ಈ ಪುಟವನ್ನು ಪ್ರಕಟಿಸಲಾಗಿದೆ

"ತಮ್ಮ. ತಾವು ಬರಬಹುದೂಂತ ಕಾಫಿಮಾಡ್ತಿದಾನೆ."

"ಕುಡಿಯೋರು ಯಾರೊ ಆ ಕಾಫೀನ?"

"ಹಾಗೆಲ್ಲಾದರೂ ಅಂದ್ಗಿಂದೀರ ಅವನೆದುರು!"

"ಇಲ್ಲವ್ವೋ ಇಲ್ಲ."

ಒಂದು ನಿಮಿಷ ಸುಮ್ಮನಿದ್ದು ನಕ್ಕು ತುಂಗಮ್ಮ ಕೇಳಿದಳು:

"ಒಂದು ವಿಷಯ ಗೊತ್ತೆ?"

"ಎನು?"

"ನನ್ತಮ್ಮ ಕೇಳ್ದ ಇವತ್ತು, ಇನ್ನು ಮೂರ್ತಿನ ಭಾವ ಅಂತ ಕರೀ

ಬಹುದೆ ಅಕ್ಕಾಂತ."

"ಓ! ಅಂತೂ ಡಂಗುರ ಹೊಡೀತಾ ಇದೀಯಾಂತನ್ನು."

ಆ ಧ್ವನಿಯಲ್ಲಿ ಅಸಮಾಧಾನದ ಛಾಯೆ ಇದ್ದುದನ್ನು ಕಂಡು

ತುಂಗಮ್ಮ ಸುಮ್ಮನಾದಳು.

.....ಆದರೆ ಪರಿಸ್ಥಿತಿ ಬಹಳ ದಿನ ಹಾಗೆಯೇ ಇರುವುದು ಸಾಧ್ಯವಿರ

ಲಿಲ್ಲ. ತುಂಗಮ್ಮನ ತಂದೆ ಅನಿಶ್ಚಯತೆಯ ಹಲವಾರುದಿನಗಳನ್ನು ಕಳೆದ್ರು ಕೊನೆಗೆ ಮಗಳೊಡನೆಯೇ ಆ ಪ್ರಸ್ತಾಪವೆತ್ತಿದರು.

"ಹೋದ ಭಾನುವಾರ ನಾರಾಯಣ ಮೂರ್ತಿ ಬಂದಿದ್ನೆ ತುಂಗಾ?"

"ಬಂದಿದ್ರು."

"ಯಾಕೋ. ಅವನು ಬರೋ ಹೊತ್ತಿಗೆ ಮನೇಲಿದ್ದು ಮಾತಾಡೋಣ

ಅಂದರೆ ಸಾಧ್ಯವಾಗ್ತಾನೇ ಇಲ್ಲ."

"ಇವೆಯಲ್ಲಿ ನಿಮ್ಮ ಸಾವಿರ ಕೆಲಸಗ್ಳು.."

"ಮತ್ತೆ, ಮಾಡ್ಬೇಡ್ವೆ ತುಂಗ? ರಿಟೈರಾಗೋ ವರ್ಷ್ ಶೋಭೇರಿ

ಅಂತ ಮಾತು ಕೇಳ್ಲೆ?"

ತುಂಗಮ್ಮ ನಕ್ಕಳು.

ಅಕೆಯ ತಂದೆ ಸ್ವಲ್ಪ ಹೊತ್ತು ತಡೆದು ಮತ್ತೆ ಆರಂಭಿಸಿದರು.

"ತುಂಗಾ, ನಾರಾಯಣ ಮೂರ್ತಿ ಹ್ಯಾಗಿದಾನೆ?"

ತುಂಗಮ್ಮನ ಎದೆ ಡವಡವನೆ ಹೊಡೆದುಕೊಂಡಿತು.

"ಯಾಕೆ, ಚೆನ್ನಾಗಿಯೇ ಇದಾರಲ್ಲಾ!"