ಈ ಪುಟವನ್ನು ಪ್ರಕಟಿಸಲಾಗಿದೆ

ತಮ್ಮ ಒಂದು ಘಂಟೆಯ ಹೊತ್ತಿನೊಳಗೇ ಹಿಂತಿರುಗಿದ.

"ಇದಾರೆ ಅಕ್ಕ."ಎಂದ.

ತುಂಗಮ್ಮನ ಎದೆ ಧಸಕ್ಕೆಂದಿತು.

"ಏನಂದ್ರು?"

"ಭಾನುವಾರ ಮೈ ಚೆನ್ನಾಗಿರ್ಲೀವಂತೆ.ಅದಕ್ಕೇ ಬರ್ಲಿಲ್ಲಾಂತ

ಅಂದ್ರು."

ಅನಾರೋಗ್ಯದ ಮಾತುಕೇಳಿ,ಉಳಿದಲ್ಲ ಯೋಚನೆಗಳೂ ತುಂಗಮ್ಮ

ನಿಂದ ಓಡಿ ಹೋದುವು.

"ಅಯ್ಯ!ಏನಾಗಿತ್ತಂತೆ!ಈಗ ಹ್ಯಾಗಿದಾರೆ?"

"ಏನಾಗಿತ್ತೋ!ಈಗಂತೂ ದಿನನಿತ್ಯದ ಹಾಗಿದಾರ. ನಾನು

ಹೋದಾಗ ಮುಖಕ್ಕೆಲ್ಲ ಸೋಪು ಬಳಕೋಡು ಕನ್ನಡಿ ಮುಂದೆ ಕೂತಿದ್ರು.... ಅಲ್ಲ ಅಕ್ಕ , ಮೂಖಕ್ಷೌರ ಮಾಡ್ಕೊಳ್ಳೋಕೆ ಎಷ್ಟೊಂದು ಟೈಮು ತಗೋಡ್ರೂಂತ ಅವರು!"

ತಮ್ಮನ ಟೇಕ ಕೇಳಿ ತುಂಗಮ್ಮನಿಗೆ ನಗು ಬಂತು.

"ಏನಂದ್ರು?ನಾಳೆ ಬರ್ತಾರಂತಾ?"

"ನಾಳೆ? ಅದ್ಯಾಕೊ? ಭಾನುವಾರ ಬರ್ತೀನೀಂತಂದ್ರು."

"ಹೂಂ...."

"ನಿಮ್ತಂದೆಗೂ ತಿಳಿಸೂಂತಂದ್ರು."

ಹಾಗಾದರೆ ಮುಂದಿನ ಭಾನುವಾರ ಏಕಾಂತದಲ್ಲೇನನ್ನೂ ಮೂರ್ತಿ

ಯೊಡನೆ ಮಾತನಾಡುವುದು ಸಾಧ್ಯವಿರಲಿಲ್ಲ. ಯಾಕೆ ಹಾಗೆ ಹೇಳಿದರೂ?

ಭಾನುವಾರದವರೆಗೆ ಯಾಕೆ? ಮೊದಲೇ ಆತ ಬರಬಹುದು.

ಬೇಕೆಂದೇ ತಮ್ಮನಿಗೆ ತಿಳಿಸಿಲ್ಲ ಅಷ್ಟೆ-ಎಂದು ತನ್ನನ್ನು ತಾನೇ ತುಂಗಮ್ಮ ಸಮಾಧಾನಪಡಿಸಿಕೊಂಡಳೂ.

ಆದರೆ ಆ ವಾರದಲ್ಲಿ ಯಾವ ದಿನವೂ ಆತ ಬತಲಿಲ್ಲ.

ಭಾನುವಾರ ಬಂದವನೂ ಕೂಡ, ನೇರವಾಗಿ ಕಣ್ಣೆತ್ತಿ ತುಂಗಮ್ಮ

ನನ್ನು ನೋಡಲಿಲ್ಲ.

"ಮೈಸೂರಿನಿಂದೇನಾದರೂ ಕಾಗದ ಇದ್ಯೆ ಸಾಣೆ?"