ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೧೨೧

ಅವಳ ಬಿಗಿ ಮುಷ್ಟಿಯಿಂದ ತಪ್ಪಿಸ್ಕೊಳ್ಳೋರೇ ಇಲ್ಲ. ಅವಳ ತೋಳು
ಹ್ಯಾಗಿದೆ ಅಂತೀರಿ!"
"ಈಗೆಲ್ಲಿ ಆ ಹುಡುಗಿ? ಇಲ್ಲೇ ಇದಾಳೇನು ?"
ಉತ್ತರ ಹೇಳುವ ಉತ್ಸಾಹವೇ ಜಲಜೆಗಿರಲಿಲ್ಲ. ಆದರೂ ಅಂದಳು:
"ಕೆಟ್ಟ ರೋಗ ಇತ್ತಂತೆ ಅವಳಿಗೆ. ಚಿಕಿತ್ಸೆಗೇಂತ ಒಂದ್ಸಲಿ ದೊಡ್ಡಮ್ಮ
ಆಕೇನ ಆಸ್ಪತ್ರೆಗೆ ಕರಕೊಂಡು ಹೋದ್ರು. ಅಲ್ಲೆ ಬಜಾರಿ ತಪ್ಪಿಸ್ಕೊಂಡು
ಓಡೋದ್ಲು."
ಎಲ್ಲಿಗೆ ಓಡಿಹೋದಳೆಂದು ಕೇಳಬೇಕಾದ್ದಿರಲಿಲ್ಲ ತುಂಗಮ್ಮನಿಗೆ
ಅರ್ಥವಾಗುತಿತ್ತು.
"ಹೋಗಲಿ ಆ ವಿಷಯ," ಎಂದಳು ಜಲಜ.
ಮುಂದೆ ಮಾತನಾಡಲು ಇನ್ನೊಂದು ವಿಷಯ ಸಿದ್ಧವಾಗಿತ್ತು. ಅದು
ಆರುತಿಂಗಳ ಹಿಂದೆ ಆ ಕೊರಡಿಯಲ್ಲಿ ಬಾಣಂತಿಯಾಗಿದ್ದ ಒಬ್ಬಾಕೆಗೆ
ಸಂಬಂಧಿಸಿದ್ದು. ಆಕೆ ಬಾಣಂತಿಯಾದ ಒಂದು ತಿಂಗಳಲ್ಲೆ ಯಾವನೋ
ಒಬ್ಬಬಂದು, ತಾಯಿ ಮತ್ತು ಮಗುವನ್ನು ತನ್ನಜತೆ ಕಳುಹಿಸಿಕೊಡ
ಬೇಕೆಂದು ಕೇಳಿದ್ದ ಆಕೆಯೂ "ಕಳಿಸ್ಕೊಡಿ ಅಮ್ಮಾವರೇ, ಓಗ್ತೀನಿ"
ಎಂದಿದ್ದಳು ದೊಡ್ಡಮ್ಮ ವಿರೋಧಿಸಿರಲಿಲ್ಲ
ಆದರೆ ಆ ವಿಷಯವನ್ನು ತುಂಗಮ್ಮನಿಗೆ ಹೇಳಬಹುದೆ-ಬಾರದೆ,
ಎಂದು ಕ್ಷಣಕಾಲ ಜಲಜ ಚಿಂತಿಸಿದಳು.
ದೊಡ್ಡಮ್ಮ ಆ ಬೆಳಿಗ್ಗೆ ಆಕೆಯೊಬ್ಬಳನ್ನೆ ಕರೆದು ಹೇಳಿದ್ದರಲ್ಲವೆ?
"ತುಂಗನ್ನ ಹುಷಾರಾಗಿ ನೋಡ್ಕೊ ಮಗೂ, ಒಳ್ಳೇ ಹುಡುಗಿ. ಆಕೆ
ಮನಸ್ಸು ನೋಯಿಸುವಂಥಾದ್ದು ಏನೂ ಹೇಳ್ಬೇಡ"
ಬಾಣಂತಿತನದ, ಮಗುವಿನ ತಂದೆಯ, ಮಾತನ್ನೆತ್ತಿದರೆ ತುಂಗಮ್ಮ
ನೊಂದುಕೊಳ್ಳಬಹುದೆಂಬ ತೀರ್ಮಾನಕ್ಕೆ ಬಂದು ಆ ವಿಷಯವನ್ನೆ ಜಲಜ
ಬಿಟ್ಟುಕೊಟ್ಟಳು.
ಆಕೆ ಹೊರಹೋಗಿ ಬಿಸಿಲಲ್ಲಿ ಒಣಗುಹಾಕಿದ್ದ ತೆಳ್ಳಗಿನ ಹಾಸಿಗೆ
ಯನ್ನು ಎತ್ತಿತಂದು, ಚಾಪೆಯಮೇಲೆ ಅದನ್ನು ಹಾಸಿದಳು. ಅದು ಹಿಂದಿನ
ರಾತ್ರೆ ಆಕೆ ಮಲಗಿದ್ದ ಹಾಸಿಗೆ. ದೊಡ್ಡಮ್ಮನ ಕೊಠಡಿಗೆ ಹೋಗಿ ಮಡಿ