ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ


ಪೂರ್ವಾರ್ಧ

"ಆಹ್ವಾನ""-ಒಂದು ನಾಟಕ ಮಾಲಿಕೆ.ಆರು ಭಾಗಗಳುಳ್ಳ ಈ ಕೃತಿಯ ವಸ್ತು : ಭಾರತ.

ಕವಿಗಳು ಹಾಡಿ ಹೊಗಳಿರುವ,ಇತಿಹಾಸಕಾರದು ಸಂಶೋಧಿಸಿ ಸಿದ್ಧಪಡಿಸಿರುವ ಭವ್ಯ ಭಾರತದ ಚಿತ್ರ ಚಿತ್ತಾಕರ್ಷಕವಾದದ್ದು,
ಉತ್ತರದಲ್ಲಿ ಹಿಮಾಚ್ಛಾದಿತ ಪರ್ವತಾವಳಿ : ಉಳಿದ ಮೂರೂ ದಿಕ್ಕುಗಳಲ್ಲಿ ವಿಸ್ತಾರವಾಗಿ ಮೈ ಚಾಚಿರುವ ಕಡಲು ; ತುಂಬಿ ಹರಿಯುವ ನದೀ ನದಗಳು; ಕಣ್ಣ ತಣಿಸುವ ಹಸಿರು ಸಿರಿಯನ್ನು ಹೊತ್ತ ನೆಲ-ಇದೀಗ ಪುರಾಣಗಳಲ್ಲಾ ಇತಿಹಾಸದಲ್ಲಾ ಈ ದೇಶವನ್ನು ಕುರಿತು ಕಂಡುಬರುವ ಭೌಗೋಳಿಕ ವರ್ಣನೆ, ಇಲ್ಲಿ ಐದು ಸಾವಿರ ವರ್ಷಗಳಿಗೂ ಹಿಂದೆ ಸುಸಂಸ್ಕೃತ ಜನ ವಾಸವಾಗಿದ್ದ ರು. ನಾಗರಿಕತ್ರೆ ಪರಾಕಾಷ್ಠೆಯನ್ನು ಮುಟ್ಟಿತ್ತು,

ಇದು ಹಲವು ಹೆಸರುಗಳಿಂದ ಕರೆಯಲ್ಪಟ್ಟಿರುವ ದೇಶ : ಜಂಬೂ ದ್ವೀಪ, ಆರ್ಯಾವರ್ತ, ಭರತವರ್ಷ, ಭಾರತ, ಹಿಂದೂಸ್ಥಾನ, ಇಂಡಿಯಾ
ಇಲ್ಲಿ ಮೈತಳೆದು ಬೆಳೆದು ರಾಷ್ಟ್ರವ್ಯಾಪಿಯೂ ವಿಶ್ವವಾಪಿಯೂ ಆದ ಮತಗಳು, ಬೋಧನೆಗಳು,ಅನೇಕ ಹಿಂದೂ ಧರ್ಮ, ಜೈನಮತ, ಬೌದ್ಧಮತ, ದ್ವೈತ -ಅದ್ವೈತ-ವಿಶಿಷ್ಟಾದ್ವೈತ ಪಂಥಗಳು, ವೀರಶೈವಮತ ಇವೆಲ್ಲ ಭಾರತೀಯ ಬದುಕಿನ ವೈವಿಧ್ಯಕ್ಕೆ ಸಾಕ್ಷಿ . ಸಾಲದುದಕ್ಕೆ ಈ ನೆಲ ಸಾರಗ್ರಾಹಿ, ಕ್ರಿಸ್ತಮತದಿಂದಲೂ ಮಹಮ್ಮದೀಯ ಮತದಿಂದಲೂ ಒಳ್ಳಿ