ಈ ಪುಟವನ್ನು ಪ್ರಕಟಿಸಲಾಗಿದೆ

ಮತ್ತೆ ಕೆಲವು ನಿಮಿಷಕಾಲ ತಂದೆಯ ಮಾತು ನಿಂತಿತು.

"ತುಂಗಾ...."

"ಏನಣ್ಣ?"

"ನಾರಾಯಣಮೂರ್ತಿ-....ಆವನೇನಾದರೂ ಈ ವಿಷಯ ಎತ್ತಿದ್ನೆ

ತುಂಗ?"

ಯಾವ ವಿಷಯ-ಎಂದು ತುಂಗಮ್ಮ ಕೇಳಬಹುದಾಗಿತ್ತು. ಆದರೆ

ಹಾಗೆ ಕೇಳಲು ಮನಸಾಗಲಿಲ್ಲ. ತಂದೆಯ ಹೃದಯದ ಸಂಕಟ ಆವಳಿಗೆ ಅರ್ಥವಾಗುತಿತ್ತು.

ತಂದೆಯ ಪ್ರಶ್ನೆಗೆ ಉತ್ತರಕೊಡಬೇಕು ನಿಜ. ಆದರೆ ಏನೆಂದು?

ಆಕೆ,ಸೀರೆಯ ಅಂಚಿನ ಚಿತ್ತಾರಗಳನ್ನೆ ನೋಡುತ ಕುಳಿತಳು.

"ಆ ಮಾತೇ ಬರ್ಲಿಲ್ಲಾಂತನ್ನು...."

ನಿರಾಸೆಯ ಭಾವನೆ ಸರಿಯಲ್ಲವೆಂದು ಹೇಳಲು ತುಂಗಮ್ಮ ತವಕ

ಗೊಂಡಳು.

"ಇಲ್ಲಣ್ಣ. ಆ ವಿಷಯ ಬಂದಿತ್ತು"

"ಹೂಂ ? ನಿಜವಾಗ್ಲೂ ? ಮಾಡ್ಕೋತೀನೀಂತಂದ್ನೆ"

?"ತುಂಗಮ್ಮನಿಗೆ ನಾಚಿಕೆಯಾಯಿತು.

"ನೀನು ಕೇಳ್ನೋಡು ಅಣ್ಣ...."

...ಶನಿವಾರದಿನ ನಾರಾಯನಮೂರ್ತಿಗೆ ಬೆಳಿಗ್ಗೆ ಆಫೀಸು. ಮಧ್ಯಾಹ್ನ

ಬಿಡುವು ಮಾಡಿಕೊಂಡು ತುಂಗಮ್ಮನ ತಂದೆ ಅವನನ್ನು ಕಾಣ ಹೋದರು.

ಅವರು ಬಂಡೊಡನೆಯೆ, ಮುಂದೆ ಅವರಿಂದ ಬರಬಹುದಾದ ಪ್ರಶ್ನೆ

ಯನ್ನೂ ಆತ ನಿರೀಕ್ಷಿಸಿಯೇ ಇದ್ದನೇನೊ!

ಮೂರ್ತಿಯ ಕೊಠಡಿಯಿಂದ ಹಿಂತಿರುಗಿದಾಗ, ಹೊತ್ತಿದ್ದ ಅರ್ಧ

ಭಾರವನ್ನು ಕೆಳಕ್ಕೆ ಇಳುಹಿದ ಹಾಗೆ ಆಗಿತ್ತು ತುಂಗಮ್ಮನ ತಂದೆಗೆ.

ತನಗೆ ಒಪ್ಪಿಗೆ ಎಂದು ಮೂರ್ತಿ ತಿಳಿಸಿದ್ದ, ಬೇಗನೆ ಮೈಸೂರಿಗೆ

ಹೋಗಿ ತನ್ನ ಮನಿಯವರನ್ನು ತಾನೆ ಒಪ್ಪಿಸುವುದಾಗಿ ಹೇಳಿದ್ದ.

ಬಹಳ ದಿನಗಳ ಬಳಿಕ ತಂದೆ ನಗತೊಡಗಿದುದನ್ನು ಕಂಡು ತುಂಗಮ್ಮ

ನಿಗೆ ಬಲು ಸಂತೋಷವಾಯಿತು.