ಈ ಪುಟವನ್ನು ಪ್ರಕಟಿಸಲಾಗಿದೆ

೧೧೨

ಅಭಯ

ಸರಸಮ್ಮ,ತುಂಗಮ್ಮನನ್ನು ದಿಟ್ಟಿಸಿ ನೋಡಿದರು. "ದಿನ ತುಂಬ್ತೆ ತುಂಗಾ?" "ಇರಬೇಕು ದೊಡ್ಡಮ್ಮ...ಬೇಜಾರು..ಅಂತೂ ಬದುಕಿದೀನಲ್ಲ." "ಹಾಗನ್ಬಾರದು ಮಗೂ.ಈಗ ನಿನ್ನದೊಬ್ಬಳದೇ ಅಲ್ಲ-ಇನ್ನೊಂದು ಜೀವದ ಜವಾಬ್ದಾರಿಯೂ ಇದೆ ನಿನ್ಮೇಲೆ.ನೀನು ನಗುನಗುತ್ತ ಸುಖವಾಗಿರ್ಬೇಕು." ತುಂಗಮ್ಮ ನೋವಿನ ನಗೆ ನಕ್ಕಳು. ಸರಸಮ್ಮ ಪುಸ್ತಕ ತೆರೆದು ಬರೆದುಕೊಂಡರು: ಹೆಸರು-ತುಂಗಮ್ಮ;ವಯಸ್ಸು-ಹದಿನೆಂಟು,ಹತ್ತೋಂಭತ್ತು; ದೇಹಸ್ಥಿತಿ-ಆರೋಗ್ಯವಂತೆ,ಗಭಿಣಿ;ಕರೆದುಕೊಂಡು ಬಂದವರು-ಸ್ವತಃ ಬಂದಳು;ಪುವ‍ ಇತಿಹಾಸ_ ಸರಸಮ್ಮ ಚುಟುಕಾಗಿ ತುಂಗಮ್ಮನ ಪುವ ಇತಿಹಾಸವನ್ನು ಬರೆದರು. ಆ ಪುಟದಲ್ಲಿ ತನ್ನ ಹೆಸರಿನೆದುರು ತುಂಗಮ್ಮ ಇಂಗ್ಲಿಷಿನಲ್ಲಿ ಸಹಿ ಹಾಕಿದಳು. ಆಕೆಯ ಕಿವಿ-ಕೈಗಳಮೇಲಿದ್ದ ಅಲ್ಪ ಆಭರಣದ ಟಿಪ್ಪಣಿಯೂ ಆಯಿತು. ಆ ಕ್ರಿಯೆಗಳೆಲ್ಲ ಮುಗಿದ ಮೇಲೆ ಸರಸಮ್ಮ ಹೇಳಿದರು: "ಬಚ್ಚಲಿಗೆ ಹೋಗಿ ಮುಖ ತೊಳೆದುಕೊಂಡು ಬಾ ತುಂಗ. ಅತ್ತಿದ್ದು ಸಾಕಿನ್ನು." ತುಂಗಮ್ಮ ಬಚ್ಚಲುಮನೆಗೆ ಹೋದಮೇಲೆ ಜಲಜ ಕಣ್ಣು ತೆರೆದಳು.. ಆಕೆಗೆ ಎಚ್ಚರವಾಗಿತ್ತು.ಆ ಮಧ್ಯಾಹ್ನದ ನಿದ್ದೆಯಲ್ಲೂ ಆಕೆಗೊಂದು ಕನಸು ಬಿದ್ದಿತ್ತು.ಆ ಕನಸಿನಲ್ಲಿ, ಸುಂದರಿಯಾಗಿ ಅಲಂತಳಾಗಿದ್ದ ತುಂಗಮ್ಮನನ್ನೂ ಆಕೆಯ ಎತ್ತರದ ಯುವಕ ಪತಿರಾಯನನ್ನೂ ಜಲಜ ಕಂಡಿದ್ದಳು. ಆಗ ತುಂಗಮ್ಮನಿಗೆ ಬಸಿರು ಇರಲಿಲ್ಲ... ಆ ಕನಸು ಅಥ‍ವಾಗದೆ, ಇದೆಲ್ಲ ಎಷ್ಟೊಂದು ವಿಚಿತ್ರ ಎನ್ನುತ್ತ,ಜಲಜ ಬೆರಗು ನೋಟದಿಂದ ಬರಿಯ ಛಾವಣಿಯನ್ನೆ ನೋಡುತ್ತ ಮಲಗಿದಳು.