ಈ ಪುಟವನ್ನು ಪ್ರಕಟಿಸಲಾಗಿದೆ

ಅದಕ್ಕೆ ಕಾರಣ ಭಾರವಾದ ಹೃದಯ, ಭಾರವಾದ ಮೆದುಳು; ಓದುತ್ತ ಓದುತ್ತ ಸಂತೋಷಪಟ್ಟಿದ್ದೇನೆ; ದುಃಖಪಟ್ಟಿದ್ದೇನೆ ನಾನೀಗ ಇರುವುದು ಓದಿದ ಗುಂಗಿನಲ್ಲೇ ಎಂದರೆ ನೀವು ನಗಬಾರದು ತುಂಗಮ್ಮ, ಜಲಜ, ಲಲಿತ, 'ದೊಡ್ಡಮ್ಮ', ತುಂಗಮ್ಮನ ತಂದೆ, ಆ ನಾರಾಯಣ ಮೂರ್ತಿ, ಸೋಮಶೇಖರ---ನಿಮ್ಮ ಗುಬ್ಬಚ್ಚಿಗಳೂ ಕೂಡ-ಎಲ್ಲಾ ನನ್ನ ಮುಂದೆ ಜೀವಂತವಾಗಿ ಚಲಿಸುತ್ತಿರುವಂತೆ ಭಾಸವಾಗ್ತದೆ ಆ ಹುಡುಗಿಯರ ದುಸ್ಥಿತಿಗೆ ನಾನೂ ಯಾವರೀತಿಯಲ್ಲೂ ಕಾರಣನಲ್ಲವಷ್ಟೆ?---ಎಂದು ನನ್ನನ್ನು ನಾನೇ ಕೇಳಿಕೊಂಡೆ ಅವರನ್ನು ಸುಖಿಗಳಾಗಿ ಮಾಡಲು ನಾನು ಏನನ್ನಾದರೂ ಮಾಡಲಾರನೆ?--- ಎಂದು ನನ್ನಷ್ಟಕ್ಕೇ ಚಿಂತಿಸಿದೆ ನಮ್ಮ ಜೀವನದ ಒಂದಂಶವನ್ನು-ಸಾಮಾನ್ಯವಾಗಿ ಕಣ್ಣಿಗೆ ಬೀಳದ್ದನ್ನು ಈ ಪುಸ್ತಕದ ಮೂಲಕ ಕಾಣುವ ಹಾಗಾಯಿತು"

"ಇದೆಲ್ಲ ಮೆಚ್ಚುಗೆ ಟೀಕೆ ಇಲ್ಲವೆ?"

"ಅದೇನೋ!ಇಷ್ಟು ನನ್ನ ಮೊದಲ ಪ್ರತಿಕ್ರಿಯೆ ನಿಧಾನವಾಗಿ

ಯೋಚಿಸಿದರೆ ಕೆಲವು ಕೊರತೆಗಳು ತೋರಿದರೂ ತೋರಬಹುದು. ಇದು ಪರಿಪೂರ್ಣ ಕೃತಿ ಎಂದು ನೇವೇನೂ ಸಾಧಿಸುವುದಿಲ್ಲವಷ್ಟೆ?!"

"ಇಲ್ಲ! ಆಂಭ ಮೂಖ-ತನದ ಆರೋಪ ನನ್ನ ಮೇಲೆ ಹೊರಿಸ್ಬೇಡಿ."

"ನನಗೆ ಕೆಲವು ವಿವರಣೆ ಬೇಕು, ಕೇಳಲೆ?"

"ಅವಶ್ಯವಾಗಿ"

" ಈ ಕಾದಂಬರಿಯ ವಸ್ತು ನಿಮಗೆ ಹೇಗೆ ತೋಚಿತು?"

"ಅವೆಲ್ಲಾ ರಹಸ್ಯಗಳು!"

ಕಣ್ಣು ಕಿರಿಮಗೊಳಿಸಿ ನನ್ನನ್ನೆ ಅವರು ನೋಡಿದರು.

"ಓದುಗರಿಂದ ಏನನ್ನೂ ಬಚ್ಚಿಡಬೇಡಿ!"

ನನಗೆ ನಗುಬಂತು.

"ಖಂಡಿತ ಇಲ್ಲ ರಹಸ್ಯ ಅಂತ ತಮಾಷೆಗಂದೆ...ಬಸವನಗುಡಿಯ

ರತ್ನವಿಲಾಸ ರಸ್ತೆಯಲ್ಲೊಂದು ಅಭಯಾಶ್ರಮವಿತ್ತು ಹಿಂದೆ. ೧೯೫೦ ರಲ್ಲಿ ನನ್ನ ಸ್ನೇಹಿತರ ಸಂಬಂಧಿಕರೊಬ್ಬರು ಅಲ್ಲಿ ಅಧ್ಯಾಪಿಕೆಯಾಗಿದ್ದರು. ಒಂದು ಸಂಜೆ ಅವರನ್ನು ನೋಡಲೆಂದು ಸ್ನೇಹಿತರು ಅಲ್ಲಿಗೆ ಹೋದಾಗ ನಾನೂ