ್ ಸಮಾಧಿ-ಈ ಅಷ್ಟಾಂಗಿಕ ಮಾರ್ಗವನ್ನು ಅನುಸರಿಸಿ!

擎.9