ಈ ಪುಟವನ್ನು ಪರಿಶೀಲಿಸಲಾಗಿದೆ



ಆಹ್ವಾನ

ತನ್ನು ಹೀರಿಕೊಂಡುದಷ್ಟೇ ಅಲ್ಲ, ಇಲ್ಲಿ ಅವು ಚಿಗುರುವುದಕ್ಕೂ ಈ ಭೂಮಿ ಅವಕಾಶವಿತ್ತಿದೆ. ಪ್ರವಾಹ ಎಲ್ಲಿಂದಲೇ ಬರಲಿ ಈ ಮಣ್ಣಿ ನಲ್ಲಿ ಅದು ಇಂಗಲೇಬೇಕು. . “ಪುರಾತನ ಭಾರತೀಯ ನಾಗರಿಕತೆಯ ಅತಿ ಸ್ಫುಟವಾದ ಲಕ್ಷಣವೆಂದರೆ ಅದರ ಮಾನವೀಯತೆ"

ಅತಿಶಯೋಕ್ತಿಯಲ್ಲದ ಈ ಮಾತನ್ನು ಆಡಿರುವವರು ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಭಾರತಾಧ್ಯಯನದ ಪ್ರಾಧಾಪಕರಾಗಿರುವ ಮಿಸ್ಟರ್ ಭಾಷಾಮ್, ಪ್ರಾಚೀನ ಭಾರತದಲ್ಲೇ ಏಕೆ, ವೇದೋಪನಿಷತ್ತುಗಳ ಕಾಲದಿಂದ ಆಧುನಿಕ ಅವಧಿಯವರೆಗೂ ಭಾರತೀಯ ಬದುಕಿನ ಮುಖ್ಯ ಲಕ್ಷಣವೇ ಮಾನವೀಯತೆ.
ನಮ್ಮದು, ಜನಜೀವನದ ಮೇಲೆ ಧರ್ಮದ ಪ್ರಭಾವ ವಿಶೇಷವಾಗಿರುವ ದೇಶ. ಹಿಂದೆ ಅಲ್ಲಲ್ಲಿ ಆಗಾಗ್ಗೆ ಕ್ರೌರ್ಯ ಹಿಂಸೆಗಳು ಕಂಡುಬಂದರೂ ಪ್ರಮುಖ ಅರಸರೆಲ್ಲ ತಮ್ಮ ರಾಜ್ಯಭಾರಕ್ರಮದಲ್ಲಿ ಧಾರ್ಮಿಕ ದೃಷ್ಟಿಯನ್ನು ಹೊಂದಿರುತ್ತಿದ್ದರು. ಜಿನ ಧರ್ಮಾನುಯಾಯಿಯಾದ ಸಮಾಟ ಚಂದ್ರ ಗುಪ್ತನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯವು ಸುಖಸಮೃದ್ಧಿಯಿಂದ ಕೂಡಿತ್ತು.



ಮಹಾಕವಿ ಕುವೆಂಪು ತಮ್ಮ “ಅಲ್ಲಿ-ಇಲ್ಲಿ” ಕವಿತೆಯಲ್ಲಿ ಹೀಗೆ ನುಡಿದಿದ್ದಾರೆ:
[ಈ ದೇಶಕ್ಕೆ]

* ಕಮ್ಯೂನಿಸಮ್ಮೇ ಬಂದರೂ ;
ಹಾಕುವೆವು ಅದಕ್ಕೂ ಮೂರು ನಾಮ !
ಅದರ ಹೆಗಲಿಗೂ ಬೀಳುವುದು ಜನಿವಾರ ! 
ಅದಕ್ಕೂ ಕಟ್ಟುವೆವು ಲಿಂಗ ! 
ಕ್ಲಾಸು ತಗುಲಿಸಿದರೂ ಆಶ್ಚರ್ಯವಿಲ್ಲ! 
ಇಲ್ಲಿ ಕಮ್ಯೂನಿಸಮೂ ಕಿರಸ್ತಾನ! 
ಕೊನೆಗೆ,ಹಿಂದೂಸ್ಥಾನದಲ್ಲಿಯೂ ಅದು ಮುಸಲ್ಮಾ ನ!...
----------------
೬