ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ಅಭಯ

ಇನ್ನೂ ತುಂಗಮ್ಮನಲ್ಲಿ ಉಳಿದಿತ್ತು. ಬೀಸುತಿದ್ದ ಸುಂಟರಗಾಳಿ ಬೇಗನೆ
ನಿಂತು, ವಾತಾವರಣ ನಿರ್ಮಲವಾಗುವುದನ್ನು ಅವಳು ಇದಿರು ನೋಡಿದಳು.
ಸುಂಟರಗಾಳಿ ನಿಲ್ಲಲೇ ಇಲ್ಲ...
ತುಂಗಮ್ಮ ತಮ್ಮನನ್ನು, ನಾರಾಯಣಮೂರ್ತಿ ಕೆಲಸ ಮಾಡುತಿದ್ದ
ಅಫೀಸಿಗೆ ಕಳುಹಿ ಕೊಟ್ಟಳು.
ಅತ ಹಿಂತಿರುಗಿ ಬಂದು ಹೇಳಿದ :
"ಹೋದ ಭಾನುವಾರದಿಂದ ಅವರಿಗೆ ಮೂರು ವಾರ ರಜಾನಂತೆ
ಅಕ್ಕಾ. ಸಿಕ್ ಲೀವ್...ಆತ ಏನಾದ್ರೇನು ? ನಿನಗ್ಯಾಕಕ್ಕ ಇಷ್ಟೊಂದು
ಚಿಂತೆ ಅವನ್ದು ?"
ತಮ್ಮ ಅದೇನು ಕೇಳುತಿದ್ದನೊ? ತುಂಗಮ್ಮನ ಕಿವಿಗಳಲ್ಲಿ ಮೊರೆಯು
ತಿದ್ದುದೊಂದೇ--ಸಿಕ್ ಲೀವ್. ತನ್ನ ಮೂರ್ತಿಗೆ ಕಾಹಿಲೆಯೆ ? ಅಯ್ಯೊ !
ಅದೇನು ಸ್ಂಕಟವೊ! ಆತ ತನಗೆ ಬರೆದು ತಿಳಿಸಬಾರದೆ ? ತನ್ನನ್ನು ಕರೆಸಿ
ಕೊಳ್ಳಬಾರದೆ ?
ಮೂರು ವಾರಗಳಾ ಬಳಿಕ ತಮ್ಮ ಮತ್ತೊಮ್ಮೆ ವಿಚಾರಿಸಿಕೊಂಡು
ಬಂದ.
"ಅಕ್ಕ! ಮೂರ್ತಿಗೆ ವರ್ಗವಾಯ್ತಂತೆ!"
"ಅ !"
"ವರ್ಗ."
ತುಂಗಮ್ಮನಿಗೆ ಬವಳಿ ಬಂದಂತಾಯಿತು ಅವಳು ಗೋಡೆಗೊರಗಿ
ಕುಸಿಕುಳಿತಳು.
ಅದೊಂದನ್ನೂ ಗಮನಿಸದೆ ತಮ್ಮ ವರದಿಯೊಪ್ಪಿಸುತ್ತಲಿದ್ದ.
"ಮೈಸೂರಿಗೆ ವರ್ಗವಾಯ್ತಂತೆ. ಇನ್ನು ಅಲ್ಲೇ ಕೆಲಸ ಮಾಡ್ತಾ
ರಂತೆ"
ಕುಸಿಕುಳಿತಿದ್ದ ತುಂಗಮ್ಮನ ಕಣ್ಣುಗಳು ವಿಚಿತ್ರವಾಗಿ ಚಲಿಸುತಿ
ದ್ದುವು. ಅದನ್ನು ಕಂಡ ತಮ್ಮನಿಗೆ ಗಾಬರಿಯಾಯಿತು.
"ಅಣ್ಣಾ !"
--ಎಂದು ಆತ ಕೂಗಿದ. ಆದರೆ ತಂದೆ ಮನೆಯಲ್ಲಿರಲಿಲ್ಲ.