ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

ವೆನು. ನನ್ನ ಪ್ರಜೆಗಳಾದರೂ ಹಾಗೆಯೇ ಮಾಡಬೇಕೆಂಬುದು ನನ್ನ ನಿರ್ದೇಶವಾಗಿದೆ___”

ಇತಿಹಾಸಕಾರ :

___ಹೀಗೆ ಹೇಳಿದ ಅಶೋಕನು ತನ್ನ ಅನುಜ್ಞೆಯನ್ನೂ ಧರ್ಮಬೋಧೆಗಳನ್ನೂ ಅಸಂಖ್ಯ ಶಿಲಾಶಾಸನಗಳಾಗಿ ಕೊರೆಸಿದನು.

ಅಶೋಕ :

" ದೇವಾನಾಂ ಪ್ರಿಯದರ್ಶಿ ಪ್ರಭುವು ಅಭಿಷಿಕ್ತನಾದ ಎಂಟನೆಯ ವರ್ಷದಲ್ಲಿ ಕಳಿಂಗವನ್ನು ಜಯಿಸಲಾಯಿತು. ಆಗ ಒಂದೂವರೆ ಲಕ್ಷ ಜನರನ್ನು ಸೆರೆ ಹಿಡಿಯಲಾಯಿತು ; ಒಂದು ಲಕ್ಷ ಜನ ಗಾಯಗೊಂಡರು ; ಅನೇಕ ಜನ ಸತ್ತರು. ಕಳಿಂಗವನ್ನು ಜಯಿಸಿ ಆದೊಡನೆಯೇ ದೇವಾನಾಂಪ್ರಿಯನು, ಧರ್ಮವನ್ನು ಪ್ರೀತಿಸುವುದಕ್ಕೂ ಧರ್ಮಬೋಧೆಯನ್ನು ಮಾಡುವುದಕ್ಕೂ ತೊಡಗಿದನು.... ಈ ದಿನ, ಕಳಿಂಗದಲ್ಲಿ ಯಾತನೆಗೆ ಗುರಿಯಾದವರ ನೂರರಲ್ಲೊ೦ದು ಸಾಲು....ಸಾವಿರದಲ್ಲೊ೦ದು ಪಾಲು ಕೊಲ್ಲಲ್ಪಟ್ಟರೆ, ಸತ್ತರೆ ಅಥವಾ ಸೆರೆಹಿಡಿಯಲ್ಪಟ್ಟರೆ, ದೇವಾನಾಂಪ್ರಿಯನಿಗೆ ಬಲು ಸಂಕಟ ವಾಗುವುದು. ದೇವಾನಾಂಪ್ರಿಯನು ತನ್ನ ಸಾಮ್ರಾಜ್ಯದ ಅರಣ್ಯ ನಿವಾಸಿ ಗಳಿಗೂ ಕೂಡ ತಿಳಿಯಹೇಳುವನು ; ಅವರನ್ನು ಸರಿದಾರಿಗೆ ತರಬಯಸುವನು. ಆದರೆ ದೇವಾನಾಂಪ್ರಿಯನು ಕರುಣಾಳುವಷ್ಟೇ ಅಲ್ಲ, ಶಕ್ತಿಶಾಲಿಯೂ ಆಗಿ ದ್ದಾನೆ. ಪಶ್ಚಾತ್ತಾಪಪಡಿರಿ, ಇಲ್ಲವೆ ಹತರಾಗಿರಿ___ಎಂದು ಅವರಿಗೆ ಹೇಳು ತಾನೆ....ಧರ್ಮವಿಜಯವೇ ಶ್ರೇಶ್ಟತಮ ನಿಜಯವೆಂಬುದು ದೇವಾನಾಂ ಪ್ರಿಯನ ಅಭಿಪ್ರಾಯ....ತನ್ನ ರಾಜ್ಯ ಹಾಗೂ ಗಡಿ ಪ್ರದೇಶಗಳಲ್ಲಿ ಮಾತ್ರ ವಲ್ಲದೆ, ಆರು ನೂರು ಯೋಜನ ದೂರವಿರುವ ಗ್ರೀಕ್ ರಾಜ್ಯಗಳಲ್ಲೂ.... ದಕ್ಷಿಣದಲ್ಲಿ ಚೋಳ, ಪಾಂಡ್ಯ ದೇಶಗಳಲ್ಲೂ ಸಿಂಹಳತನಕವೂ ದೇವಾನಾಂ ಪ್ರಿಯನಿಗೆ ಈ ಧರ್ಮವಿಜಯವು ಲಭಿಸಿದೆ.”

ಇತಿಹಾಸಕಾರ :

ಆಂತರಿಕ ಆಡಳಿತದಲ್ಲಿ ಮಾನವೀಯತೆ, ಆಕ್ರಮಣಕಾರೀ ಯುದ್ಧಗಳ ವರ್ಜನೆ___ಇವು ಅಶೋಕನ ರಾಜ್ಯಭಾರದ ಮುಖ್ಯ ಸೂತ್ರಗಳಾಗಿದ್ದುವು.

೪೫