ಈ ಪುಟವನ್ನು ಪ್ರಕಟಿಸಲಾಗಿದೆ

ಮಾಡಿರಿಸಿದ್ದ ಬಿಳಿಯ ಮೇಲು ಹೊದಿಕೆಯನ್ನು ತಂದು ಹಾಸಿಗೆಯ ಮೇಲೆ ಬಿಡಿಸಿದಳು.

"ಅಕ್ಕಾ, ಇವತ್ನಿಂದ ಇದು ನಿನ್ನಹಾಸಿಗೆ."

ಜಲಜ ಮಾಡುತಿದ್ದುದನ್ನೆಲ್ಲ ಮೌನವಾಗಿ ನೋಡುತಿದ್ದಳು ತುಂಗಮ್ಮ.

"ನಿನಗೆ?"

"ನನಗೆ ಚಾಪೆಯಿದೆ. ಅದರ ಮೇಲೆ ನನ್ನ ಹಳೇ ಎರಡು ಸೀರೆ ಮಡಚಿ ಹಾಸ್ಕೋತೀನಿ-ಎಲ್ಲರಹಾಗೆ."

ತುಂಗಮ್ಮನಿಗೆ ಅರ್ಥವಾಗಲಿಲ್ಲ.

"ಈ ಅಕ್ಕನಿಗೆ ಏನೂ ತಿಳಿಯೋಲ್ಲ," ಎಂದು ಜಲಜ ನಕ್ಕಳು."ನಾವು ಯಾರೂ ಹಾಸಿಗೆ ಮೇಲೆ ಮಲಗೋಲ್ಲ ಅಕ್ಕ ಜ್ವರ ಬಂದವರಿಗೆ ಮತ್ತು ಬಾಣಂತಿಯಾಗೋರಿಗೆ ಮಾತ್ರ ಹಾಸಿಗೆ"

ತಾನು ಗರ್ಭಿಣಿಯೆಂದು ತನಗೆ ದೊರೆಯುತಿದ್ದ ವಿಶೇಷ ಸಹಾನುಭೂತಿಯನ್ನೂ ಸೌಕರ್ಯವನ್ನೂ ಕಂಡು ತುಂಗಮ್ಮನಿಗೆ ಸಂಕೋಚವೆನಿಸಿತು.

....ಅಧ್ಯಾಪಿಕೆ ರಾಜಮ್ಮ ಬಂದೊಡನೆ ಜಲಜ ಪೆನ್ಸಿಲು-ಪುಸ್ತಕ ಎತ್ತಿಕೊಂಡು ತರಗತಿಗೆ ಹೋದಳು ತುಂಗಮ್ಮ, ದೊಡ್ಡಮ್ಮನ ಕೊಠಡಿಯಿಂದೊಂದು ಕತೆ ಪುಸ್ತಕ ತಂದು ಓದುತ್ತ ಕುಳಿತಳು.

....ತುಂಗಮ್ಮನನ್ನು ಬೆರಗುಗೊಳಿಸಿದ ಇನ್ನೊಂದು ವಿಷಯ ಆ ಮಧ್ಯಾಹ್ನ ಊಟದ ಹೊತ್ತಿಗೆ ನಡೆಯಿತು.

ಪ್ರತಿಯೊಬ್ಬರೂ ತಮ್ಮ ತಮ್ಮ ತಟ್ಟೆಯನ್ನೆತ್ತಿಕೊಂಡುಬಂದು ಸಾಲಾಗಿ ಕುಳಿತರು. ಜಲಜ, ತನ್ನ ಮತ್ತು ತುಂಗಮ್ಮನ ತಟ್ಟೆಗಳನ್ನು ತೊಳೆದು ತಂದಳು. ತುಂಗಮ್ಮನಿಗೆ ಕಾಣಿಸದಂತೆ ನಸುನಕ್ಕು, ಸ್ವಲ್ಪ ನಜ್ಜಿಹೋಗಿದ್ದ ತಟ್ಟೆಯನ್ನೇ ಆಕೆಯ ಮುಂದಿಟ್ಟಳು. ಈ ಹೊತ್ತು ಮೂಗಿ ಕಲ್ಯಾಣಿ ಕುಳಿತವರಲ್ಲಿ ಒಬ್ಬಾಕೆ ಮಾತ್ರ.

ಈ ದಿನದಿಂದ ಅಡುಗೆಯ ಭಾರ ಹೊತ್ತವರ ಮುಖ್ಯಸ್ಥೆ ಲಲಿತಾ. ಆಕೆ ಸೆರಗನ್ನು