ಈ ಪುಟವನ್ನು ಪ್ರಕಟಿಸಲಾಗಿದೆ

ಮುಂದಿನ ಕೆಲಸವನ್ನು ನೆನೆಸಿಕೊಳ್ಳುತ್ತಾ ಸರಿಸಮ್ಮ ಕೇಳಿದರು:

"ನೀನು ಹೊರಟ್ಟಂದಿರೋದು ಮಾವಳ್ಳಿ ಮನೆಯವರಿಗೆ ಗೊತ್ತಾ?"

"ಗೊತ್ತು ದೊಡ್ಡಮ್ಮ,ಕಾಗದ ಇಟ್ಟು ಬಂದಿದೀನಿ."

"ಏನು ಬರೆದಿದೀಯಾ ಅವರಲ್ಲಿ?"

ಅದರಲ್ಲಿ ತಾನು ಬರೆದಿದ್ದುದನ್ನು ತುಂಗಮ್ಮ ಸ್ಮರಿಸಿಕೊಂಡಳು..... 'ನನ್ನ ವಿಚಾರವಾಗಿ ಯಾವ ಯೋಚ್ನೇನೂ ಮಾಡ್ಬೇಡಿ ....ನಾನೇನೂ ಮಾಡಿಕೊಳ್ಳಲ್ಲ...ಸುರಕ್ಷಿತವಾನಿ...ತಂದೆಗೂ ಈ ವಿಷಯ ನಾನೇ ತಿಳಿಸ್ತೀನಿ..ನೀವು ನಿಶ್ಚಿಂತವಾಗಿರಬೇಕು..ಅಕ್ಕ ಪಕ್ಕದವರ ಕುತೂಹಲ ಕೆರಳದಂತೆ ನೋಡಿಕೊಳ್ಳಿ..ನನಗಾಗಿ ಈ ಐದು ತಿಂಗಳು ನೀವು ಪಟ್ಟ ಶ್ರಮ ಅಷ್ಟಿಷ್ಟಲ್ಲ.ಆ ಖಣವನ್ನು ಈ ಜನ್ಮದಲ್ಲಿ ನಾನು ತೀರಿಸುವೆನೋ ಇಲ್ಲವೋ...'

"ಇಷ್ಟೆ ದೊಡ್ಡಮ್ಮಾ,ಇಷ್ಟೇ.."

"ಸರಿ ತುಂಗಾ,ಆದರೆ ಅವರೇನಾದರೂ ನೀನು ನಾವತ್ತೇಂತ ವೋಲೀ ಸರಿಗೆ ದೂರು ಕೊಟ್ಟರೆ,ನಾವೂ ವಿಷಯ ವರದಿ ಮಾಡ್ಬೇಕಾಗುತ್ತೆ."

"ಅಂದರೆ-?"

"ಹೆದರ್ಬೇಡ...ನಿನ್ನನ್ನ ಯಾರೂ ಇಲ್ಲಿಂದ ಎಳಕೊಂಡು ಹೋಗಲ್ಲ.ಆದರೆ ಪೋಲೀಸರಿಗೆ ನೀನು ಇಲ್ಲಿದೀಂತ ತಿಳಿಸ್ಬೇಕು ಅಲ್ವೆ?"

"ಇಲ್ಲ ದೊಡ್ಡಮ್ಮ.ಈ ವಿಷಯ ಬಹಿರಂಗವಾದ್ರೆ ನಮ್ಮ ತಂದೆಗೆ ಕೆಟ್ಟ ಹೆಸರು ಬರತ್ತೆ."

"ಇರಲಿ ಬಿಡು..ನಿನ್ನ ಕಾಗದ ನೋಡಿದ್ಮೇಲೆ,ನಿನ್ನ ತಂದೆಗೆ ತಿಳಿಸ್ದೆ ಅವರು ದೂರುಗೀರು ಕೊಡಲಾರರು..."

"ನನಗೂ ಹಾಗೇ ಅನಿಸುತ್ತೆ ದೊಡಮ್ಮ.."

"ನೀನು ಯಾವಯೋಚ್ನೇನೂ ಇಲ್ದೆ ಸುಮ್ನಿರು."

"ಇಲ್ಲಿಗ್ಬಂದ್ಮೇಲೆ ನನಗೆ ಪುನಜ‌‌‌‌ನ್ಮ ಆದ ಹಾಗಾಯ್ತು ದೊಡ್ಡಮ್ಮ"

ಪುನಜ‌ನ್ಮ ಮುಗ್ಧಹುಡುಗಿಗೇನೂ ತಿಳಿಯದು.ಆಕೆಗೆ ಸುಖ ಪ್ರಸವವಾಯಿತೆಂದರೆ ಅನಂತರದ ಜೀವನವನ್ನು ಪುನಜನ್ಮವೆಂದು ಕರೆಯುವುದರಲ್ಲಿ ಅಥ‍ವಿತ್ತು.ಸುಖಪ್ರಸವ..